ಚಳ್ಳಕೆರೆ : ಮುಸ್ಲಿಂ ಬಾಂಧವರು ಆಚರಿಸುವ ಉರುಸ್ ಸಂಭ್ರಮದಲ್ಲಿ ಯುವಕರ ಮಧ್ಯ ಗಲಾಟೆಯಾಗಿ ಪೋಲಿಸ್ ಠಾಣೆ ಮೆಟ್ಟಿಲೆರಿರುವ ಘಟನೆ ಜರುಗಿದೆ.
ಹೌದು ಚಳ್ಳಕೆರೆ ನಗರದಲ್ಲಿ ಫೆ.27 ರಂದು ನಗರದ ಹಲವು ವಾರ್ಡ್ ಗಳಲ್ಲಿ ವಾಸಿಸುವ ಮುಸ್ಲಿಂ ಭಾಂಧವರು, ಉರುಸ್ ಹಬ್ಬದ ಅಂಗವಾಗಿ ತಮ್ಮ ತಮ್ಮ ವಾರ್ಡ್ಗಳ ಯುವಕರು ಸೌಂಡ್ ಸಿಸ್ಟಮ್ ನೊಂದಿಗೆ ಗರೀಬ್ ಸಾಬ್ ಮಠಕ್ಕೆ ಸಂಭ್ರಮದಿಂದ ಆಗಮಿಸುವುದು ವಾಡಿಕೆ ಅದರಂತೆ ಸಂಜೆ ವೇಳೆಗೆ ಎಲ್ಲಾ ವಾರ್ಡ ಗಳ ಯುವಕರು ಯಜಮಾನರು ಸೇರಿಕೊಂಡು ಮೆರವಣಿಗೆಯೊಂದಿಗೆ ಸಾಗುತ್ತಿರುವ ಸಂಧರ್ಭದಲ್ಲಿ ಉಡಿಸಲಮ್ಮ ಗುಡಿ ಸಮೀಪದ ರಸ್ತೆಯಲ್ಲಿ ಯುವಕರ ಮಧ್ಯೆ ಚಿಕ್ಕದಾಗಿ ಗಲಾಟೆ ಶುರುವಾಗಿ ಅದು ಬ್ಲೆಡ್ ಹಾಕುವ ಹಂತಕ್ಕೆ ಹೋಗಿದೆ ಇನ್ಮೂ ಕೆಲವರು ಯುವಕರ ಗುಂಪನ್ನು ಚದುರುಸಿ ಗಲಾಟಿ ಬಿಡಿಸಿ ಆಸ್ಪತ್ರೆಗೆ ಇಬ್ಬರನ್ನು ರವಾನಿಸಿದ್ದಾರೆ,
ಉರುಸ್ ಸಂಭ್ರಮದಲ್ಲಿ ಇದ್ದ ಯುವಕರ ಗುಂಪುಗಳು ಆಸ್ಪತ್ರೆಯತ್ತ ದಾವಿಸಿದೆ ಇದನ್ನು ಚದುರಿಸಲು ಹೋದ ಪೋಲೀಸ್ ರಿಗೆ ತಳ್ಳಾಟ ನಡೆದಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ.
ಇನ್ನೂ ಈ ಕುರಿತು ಜಿಲ್ಲಾ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಕುದ್ದಾಗಿ ಪೊಲೀಸ್ ಠಾಣೆಗೆ ಆಗಮಿಸಿ ಮಾಹಿತಿ ಕಲೆಹಾಕಿದ್ದಾರೆ ಎನ್ನಲಾಗಿದೆ.
ಇನ್ನೂ ಗಲಾಟೆಗೆ ಒಳಗಾದ ಮೂವರನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಹಾಗೂ ಪೊಲೀಸರ ತಳ್ಳಾಟ ನಡೆಸಿದ ಯುವಕರ ವಶಕ್ಕೆ ಪೊಲೀಸ್ ರು ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಇನ್ನೂ ಹೆಚ್ಚಿನ ಮಾಹಿತಿ ಪೋಲೀಸ್ ತನಿಖೆಯ ನಂತರ ಕಾದು ನೋಡಬೇಕಿದೆ.
ಸ್ಥಳಕ್ಕೆ ಡಿವೈಎಸ್ ಪಿ ಬಿಟಿ.ರಾಜಣ್ಣ, ಸಿಪಿಐ ಆರ್ ಎಪ್ ದೇಸಾಯಿ, ಪಿಎಸ್ಐ ಶಿವರಾಜ್ , ಹಾಗೂ ಸಿಬ್ಬಂದಿ ತನಿಖೆ ನಡೆಸುತ್ತಿದ್ದಾರೆ.