ಚಳ್ಳಕೆರೆ :

ಚಳ್ಳಕೆರೆಯ ಸರ್ಕಾರಿ ಪದವಿ ಪೂರ್ವ ಕಾಲೇಜನಲ್ಲಿ ಇಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಕೆ ತಿಮ್ಮಯ್ಯನವರು ವಹಿಸಿದ್ದರು. ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಸಲುವಾಗಿ ಈ ವರ್ಷದಿಂದ ರಾಜ್ಯ ಸರ್ಕಾರದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ರಾಷ್ಟ್ರೀಯ ವಿಜ್ಞಾನ ದಿನದಂದು ಪ್ರತಿಜ್ಞಾವಿಧಿ ಸ್ವೀಕರಸಬೇಕಾಗಿ ಆದೇಶ ಹೊರಡಿಸಿದೆ.

ಸರ್ ಸಿವಿ ರಾಮನ್ ರವರು ಬೆಳಕಿನ ಚದರುವಿಕೆ ಕುರಿತು ನಡೆಸಿದ ಸಂಶೋಧನೆಗೆ ನೋಬಲ್ ಪಾರಿತೋಷಕ ಲಭಿಸಿದೆ.

ಈ ಶುಭ ಸಂದರ್ಭದ ನೆನಪಿಗಾಗಿ ಭಾರತ ಸರ್ಕಾರ ಪ್ರತಿ ವರ್ಷ ಪೆಬ್ರವರಿ 28 ನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಘೋಷಿಸಿದೆ. ಪ್ರತಿಜ್ಣಾ ವಿಧಿ ಸ್ವೀಕಾರ ಮಾಡಿ ಮಾತನಾಡಿದ ಪ್ರಾಚಾರ್ಯರಾದ ಕೆ ತಿಮ್ಮಯ್ಯ ನವರು , ಎಲ್ಲರೂ ವೈಜ್ಞಾನಿಕ ಮನೋಭಾವನೆ ರೂಢಿಸಿಕೊಳ್ಳಬೇಕು. ಸರ್ ಸಿವಿ ರಾಮನ್ ರವರ ಸಂಶೋಧನೆಯಿಂದ ಆಕಾಶ ನಮಗೆ ನೋಡಲು ನೀಲಿ ಬಣ್ಣ ಇರುವುದಕ್ಕೆ ಕಾರಣ ತಿಳಿಯುತ್ತೆ…ಇಂತಹ ನೂರಾರು ನೈಸರ್ಗಿಕ ಕ್ರಿಯೆಗಳನ್ನು ನಾವು ಪರಿಣಾಮಕಾರಿಯಾಗಿ ತಿಳಿಯಬಹುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಿರಿಯ ಉಪನ್ಯಾಸಕರಾದ ವಸಂತಕುಮಾರ್, ಪುಷ್ಪಲತ, ಶಾಂತಕುಮಾರಿ, ಹಬೀಬುಲ್ಗಾ , ಕುಮಾರಸ್ವಾಮಿ , ನಾಗರಾಜ್ ಬೆಳಗಟ್ಟ , ಜಗದೀಶ್, ಪುಟ್ಟರಂಗಪ್ಪ, ಚಂದ್ರಶೇಖರ್, ರಾಜಶೇಕರ್, ಮಹಂತೇಶ್,ಶ್ರೀನಿವಾಸ್ ಈರಣ್ಣ, ಪಾಲಯ್ಯ, ತಿಪ್ಪೇಸ್ವಾಮಿ, ರವಿಕುಮಾರ್, ರೇಖಾ, ಲತಾದೇವಿ ಮುಂತಾದವರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!