ಚಳ್ಳಕೆರೆ : ತಳ ಸಮುದಾಯದ ಧ್ವನಿಯಾದ ಸರ್ವಜ್ಞ, ಸರಳ ಭಾಷೆಯಲ್ಲಿ ವಚನ ಸಾಹಿತ್ಯದ ಮೂಲಕ ಕನ್ನಡ ಸಾಹಿತ್ಯ ಸಿರಿಗೆ ಅಮೂಲ್ಯವಾದ ಕೊಡುಗೆ ಎಂದು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹೇಳೀದರು.
ಅವರು ತಾಲ್ಲೂಕು ಕಛೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಆಯೋಜಿಸಿದ್ದ ಸರ್ವಜ್ಞ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಎಲ್ಲಾ ಜನಾಂಗದ ಇತದೃಷ್ಠಿಯಿಂದ ಸಮಾಜದ ಅಭಿವೃದ್ಧಿಗೆ ಶ್ರಮಿಸುವೆ, ನಿಮ್ಮ ಸಮುದಾಯದ ಕಲ್ಯಾಣ ಕಾರ್ಯಕ್ರಮಗಳಿಗೆ ಸಮುದಾಯ ಭವನ ಹಾಗೂ ಸರ್ವಜ್ಞರ ಸವಿ ನೆನಪಿಗಾಗಿ ನಗರದ ಪ್ರಮುಖ ರಸ್ತೆಗೆ ಸರ್ವಜ್ಞ ವೃತ್ತ ನಾಮಕರಣ ಮಾಡಲು ಸ್ಥಳನಿಗಧಿ ಮಾಡಲು ಸೂಚಿಸುವೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಹಶಿಲ್ದಾರ್ ರೇಹಾನ್ ಪಾಷ, ಕೇವಲ ವಚನ ಸಾಹಿತ್ಯದ ಮೂಲಕ ಈಡೀ ಸಮಾಜವನ್ನು ಸರಿದಾರಿಗೆ ತರುವ ಶಕ್ತಿ ಅಂದಿನ ಕಾಲದ ಶರಣರ ಸಾಲಿಗೆ ಸೇರುವ ಸರ್ವಜ್ಞ ಮಾತ್ರ ಎಂದು ಸಂದೇಶ ಸಾರಿದರು.
ನಿವೃತ್ತ ಕೃಷಿಅಧಿಕಾರಿ ಸಮಾಜದ ಮುಖಂಡ ಕೃಷ್ಣಮೂರ್ತಿ ಮಾತನಾಡಿ,
ಅನ್ಯರಿಗೆ ಟೀಕೆ, ಟಿಪ್ಪಣಿ, ನಿಂದನೆ ಅನುಸರಿಸದೇ ಸಾಹಿತ್ಯದ ಮೂಲಕ ಅಂದಿನ ವಚನಕಾರರು ತಮ್ಮ ಕಾಯಕದೊಂದಿಗೆ ವಚನಗಳ ಮೂಲಕ ತಮ್ಮ ಜೀವನವನ್ನು ಸಮಾಜದ ಉದ್ಧಾರಕ್ಕಾಗಿ ಮೀಸಲಿಟ್ಟು ಹಗಲಿರುಳು ಶ್ರಮಿಸಿದರೆ, ಅದೇ ರೀತಿಯಲ್ಲಿ ಸ್ಥಳೀಯ ಶಾಸಕರು ಮುಂಬರುವ ಜಿಲ್ಲಾ ಪಂಚಾಯತ ತಾಲ್ಲೂಕು ಪಂಚಾಯತ ಚುನಾವಣೆಯಲ್ಲಿ ರಾಜಕೀಯವಾಗಿ ಸಮುದಾಯಕ್ಕೆ ಸ್ಥಾನಮಾನ ನೀಡಬೇಕು ತಮ್ಮ ಹಿಂಗಿತ ವ್ಯಕ್ತಪಡಿಸಿದರು.
ಸಮಾಜದ ಮುಖಂಡ ಗೊಂವಿದರಾಜ್ ಮಾತನಾಡಿ,
ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಕುಂಬಾರ ಸಮುದಾಯ ಹಿಂದುಳಿದಿದ್ದು ಕುಂಬಾರ ಅಭಿವೃದ್ಧಿಯಾಗಬೇಕು, ವಚನ ಸಾಹಿತ್ಯದ ಮೂಲಕ ಪ್ರಪಂಚವನ್ನು ಸುತ್ತಿ ಪ್ರಚಾರ ಪಡಿಸಿದ ಸರ್ವಜ್ಞ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಜೈತುಂಬಿ ಮಾಲೀಕ್ ಸಾಬ್, ಉಪಾಧ್ಯಕ್ಷೆ
ಸುಮಕ್ಕಾ ಭರಮಣ್ಣ, ಸದಸ್ಯೆ ಕವಿತಾ, ರಮೇಶ್ ಗೌಡ, ಪರುಶುರಾಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ್,
ಗ್ಯಾರಂಟಿ ಯೋಜನೆಯ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಕೆಡಿಪಿ ನಾಮ ನಿರ್ದೇಶನ ಸದಸ್ಯ ಸುರೇಶ್, ಕೃಷ್ಣಮೂರ್ತಿ, ಗೊಂವಿದರಾಜ್, ಕುಂಬಾರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ನನ್ನಿವಾಳ ಬಸವರಾಜ್, ಇತರರು ಭಾಗವಹಿಸಿದರು.

