ಬುಡಕಟ್ಟು ಸಂಸ್ಕೃತಿ ಆಚರಣೆ ಅನಾವರಣ ಕಾಟವ್ವನಹಳ್ಳಿ ದಾಸರಗಿಡ್ಡಯ್ಯನಹಟ್ಟಿ ಗ್ರಾಮಸ್ಥರ ಸಮ್ಮುಖದಲ್ಲಿ ಸಂಭ್ರಮದ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ.
ನಾಯಕನಹಟ್ಟಿ:: ಬುಡಕಟ್ಟು ಸಂಸ್ಕೃತಿಯ ಆಚರಣೆಯಂತೆ ಪ್ರತಿ ವರ್ಷ ಈ ವರ್ಷವೂ ಸಹ ಶ್ರೀ ದುರ್ಗಾಂಬಿಕ ದೇವಿ ಜಾತ್ರೆಯನ್ನು ಬುಧವಾರ ಕಾಟವ್ವನಹಳ್ಳಿ ದಾಸರಗಿಡ್ಡಯ್ಯನಹಟ್ಟಿ ಗ್ರಾಮಸ್ಥರು ಅದ್ದೂರಿಯಾಗಿ ಆಚರಿಸಿದ್ದರು.
ಹೋಬಳಿಯ ನೇರಲಗುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಟವ್ವನಹಳ್ಳಿ ದಾಸರಗಿದ್ದೆನಹಟ್ಟಿ ಗ್ರಾಮಗಳ ಗ್ರಾಮದ ಆರಾಧ್ಯ ದೇವತೆ ಶ್ರೀ ದುರ್ಗಾಂಬಿಕ ದೇವಿ ಜಾತ್ರೆಯನ್ನು.
ಡಾ. ನಾಗರಾಜ್ ಸಹಾಯಕ ಪ್ರಧ್ಯಾಪಕರು ಮಾತನಾಡಿದರು ಬುಡಕಟ್ಟು ಜನರು ಅತಿ ಹೆಚ್ಚು ಇರುವುದರಿಂದ ಗ್ರಾಮದ ಆರಾಧ್ಯ ದೇವತೆ ಶ್ರೀ ದುರ್ಗಾಂಬಿಕ ದೇವಿ ಜಾತ್ರೆಯನ್ನು ಪ್ರತಿ ವರ್ಷ ನಮ್ಮ ಗ್ರಾಮದಲ್ಲಿ ಬುಡಕಟ್ಟು ಸಂಸ್ಕೃತಿ ಸುಮಾರು ವರ್ಷಗಳಿಂದ ನಾಲ್ಕು ದಿನಗಳ ಕಾಲ ಹಿಡಿಯುವ ಈ ಜಾತ್ರೆ ಶ್ರೀ ದುರ್ಗಾಂಬಿಕೆ ದೇವಿಯು ಎಲ್ಲರಿಗೂ ಒಳಿತನ್ನು ಬಯಸುವ ಜಾತ್ರೆ ಇದು ಗ್ರಾಮ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಜನ ಜಾನುವಾರಗಳ ಆರೋಗ್ಯ ಮತ್ತು ಉತ್ತಮ ಮಳೆ ಬೆಳೆ ನೀಡಿ ಕಾಪಾಡಲಿ ಎಂದರು.
ಮಾಜಿ ಗ್ರಾಮ ಪಂಚಾಯತಿ ಸದಸ್ಯ ಅಜ್ಜನಬೋರಯ್ಯ ಮಾತನಾಡಿದರು. ಕಾಟವ್ವನಹಳ್ಳಿ ದಾಸರಗಿಡ್ಡಯ್ಯನಹಟ್ಟಿ ಎರಡು ಗ್ರಾಮಗಳ ಗ್ರಾಮಸ್ಥರು ಆಚರಿಸುವ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಇದು ಪ್ರತಿ ವರ್ಷ ಶಿವರಾತ್ರಿ ಅಮಾವಾಸ್ಯೆ ನಾಲ್ಕೈದು ದಿನಗಳ ನಂತರ ಪ್ರತಿ ವರ್ಷ ಜಾತ್ರೆಯನ್ನು ಆಚರಣೆ ಮಾಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ನೇರಲಗುಂಟೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪಿ .ಈರಣ್ಣ,ಜಿ.ಎಸ್ ಗೌಡ್ರು ಪಾಲಯ್ಯ, ಪಶುಸಂಗೋಪನೆ ಇಲಾಖೆ ನಿವೃತ್ತ ಆರ್ ರಂಗಪ್ಪ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಲಿ ಸದಸ್ಯರು ಶ್ರೀಮತಿ ಸುಷ್ಮಾ ಸುರೇಶ್ ನಾಯಕ, ಸಿಡಿಪಿಒ ನಿವೃತ್ತ ಅಧಿಕಾರಿ ಎಸ್ ಚನ್ನಪ್ಪ, ಗ್ರಾಮ್ ಪಂಚಾಯತಿ ಮಾಜಿ ಅಧ್ಯಕ್ಷೆ ದಡ್ಡಮ್ಮ ಚಂದ್ರಪ್ಪ, ಟಿ. ಚಂದ್ರಣ್ಣ, ಎಸ್ ಸೂರಯ್ಯ, ತಿಪ್ಪಯ್ಯ, ಜಿ.ಎಸ್. ಪ್ರದೀಪ್, ಸೇರಿದಂತೆ ಕಾಟವ್ವನಹಳ್ಳಿ ದಾಸರಗಿಡ್ಡಯ್ಯನಹಟ್ಟಿ ಗ್ರಾಮಸ್ಥರು ಭಕ್ತಾದಿಗಳು ಉಪಸ್ಥಿತರಿದ್ದರು

