ಚಳ್ಳಕೆರೆ :
ಅಕ್ರಮ ಮಣ್ಣು ದಂಧೆ ಕೊರನು ಮಟ್ಟ ಹಾಕಲು ಸ್ಥಳೀಯ ರೈತ ಸಂಘಟನೆಗಳೇ ಮುಂದಾಗಿರುವುದು ಉತ್ತಮ ಬೆಳವಣಿಗೆ ಎನ್ನಲಾಗಿದೆ.
ಹೌದು ರಾತ್ರೋರಾತ್ರಿ ಅಕ್ರಮ ಮಣ್ಣು ದಂದೆ ಕೊರರು ಟಿಪರ್ ಗಳ ಮೂಲಕ ಟ್ರ್ಯಾಕ್ಟರ್ ಮೂಲಕ ಗೋಮಾಳ ಸರ್ಕಾರಿ ಭೂಮಿ, ಹೀಗೆ ಹಲವು ಕಡೆಗಳಲ್ಲಿ ಅಕ್ರಮ ದಂಧೆ ಕೋರರು ಮಣ್ಣು ದಂಧೆಯನ್ನು ಮಾಡುತ್ತಾ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚು ಕೆಲಸ ಮಾಡುತ್ತಿದ್ದಾರೆ.
ಎಂದು ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಅದರಂತೆ ತಾಲೂಕಿನ ಚಿಕ್ಕೇನಹಳ್ಳಿ, ಗೋಪನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಗಟ್ಟೆ ಯಲ್ಲಿ ಅಕ್ರಮವಾಗಿ ಮಣ್ಣು ಮತ್ತು ಮರಳು ಎರಡನ್ನು ತಮ್ಮ ದಂಧೆ ಮಾಡುತ್ತಾ ಯಾವುದೇ ಪರವಾನಗಿ ಇಲ್ಲದೆ ಒಡೆಯುತ್ತಿದ್ದಾರೆ.
ಇದನ್ನು ಕೂಡಲೇ ಸಂಬಂಧಿಸಿದಂತ ತಾಲ್ಲೂಕು ಆಡಳಿತ ಕಡಿವಾಣ ಹಾಕಬೇಕು, ಅಕ್ರಮ ಮಣ್ಣು ಹಾಗೂ ಮರಳು ತಿಂಬಲು ಬಂದ ಜೆಸಿಬಿ ಯಂತ್ರ ಹಾಗೂ ಲಾರಿ , ಟ್ರಾಕ್ಟರ್ ನ್ನು ಜಪ್ತಿ ಮಾಡಿ ದಂಡ ಹಾಕಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ , ಡಾಕ್ಟರ್ ವಾಸುದೇವ ಮೇಟಿ ಬಣದ ತಾಲೂಕು ಅಧ್ಯಕ್ಷ
ಶ್ರೀನಿವಾಸ ಬಿ ಚಿಕ್ಕೇನಹಳ್ಳಿ
ಕಿಡಿಕಾರಿದ್ದಾರೆ.