“ನರಹರಿ ಪರಂಪರೆಗೆ ಶ್ರೀಮತಿ ಇಂದ್ರಮ್ಮ ವೆಂಕಟಪ್ಪಶೆಟ್ಟಿಯವರ ಕೊಡುಗೆ ಅಪಾರ”:-ಪೂಜ್ಯ ವೈ ರಾಜಾರಾಮ್ ಸ್ಮರಣೆ.

‌‌ಚಳ್ಳಕೆರೆ:-ನರಹರಿ ಸದ್ಗುರು ಪರಂಪರೆಗೆ ಆಧ್ಯಾತ್ಮಿಕ ಜೀವಿ ಶ್ರೀಮತಿ ಇಂದ್ರಮ್ಮ ವೆಂಕಟಪ್ಪಶೆಟ್ಟಿಯವರ ಕೊಡುಗೆ ಅಪಾರ ಎಂದು ನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪೂಜ್ಯ ವೈ ರಾಜಾರಾಮ್ ಗುರುಗಳು ಸ್ಮರಿಸಿದರು.ನಗರದ ಸದ್ಭಕ್ತರಾದ ಶ್ರೀಮತಿ ಪ್ರೇಮಲೀಲಾ ರಾಮಣ್ಣ ಅವರ ಕೌಸ್ತುಭ ನಿವಾಸದಲ್ಲಿ ಶ್ರೀಮತಿ ಇಂದ್ರಮ್ಮನವರ ಸ್ಮರಣಾರ್ಥ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಇಂದ್ರಮ್ಮನವರು ಸರಿಸುಮಾರು ಆರು ದಶಕಗಳ ಕಾಲ ನರಹರಿ ಸದ್ಗುರು ಆಶ್ರಮದ ನಿಷ್ಠಾವಂತ ಸದ್ಭಕ್ತರಾಗಿ ಸಲ್ಲಿಸಿದ ಸೇವೆ ಅನುಪಮವಾದದ್ದು, ಅಲ್ಲದೆ ಚಳ್ಳಕೆರೆಯಲ್ಲಿ ಉತ್ತಮ ಭಕ್ತವೃಂದವನ್ನು ಕಟ್ಟಿ-ಬೆಳೆಸುವಲ್ಲಿ ಅವರ ಕುಟುಂಬದ ಪಾತ್ರ ಬಹಳ ಹಿರಿದು ಎಂದು ತಿಳಿಸಿದರು.

ಇಂತಹ ಮಹನೀಯರ ಬಗ್ಗೆ ಸ್ಮರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಬಹಳ ಶ್ಲಾಘನೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಇಂದ್ರಮ್ಮನವರ ಆಧ್ಯಾತ್ಮಿಕ ಪಾಂಡಿತ್ಯ ಮತ್ತು ಒಡನಾಟದ ಬಗ್ಗೆ ಶ್ರೀಮತಿ ಸಾವಿತ್ರಮ್ಮ,ಸರಸ್ವತಿ ಗೋವಿಂದರಾಜು,ನಾಗಲಕ್ಷ್ಮೀ, ಪ್ರೇಮಲೀಲಾ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.ಈ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ನರಹರಿ ಸದ್ಗುರು ಆಶ್ರಮದ ಸದ್ಭಕ್ತರಾದ ರಾಜೇಶ್ವರಿ,ಗೀತಾವಾಣಿ, ನರಹರಿ, ವಾಣಿ,ವಿಶಾಲ ರಾಧಾಕೃಷ್ಣ , ಸುಮಿತ್ರ,ಶಾರದಾ,ಶೋಭಾ, ಅನುಸೂಯ,ನಳಿನಿ, ಸರಸ್ವತಿ, ಚೇತನ್,ಮೇಘನ, ವೆಂಕಟಲಕ್ಷ್ಮೀ,ಯತೀಶ್ ಎಂ ಸಿದ್ದಾಪುರ,ಪೂರ್ಣಿಮಾ, ಶಿವಮ್ಮ, ರಾಧಾ ಸೇರಿದಂತೆ ನರಹರಿ ಪರಂಪರೆಯ ಸದ್ಭಕ್ತರು ಭಾಗವಹಿಸಿದರು.

About The Author

Namma Challakere Local News
error: Content is protected !!