ಚಳ್ಳಕೆರೆ :
ಮೊಳಕಾಲ್ಕೂರು: ಅಗ್ನಿ ಅನಾಹುತ: ಹುಲ್ಲಿನ ಬಣವೆ
ಭಸ್ಮ
ಮೊಳಕಾಲ್ಕೂರಿನ ಕೊಂಡ್ಲಹಳ್ಳಿ ಎ ಕೆ ಕಾಲೋನಿಯಲ್ಲಿ, ಬುಧವಾರ
ಸಂಭವಿಸಿದ ಅಗ್ನಿ ಅನಾಹುತದಲ್ಲಿ ಹುಲ್ಲಿನ ಬಣವೆಗಳು ಸುಟ್ಟು
ಹೋಗಿವೆ.
ಸ್ಥಳೀಯರಾದ ಶಿವಮ್ಮ ಅವರಿಗೆ ಸೇರಿದ ಮೂರು
ಲೋಡು ಶೇಂಗಾ ಮೇವು ಎರಡು ಲೋಡು ಮೆಕ್ಕೆ ಜೋಳದ
ಸಪ್ಪೆ, ಚಂದ್ರಪ್ಪ ಅವರಿಗೆ ಸೇರಿದ 400 ಶೇಂಗಾ ಲೋಡು, ಎರಡು
ನೂರು ಸಪ್ಪೆ ಲೋಡು ಸುಟ್ಟು ಹೋಗಿದ್ದು, ಒಂದು ಲಕ್ಷಕ್ಕೂ ಹೆಚ್ಚು
ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಮೊಳಕಾಲ್ಕೂರಿನ
ಅಗ್ನಿಶಾಮಕ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿ ಬೆಂಕಿ
ನಂದಿಸಿದ್ದಾರೆ.