ಚಳ್ಳಕೆರೆ : ವಿಜ್ಞಾನ ದಿನಾಚರಣೆ ಅಂಗವಾಗಿ ಇಂದು ಚಳ್ಳಕೆರೆ ತಾಲೂಕಿನ ಡಿಆರ್ ಡಿಓ ದ ಇಂಡಿಯನ್ ಆಫ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಗೆ ಮಕ್ಕಳನ್ನು ಬೇಟಿ‌ ಮಾಡಿಸಿ ವಿಜ್ಞಾನ ವಸ್ತು ಪ್ರದರ್ಶನ ಮಾಡಿಸಲಾಯಿತು.

ಹೌದು ಚಳ್ಳಕೆರೆ ನಗರದ ಹೊಂಗಿರಣ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲಾ ಮಕ್ಕಳನ್ನು ಫೆ.28 ರಂದು ಸುಮಾರು 240 ಜನ ವಿದ್ಯಾರ್ಥಿಗಳನ್ನು ವಿಜ್ಞಾನ ವಸ್ತು ಪ್ರದರ್ಶನಕ್ಕೆ ಕರೆತಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಏರ್ಪಡಿಸಿದಂತಹ ವಸ್ತು ಪ್ರದರ್ಶನ ನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿತ್ತು ಎಂದು ಹೊಂಗಿರಣ ಇಂಟರ್ನ್ಯಾಷನಲ್ ಶಾಲೆಯ ಮುಖ್ಯ ಶಿಕ್ಷಕ ಡಿವಿ.ಪ್ರಸಾದ್ ಹೇಳಿದರು.

ಇಲ್ಲಿನ ತಾಂತ್ರಿಕ ವಿಜ್ಞಾನಿಗಳು ಮಕ್ಕಳಿಗೆ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಡ್ರೋನ್ ಮಾದರಿಗಳು ಹಾಗೂ ಕೃಷಿಗೆ ಸಂಬಂಧಿಸಿದಂತಹ ದೊಡ್ಡ ದೊಡ್ಡ ಡ್ರೋನ್ ಮಾದರಿಗಳನ್ನು ಪ್ರಾಯೋಗಿಕವಾಗಿ ಉಪಯೋಗಿಸುವುದರ ಮೂಲಕ ಸ್ಥಳದಲ್ಲಿ ಮಕ್ಕಳಿಗೆ ಸವಿ ವಿವರವಾಗಿ ಮಾಹಿತಿ ತಿಳಿಸಿದರು , ಇನ್ನೂ ರಾಕೆಟ್ ಲಾಂಚ್ ಮಾಡುವ ಸ್ಥಳವನ್ನು ಹಾಗೂ ರಾಕೆಟ್ ಉಡಾವಣೆಯ ಎಲ್ಲಾ ಹಂತಗಳನ್ನು ಮಕ್ಕಳಿಗೆ ತಿಳಿಸಿದರು , ಹೀಗೆ ವಿಜ್ಞಾನ ದಿನಚರಣೆ ಅಂಗವಾಗಿ ಶಾಲೆಯ ಎಲ್ಲಾ ಮಕ್ಕಳಿಗೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ವರದಾನವಾಗಿತ್ತು ಎಂದು ಹೇಳಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಹೊಂಗಿರಣ ಇಂಟರ್ನ್ಯಾಷನಲ್ ಶಾಲೆಯ ಮುಖ್ಯ ಶಿಕ್ಷಕ ಡಿವಿ ಪ್ರಸಾದ್, ಶಿಕ್ಷಕರಾದ ಶೈಲಜಾ ,ಸಿದ್ದೇಶ್, ಶಾಂತಕುಮಾರ್, ಮಾಲಿನಿ, ಜಗದೀಶ್ , ಪ್ರಿಯಾಂಕಾ, ನಾಗರಾಜ್ ಇನ್ನಿತರರು ಹಾಗೂ ಮಕ್ಕಳು ಭಾಗವಹಿಸಿದ್ದರು.

About The Author

Namma Challakere Local News
error: Content is protected !!