ಚಳ್ಳಕೆರೆ :
ಗುರುವಿನ ಗುಲಾಮನಾಗುವ ತನಕ
ದೊರೆಯದಣ್ಣ ಮುಕುತಿ, ಈ ಸಾಲು ನಮ್ಮ ಸಂಸ್ಕೃತಿಯಲ್ಲಿ ಗುರುವಿಗೆ ಇರುವ ಮಹತ್ವವನ್ನು ತಿಳಿಸುತ್ತದೆ. ಒಬ್ಬ ಮನುಷ್ಯ ಗುರುವಿನ ಮಾರ್ಗದರ್ಶನವಿಲ್ಲದೆ ಸರಿಯಾದ ಹಾದಿಯಲ್ಲಿ ಸಾಗಿ ಆತ್ಮೋನ್ನತಿ ಹೊಂದಲಾರ ಎಂದು ಡಿವೈಎಸ್ಪಿ ಟಿ.ಬಿ.ರಾಜಣ್ಣ ಹೇಳಿದರು.
ತಾಲ್ಲೂಕಿನ ರೇಣುಕಾಪುರ ಗ್ರಾಮದ ಶ್ರೀರೇಣುಕಾದೇವಿ ಪ್ರೌಢಶಾಲೆಯಲ್ಲಿ ನೂತನ ಶಾಲಾ ಕೊಠಡಿ ಉದ್ಘಾಟನೆ ಮತ್ತು ಹಳ್ಳೆಯ ವಿದ್ಯಾರ್ಥಿಗಳಿಂದ ಗುರುವಂದನ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಉದ್ಘಾಟನೆಯನ್ನ ನೆರೆವೇರಿಸಿ ಮಾತನಾಡಿ..ಶಿಕ್ಷಕರೆಂದರೆ ಪಾಠ ಭೋದಿಸುವವರು ಮಾತ್ರವಲ್ಲ. ಸನ್ಮಾರ್ಗದಲ್ಲಿ ನಡೆಯುವಂತೆ ದಾರಿ ತೋರುವ
ಮಾರ್ಗದರ್ಶಕರು.
ಪಠ್ಯದ ಜತೆಗೆ ಜೀವನ ಮೌಲ್ಯ ತುಂಬುವ ಗುರುಗಳು ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುತ್ತಾರೆ. ಇದೇ ಕಾರಣಕ್ಕೆ ನಮ್ಮ ಸಂಸ್ಕೃತಿಯಲ್ಲಿ ಶಿಕ್ಷಕರಿಗೆ ಮಹತ್ವದ ಸ್ಥಾನ ಕಲ್ಪಿಸಲಾಗಿದೆ. ಗುರುವನ್ನು ದೇವರಿಗೆ ಹೋಲಿಸಲಾಗುತ್ತದೆ.
ಇಂತಹ ವಿದ್ಯೆ ಕಲಿಸಿದ ಗುರುಗಳನ್ನ ನೆನೆಯುವಂತಹ ಕಾರ್ಯ ಸ್ಲಾಗನಿಯ ಎಂದರು. ಶಾಲಾ ಕೊಟ್ಟಡಿ ಉದ್ಘಾಟಿಸಿ ಮಾತನಾಡಿ ಬಿಇಓ ಕೆಎಸ್ ಎಸ್ ಸುರೇಶ್ ಶಿಕ್ಷಣ ಕಳಿತಂತ ಹೋದಂತೆಲ್ಲ ಜ್ಞಾನವು ಸಹ ಅಭಿವೃದ್ಧಿಯಾಗುತ್ತದೆ.. ಜೊತೆಗೆ ಜೀವನದ ಮೌಲ್ಯಗಳನ್ನು ಕಲಿದಂತಾಗುತ್ತದೆ.
ಶಿಕ್ಷಣ ಇಲಾಖೆ ಶಿಕ್ಷಣಕ್ಕೆ ಸಾಕಷ್ಟು ಮಹತ್ವ ನೀಡುತ್ತಿದೆ. ಇಂತಹ ಶಿಕ್ಷಣಕ್ಕೆ ಆದ್ಯತೆ ನೀಡಿ ಪ್ರತಿಯೊಬ್ಬರ ಶಿಕ್ಷಣದತ್ತ ಮುಖ ಮಾಡಿ ಶಿಕ್ಷಣಕ್ಕೆ ಇರುವಂತಹ ಶಕ್ತಿಯನ್ನು ಕಂಡುಕೊಳ್ಳಿ ಶಿಕ್ಷಕರ ಶಿಲ್ಪಿಗಳಿದಂತೆ ಒಬ್ಬ ಶಿಲ್ಪಿ ಒಂದು ಕಲ್ಲನ ಕೆತ್ತಿ ಶಿಲೆಯನ್ನ ನಿರ್ಮಾಣ ಮಾಡಿ ಕಲ್ಲಿಗೆ ಒಂದು ಒಂದು ಶಕ್ತಿ ತುಂಬುತ್ತಾರೆ.ಶಿಕ್ಷಕರ ಸಹ ಮಕ್ಕಳನ್ನ ಕಲ್ಲಿನತೆ ತಿದ್ದಿ ತಿಡಿ ಶಿಕ್ಷಣವಂತ್ತನಾಗಿ ಮಾಡುತ್ತಾರೆ . ಇತಂಹ ಶಿಕ್ಷಕರ ನಾವು ಸದಾ ನೆನೆಯಬೇಕು ಅವರು ಕೊಡುವ ಆಶದಂತೆ ಸನ್ಮಾರ್ಗದಲ್ಲೆ ನಡೆಯಬೇಕು ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶ ಡಾ.ಬಿ.ಮಂಜುನಾಥ ಮಾತನಾಡಿ. ಇತ್ತೀಚಿನ ದಿನಗಳಲ್ಲಿ ಶಿಕ್ಷಣದ ಮೌಲ್ಯ ಕುಸಿಯುತಿದ್ದು 12ನೇ ಶತಮಾನದಲ್ಲಿ ಬಸವಣ್ಣರವರು ತನ್ನನ್ನು ತಾನು ಅರಿಯುವುದೇ ವಿದ್ಯೆ ಜ್ಞಾನ .ತನ್ನಲ್ಲಿ ಏನಿದೆ ಎಂಬುದನ್ನು ಹರಿಯಬೇಕು ತಾನು ಮಾಡಬೇಕಾದಂತಹ ಕರ್ತವ್ಯಗಳನ್ನ ಚಾಚು ತಪ್ಪದೇ ಮಾಡಬೇಕು ಇಂತಹ ಉತ್ತಮ ಶಿಕ್ಷಣ ಮ ಮೌಲ್ಯಗಳನ್ನು ಬಿತ್ತಬೇಕು ತನ್ನ ಅಂಕು ಡೊಂಕುಗಳನ್ನು ತಿದ್ದಿಕೊಳ್ಳುವುದೇ ಒಂದು ಶಿಕ್ಷಣವಾಗಿದೆ ಶಿಕ್ಷಣವನ್ನ ಚಾಚು ತಪ್ಪದೇ ಪಾಲಿಸಬೇಕಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಇದೇ ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಕಾಡುಗೋಲರ ಸಂಘದ ರಾಜಣ್ಣ ಶಿಕ್ಷಕರಾದ ಪಾಲಣ್ಣ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ರೇಣುಕಾ ದೇವಿ ಪ್ರೌಢಶಾಲೆಯ ಮುಖ್ಯಸ್ಥರಾದ ನೇತ್ರಾವತಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಜಾನಪ. ನೌಕರ ಸಂಘದ ತಾಲೂಕು ಅಧ್ಯಕ್ಷರಾದ ಸಿಟಿ ವೀರೇಶ್ ,ಪಿಡಿಓ ಶಶಿರಾಜ್. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.

