ಚಳ್ಳಕೆರೆ :
ಚಳ್ಳಕೆರೆ: ಸಮರ್ಪಕ ವಿದ್ಯುತ್ ಗಾಗಿ ರೈತರ ಪ್ರತಿಭಟನೆ
ಚಳ್ಳಕೆರೆಯ ಪರುಶುರಾಂಪುರ ಹೋಬಳಿಯಲ್ಲಿ ರೈತರ
ಜಮೀನುಗಳಿಗೆ ಸಮರ್ಪಕ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿ
ಇಂದು ರೈತರು ಬೆಸ್ಕಾಂ ಕಚೇರಿ ಬಳಿಯಿಂದು ಪ್ರತಿಭಟನೆ
ನಡೆಸಿದರು.
ಓವರ್ ಲೋಡಿಂಗ್ ನ್ನು ಮರು ಹಂಚಿಕೆ ಮಾಡಿ,
ಸರಿಯಾದ ರೀತಿಯಲ್ಲಿ ಜಮೀನುಗಳಿಗೆ ವಿದ್ಯುತ್ ಕೊಡಬೇಕು
ಎಂದು ಹಲವಾರು ಬಾರಿ ಮನವಿ ಮಾಡಿದ್ರು, ಪ್ರಯೋಜನವಾಗಿಲ್ಲ.
ಸರ್ಕಾರ ಕಣ್ಣಾ ಮುಚ್ಚಾಲೆ ಆಡುವುದನ್ನು ಬಿಟ್ಟು ರೈತರ ಬಗ್ಗೆ
ಕಾಳಜಿಯನ್ನು ವಹಿಸಬೇಕು ಎಂದು ಒತ್ತಾಯಿಸಿದರು.