ಚಳ್ಳಕೆರೆ :
ನರೇಗಾ ಯೋಜನೆಯು ಇಂದಿಗೆ 20 ವರ್ಷಗಳಾಯ್ತು ಈಗ ಅನೇಕ ಬದಲಾವಣೆಯನ್ನು ಹೊತ್ತು ತಂದಿದೆ ಎಂದು ಜಿಲ್ಲಾ ಪಂಚಾಯಿತಿಯ ಉಪಕಾರ್ಯದರ್ಶಿಗಳಾದ ಕೆ. ತಿಮ್ಮಪ್ಪ ಅಭಿಪ್ರಾಯ ಪಟ್ಟರು.
ಅವರು ನಗರದ ತಾಲ್ಲೂಕು ಪಂಚಾಯತ ಸಭಾಂಗಣದಲ್ಲಿ ತಾಲ್ಲೂಕಿನ ತಾಂತ್ರಕ ಸಹಾಯಕರಿಗೆ, ಭಿ ಎಫ್ ಟಿ ಗಳಿಗೆ ಹಾಗೂ ಗ್ರಾಮ ಕಾಯಕ ಮಿತ್ರರವರಿಗೆ ಹಾಗೂ ಸಿಬ್ಬಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು,
ಎನ್ ಎಮ್ ಎಮ್ ಎಸ್ ತಂತ್ರಾಂಶದಲ್ಲಿ ತಲೆ ಎಣಿಸುವ ಹೊಸ ಪ್ರಯೋಗ
ನರೇಗಾ ಯೋಜನೆಯಲ್ಲಿ ಜಾಬ್ ಕಾರ್ಡ್ ಹೊಂದಿರುವ ಕೂಲಿಕಾರರು ಪ್ರಮುಖ ಪಾತ್ರ ವಹಿಸುತ್ತಾರೆ, ಗ್ರಾಮೀಣ ಪ್ರದೇಶದ ಜನರಿಗೆ ನರೇಗಾ ವರದಾನವಾಗಿದ್ದು, ಇದರಿಂದ ಗುಳೆ ಹೋಗುವ ಪದ್ದತಿ ತಪ್ಪಿದಂತಾಗಿ ಇರುವಲ್ಲೆ ಕೆಲಸ ಪಡೆದು ಜೀವನ ಸಾಗಿಸುತ್ತಿದ್ದಾರೆ ಎಂದರು.
ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಶಿಧರ್.ಎಚ್ ಮಾತನಾಡಿ,
ಎನ್ ಎಮ್ ಎಮ್ ಎಸ್ ತಂತ್ರಾಂಶದಲ್ಲಿ ತಲೆ ಎಣಿಸುವ ಹೊಸ ಪ್ರಯೋಗ
ನರೇಗಾ ಯೋಜನೆಯಲ್ಲಿ ಜಾಬ್ ಕಾರ್ಡ್ ಹೊಂದಿರುವ ಕೂಲಿಕಾರರು ಪ್ರಮುಖ ಪಾತ್ರ ವಹಿಸುತ್ತಾರೆ. ಇವರು ಕೆಲಸ ನಿರ್ವಹಿಸಿ ಕೂಲಿ ಹಣ ಪಡೆಯುವಲ್ಲಿ ಇವರ ಹಾಜರಾತಿಯು ಬಹಳ ಪ್ರಮುಖ ಪಾತ್ರ ವಹಿಸುತ್ತದೆ.ಅದುದರಿಂದ ಹಾಜರಾತಿ ನೀಡುವಾಗ ತಲೆಗಳನ್ನು ಎಣಿಸುವ ಪ್ರಕ್ರಿಯೆ ಅರಂಭವಾಗಿದ್ದು, ಹಣ ಪಾವತಿಸುವಲ್ಲಿ ಕೂಲಿಕಾರರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂಬುದಾಗಿ ತಿಳಿಸಿದರು.
ತಾಲ್ಲೂಕು ಪಂಚಾಯತ
ಸಹಾಯಕ ನಿರ್ದೇಶಕರಾದ ಸಂತೋಷ್ ಟಿ.ಎಚ್ ಮಾತನಾಡಿ, ನೇರವಾಗಿ ಕೂಲಿಕಾರರ ಖಾತೆಗೆ ಕೂಲಿ ಜಮಾವಾಗುವ ವ್ಯವಸ್ಥೆಯನ್ನು ಹೊಂದಿದ್ದು,ಕೆಲಸ ನಿರ್ವಹಿಸಿದ ಕೂಲಿಕಾರರಿಗೆ ಯಾವಯದೇ ರೀತಿಯಲ್ಲಿ ಕೂಲಿ ವಿಳಂಭ ಹಾಗೂ ಇತರೆ ತೊಂದರಯಾಗುತ್ತಿಲ್ಲ , ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಸ್ಪಂಧನೆ ಇದೆ ,
ಎನ್ ಎಮ್ ಎಮ್ ಎಸ್ ತಂತ್ರಾಂಶದಲ್ಲಿ ಲೋಪವಾಗದಂತೆ ನೋಡಿಕೊಳ್ಳಿ, ಮಹಾತ್ಮ ಗಾಂಧಿ ರಾಷ್ರ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೂಲಿಕಾರರಿಗೆ ಹಾಜರಾತಿಯನ್ನು ಎನ್ ಎಮ್ ಎಮ್ ಎಸ್ ತಂತ್ರಾಂಶದಲ್ಲಿ ಹಾಜರಾತಿ ಪಡೆಯುವಾಗ ಎಚ್ಚರಿಕೆಯಿಂದ ಸೆರೆ ಹಿಡಿಯುವಂತೆ ಮಾಹಿತಿ ನೀಡಿದರು.
ಈ ಸಮಯದಲ್ಲಿ ಜಿಲ್ಲಾ ಪಂಚಾಯಿತಿಯ ಎ.ಡಿ.ಪಿ.ಸಿ ಮೋಹನ್ ,.ಮೊಳಕಾಲ್ಮೂರು ತಾಲ್ಲೂಕಿನ ಸಹಾಯಕ ನಿರ್ದೇಶಕರಾದ ಗಣೇಶ್,ತಾಂತ್ರಿಕ ಸಂಯೋಜಕರಾದ ದಿನೇಶ್,ಮಂಜುನಾಥ್, ಪ್ರಶಾಂತ್ ,ಐ.ಇ.ಸಿ ಸಂಯೋಜಕರಾದ ಪ್ರವೀಣ್ ರವರು,ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲ್ಲೂಕಿನ ತಾಂತ್ರಿಕ ಸಹಾಯಕರು ಭಿ ಎಫ್ ಟಿ ಗಳಿಗೆ ಹಾಗೂ ಗ್ರಾಮ ಕಾಯಕ ಮಿತ್ರರವರು ಬಾಗವಹಿಸಿದ್ದರು.

