ಚಳ್ಳಕೆರೆ :
ಇಡೀ ತಾಲೂಕಿನಲ್ಲಿ ಪ್ರಪ್ರಥಮ ಬಾರಿಗೆ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ನಿರ್ಮಿಸಿರುವುದು ಶ್ಲಾಘನೀಯ,
ಚಳ್ಳಕೆರೆ ನಗರದ ಶಿವನಗರದಲ್ಲಿ ಶ್ರೀ ಮಹಾಲಕ್ಷ್ಮಿ ದೇವಿ ಪ್ರತಿಷ್ಠಾಪನ ಮಹೋತ್ಸವ ಇದೇ ಮಾರ್ಚ್ 7ರಿಂದ ಮಾರ್ಚ್ 9 ರವರೆಗೆ ಮೂರು ದಿನಗಳ ಕಾಲ ನಡೆಯುವ ಶ್ರೀ ಮಹಾಲಕ್ಷ್ಮಿ ದೇವಿ ಪ್ರತಿಷ್ಠಾಪನ ಕಾರ್ಯಕ್ರಮಕ್ಕೆ ಸರ್ವ ಭಕ್ತಾದಿಗಳು ಆಗಮಿಸಿ ದೇವಿ ಕೃಪೆಗೆ ಪಾತ್ರರಾಗಬೇಕು ಎಂದು ಸಮಿತಿಯ ಸಂಚಾಲಕರಾದ ಬಿಸಿ. ಸಂಜೀವ್ ಮೂರ್ತಿ ಕರೆ ನೀಡಿದರು.
ನಗರದ ಶಿವಾನಗರದ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು
ಮೂರು ದಿನಗಳ ಕಾಲನಡೆಯುವ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಉದ್ಘಾಟನೆ ಗೆ ಸರ್ವ ಭಕ್ತಾಧಿಗಳು ಹಾಗೂ
ಮಾರ್ಚ್ 9 ಭಾನುವಾರದಂದು ದೇವಾಲಯದ ಮಹೋತ್ಸವ ಕಾರ್ಯಕ್ರಮಕ್ಕೆ ಸದ್ಗುರು ಕಬೀರ್ ನಂದ ಆಶ್ರಮದ ಶ್ರೀ ಶಿವಲಿಂಗಾನಂದ ಮಹಾಸ್ವಾಮಿಜಿಯವರು ಮುಖ್ಯ ಅತಿಥಿಗಳಾಗಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಗೋವಿಂದ ಎಂ ಕಾರಜೋಳ, ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾದ ಡಿ ಸುಧಾಕರ್, ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ, ಹೊಳಲ್ಕೆರೆ ಕ್ಷೇತ್ರದ ಶಾಸಕ ಎಂ ಚಂದ್ರಪ್ಪ , ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಶಾಸಕ ಕೆ ಸಿ ವೀರೇಂದ್ರ ಪಪ್ಪಿ , ವಿಧಾನ ಪರಿಷತ್ ಸದಸ್ಯರಾದ ಕೆ ಎಸ್ ನವೀನ್, ಆಗಮಿಸುವರು ಎಂದು ತಿಳಿಸಿದ್ದಾರೆ.
ಮೂರು ದಿನಗಳ ಕಾಲ ನಡೆಯುವ ಶ್ರೀ ಮಹಾಲಕ್ಷ್ಮಿ ದೇವಿ ಪ್ರಾಣ ಪ್ರತಿಷ್ಠಾಪನ ಮಹೋತ್ಸವಕ್ಕೆ ಸಮಿತಿಯ ಗೌರವಾಧ್ಯಕ್ಷರಾದ ಟಿ ಪ್ರಭುದೇವ್, ಅಧ್ಯಕ್ಷರಾದ ನಾಗರಾಜ್, ನಗರಸಭೆ ಸದಸ್ಯ ಸಾವಿತ್ರಮ್ಮ ,ಮುಖ್ಯ ಅತಿಥಿಗಳಾಗಿ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಾ. ಅನಂತರಾಮ್, ಗೌತಮ್ , ವೀರಶೈವ ಸಮಾಜದ ಅಧ್ಯಕ್ಷರಾದ ಕೆಸಿ ನಾಗರಾಜ್, ಅರವಿಂದ, ಕಾಮರ್ಸ್ ಅಧ್ಯಕ್ಷರಾದ ಎ ರಘುನಾಥ ಬಾಬು , ಉಪಸ್ಥಿತಿಯಾಗಿ ಮಹಾಲಕ್ಷ್ಮಿ ದೇವಸ್ಥಾನ ಸೇವಾ ಸಮಿತಿ ಸಂಚಾಲಕರಾದ ಬಿಸಿ ಸಂಜೀವ್ ಮೂರ್ತಿ, ವಿಜಯೇಂದ್ರ, ಕೆಪಿ ನಾಗಭೂಷಣ ಶೆಟ್ಟಿ, ವೆಂಕಟನಾರಾಯಣ, ಕೆಟಿಬಾಬು, ಜಿ ಯಶೋಧ , ಪ್ರಕಾಶ್,
ಕುಮಾರ್, ರಮ್ಯಾ, ಧನಲಕ್ಷ್ಮಿ , ಜ್ಯೋತಿ ನಳಿನ ಇತರರು ಪಾಲ್ಗೊಂಡಿದ್ದರು.