filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 46;

ಚಳ್ಳಕೆರೆ : ದಿನದ ಇಪ್ಪತ್ತು ನಾಲ್ಕು ಗಂಟೆಯ
ನಿರಂತರ ಜ್ಯೋತಿ ವಿದ್ಯುತ್ ಯೋಜನೆ ಇಲ್ಲದೆ, ವ್ಯಾಸಂಗ ಮಾಡುವ ಶಾಲಾ-ಕಾಲೇಜು ಮಕ್ಕಳು ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ ಎಂದು ಗ್ರಾಮದ ನಿವಾಸಿಗಳು ಬೆಸ್ಕಾಂ ಇಲಾಖೆ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದಾರೆ.

ಅವರು ತಾಲೂಕಿನ ಗೊರ್ಲಕಟ್ಟೆ ಗ್ರಾಮದ ಬಸವೇಶ್ವರ ನಗರದ ಸುಮಾರು ಇಪ್ಪತ್ತು ಕ್ಕೂ ಹೆಚ್ಚು ಕುಟುಂಬಗಳು ಇನ್ನೂ ಗ್ರಾಮದಲ್ಲಿ ಸಂಜೆಯಾದರೆ ಸಾಕು ವಿಷಜಂತಿಗಳ ಕಾಟದಿಂದ ಮನೆಯಿಂದ ಹೊರ ಬರುವ ಆಗಿಲ್ಲ, ಶಾಲಾ ಕಾಲೇಜು ಮಕ್ಕಳು ರಾತ್ರಿ ವೆಳೆ ವ್ಯಾಸಂಗ ಮಾಡಲು ಕತ್ತಲು ಕವಿದಿರುತ್ತದೆ, ಆದ್ದರಿಂದ ಪಂಪ್ ಸೆಟ್ ಮೋಟರ್ ಗಳ ವಿದ್ಯುತ್ ಸಂಪರ್ಕ ನೀಡಿದ ಬೆಸ್ಕಾಂ ಇಲಾಖೆ ನಿರಂತರ ಜ್ಯೋತಿ ವಿದ್ಯುತ್ ನೀಡುವುದರಲ್ಲಿ ವಿಫಲವಾಗಿದೆ ,

ಆದ್ದರಿಂದ ನಮ್ಮ ಕುಟುಂಬಗಳ ರಕ್ಷಣೆಗಾಗಿ ಹಾಗೂ ಬೆಳಕಿನ ವ್ಯವಸ್ಥೆಗಾಗಿ ನಿರಂತರ ಜ್ಯೋತಿ ವಿದ್ಯುತ್ ನೀಡಬೇಕೆಂದು ಗೋರ್ಲಕಟ್ಟೆ ಗ್ರಾಮದ ಬಸವೇಶ್ವರನಗರದ ಸುಮಾರು 20ಕ್ಕೆ ಹೆಚ್ಚು ಕುಟುಂಬಗಳ ನಿವಾಸಿಗಳು ಚಳ್ಳಕೆರೆ ಬೆಸ್ಕಾಂ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಬೆಸ್ಕಾಂ ಎಇಇ ಶಿವಪ್ರಸಾದ್ ಗೆ ಮನವಿ ಸಲ್ಲಿಸಿದ್ದಾರೆ.

ಇನ್ನೂ ಬೆಸ್ಕಾಂ ಎಇಇ ಶಿವಪ್ರಸಾದ್ ಮಾಧ್ಯಮದೊಂದಿಗೆ ಮಾತನಾಡಿ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕವನ್ನು ಕುಟುಂಬಗಳಿಗೆ ನೀಡಲು ಈಗಾಗಲೇ ಮೇಲಾಧಿಕಾರಿಗಳಿಗೆ ಕಡತಗಳನ್ನು ಸಲ್ಲಿಸಲಾಗಿದೆ ಇನ್ನು ನಿರಂತರ ಜ್ಯೋತಿ ವಿದ್ಯುತ್ ಯೋಜನೆಯಲ್ಲಿ ಈ ಎಲ್ಲಾ ಕುಟುಂಬಗಳಿಗೆ 24 ಗಂಟೆಯ ನಿರಂತರ ಜ್ಯೋತಿಯನ್ನು ಸಂಪರ್ಕವನ್ನು ಮುಂದಿನ ದಿನಗಳಲ್ಲಿ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ಇದೇ ಸಂಧರ್ಭದಲ್ಲಿ ಗ್ರಾಮದ ಮಹಿಳೆಯರು, ಸಾರ್ವಜನಿಕರು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!