ಚಳ್ಳಕೆರೆ :
ಚಿತ್ರದುರ್ಗ: ಮುಕ್ತಿನಾಥೇಶ್ವರ ದರ್ಶನಕ್ಕೆ ಸಾಲುಗಟ್ಟಿ
ಬಂದ ಭಕ್ತರು
ಶಿವರಾತ್ರಿಯ ಹಬ್ಬವನ್ನು ಸಡಗರ ಸಂಭ್ರಮಗಳಿಂದ
ಚಿತ್ರದುರ್ಗದಲ್ಲಿ ಆಚರಿಸಲಾಯಿತು. ನಗರದ ಜೋಗಿಮಟ್ಟಿ ರಸ್ತೆಯ
ಮುಕ್ತಿನಾಥೇಶ್ವರ ದೇವಾಲಯಕ್ಕೆ ಭಕ್ತರು ಸಾವಿರಾರು ಸಂಖ್ಯೆಯಲ್ಲಿ
ಆಗಮಿಸಿ, ದರ್ಶನ ಪಡೆದರು.
ಶಿವಲಿಂಗಕ್ಕೆ ಹೂವುಗಳ ಜೊತೆಗೆ
ರುಂಡಗಳ ಮಾಲೆ ಹಾಕಿ ವಿಶೇಷ ಪೂಜೆಯನ್ನು ಮಾಡಲಾಗಿತ್ತು.
ಬುಧವಾರ ರಾತ್ರಿಯಿಂದ ಗುರುವಾರ ಬೆಳಗಿನ ಜಾವದ ವರೆಗೂ
ಭಕ್ತರು ನಿರಂತರವಾಗಿ ಸರತಿ ಸಾಲಿನಲ್ಲಿ ದರ್ಶನ ಪಡೆದುಕೊಂಡರು.
ಇಂದು 2ನೇ ದಿನದ ಪೂಜೆ ನಡೆಯಲಿದೆ ಎಂದು ದೇವಸ್ಥಾನದ
ಮುಖಂಡರು ತಿಳಿಸಿದ್ದಾರೆ.