ಚಳಕೆರೆ : ನಮ್ಮ ಮುಂದಿನ ವ್ಯಾಸಂಗದ ಭವಿಷ್ಯದ ಹಿತದೃಷ್ಟಿಯಿಂದ ನಮಗೆ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ನೀಡಿ ಸರ್ ಎಂದು ಪರಿ ಪರಿಯಾಗಿ ಅಧಿಕಾರಿಗಳನ್ನು ಅಂಗಲಾಚುವ ದೃಶ್ಯ ಕಂಡುಬಂದಿದೆ.
ಹೌದು
ಧರಣಿ ನಿರತ ಗ್ರಾಮ ಆಡಳಿತಾಧಿಕಾರಿಗಳು ಮುಂದೆ ಸಿಇಟಿ ಹಾಗೂ ನೀಟ್ ಪರೀಕ್ಷೆಗೆ ಅರ್ಜಿ ಹಾಕುವ ವಿದ್ಯಾರ್ಥಿಗಳು ಇದೇ ತಿಂಗಳು 18 ಕ್ಕೆ ಪರೀಕ್ಷೆ ಗೆ ಅರ್ಜಿ ಹಾಕಲು ಕೊನೆಯ ದಿನಾಂಕ ಆದ್ದರಿಂದ ಜಾತಿ ಪ್ರಮಾಣ ಪತ್ರ ಅವಶ್ಯಕವಾಗಿದೆ ನಮಗೆ ಸಹಿಮಾಡಿ ಎಂದು ವಿದ್ಯಾರ್ಥಿಗಳು ಅಂಗಲಾಚುವ ದೃಶ್ಯ ನೆರೆದವರಲ್ಲಿ ಕಣ್ಣಿರು ತರಿಸುವಂತಿತ್ತು.
ಇನ್ನೂ ಅಧಿಕಾರಿಗಳು ಮಾತ್ರ ನಾವು ರಜೆಯಲ್ಲಿ ಇದ್ದೆವೆ ನಮ್ಮ ಲಾಗುನ್ ಕೂಡ ಇಲ್ಲ ಆದ್ದರಿಂದ ನಾವು ನಮ್ಮ ಬೇಡಿಕೆ ಗಳು ಸರಕಾರ ಈಡೇರಿಸುವ ವರೆಗೂ ನಾವು ಧರಣಿ ವಾಪಸ್ ಪಡೆಯುವುದಿಲ್ಲ ಎಂದು ಗ್ರಾಮ ಆಡಳಿತಾಧಿಕಾರಿ ಪ್ರಕಾಶ್ ಹಾಗೂ ಇತರರು ಹೇಳುತ್ತಾರೆ.
ಅದರೆ ರಾಜ್ಯ ಸರಕಾರ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಪರಿಕ್ಷಾ ದಿನಾಂಕ ಮುಂದೂಡಬೇಕು ಇಲ್ಲವೆ ಗ್ರಾಮ ಆಡಳಿತಾಧಿಕಾರಿಗಳು ಬೇಡಿಕೆ ಈಡೇರಿಸಬೇಕು ಎಂದು ಪೋಷಕರ ಒಕ್ಕೂರಲಾಗಿದೆ.

