ಚಳ್ಳಕೆರೆ :
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕಳೆದ ಐದು ದಿನಗಳಿಂದ ರಾಜ್ಯಾದ್ಯಂತ ನಡೆಸುವ ಗ್ರಾಮ ಆಡಳಿತಾಧಿಕಾರಿಗಳು ಧರಣೆ ಮುಂದುವರೆದರು ರಾಜ್ಯ ಸರ್ಕಾರ ಮಾತ್ರ ಮಣಿಯುತ್ತಿಲ್ಲ ಇನ್ನೂ ಎಷ್ಟು ದಿನವಾದರೂ ನಮ್ಮ ಬೇಡಿಕೆ ಈಡೇರಿಸುವ ವರೆಗೆ ಧರಣಿ ಕೂರುತ್ತೆವೆ ಎಂದು ಗ್ರಾಮ ಆಡಳಿತಾಧಿಕಾರಿಗಳು ಮಾತಾಗಿದೆ ಆದರೆ
ಅಧಿಕಾರಿಗಳ ರಜೆಯಿರುವ ಕಾರಣ ಪರಿಕ್ಷಾ ವಿದ್ಯಾರ್ಥಿಗಳಿಗೆ, ಹಾಗೂ ಸಾರ್ವಜನಿಕರಿಗೆ ವಿವಿಧ ಪ್ರಮಾಣ ಪತ್ರಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ ಇದರಿಂದ ಪರಿಕ್ಷೆಗೆ ಅರ್ಜಿ ಹಾಕಲು ವಿದ್ಯಾರ್ಥಿಗಳಿಗೆ ಸಾಧ್ಯವಾಗುವುದಿಲ್ಲ ಮಕ್ಕಳ ಭವಿಷ್ಯ ಮೊಟಕು ಹಾಗಬಾರದು ಎಂದು ರಾಜ್ಯ ರೈತ ಸಂಘದ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.
ಇನ್ನೂ ಮಾಜಿ ನಗರಸಭೆ ಸದಸ್ಯ ಆರ್.ಪ್ರಸನ್ನ ಕುಮಾರ್ ಮಾತನಾಡಿ, ಸರಕಾರ ಗ್ರಾಮ ಆಡಳಿತಾಧಿಕಾರಿಗಳು ಬೇಡಿಕೆಗಳು ಸುಲಭವಾಗಿ ಇವೆ, ಅವುಗಳನ್ನು ಪರಿಗಣಿಸಿ ಈಡೇರಿಸಬೇಕು ಇವರು ರಜೆಯಲ್ಲಿ ಇದ್ದರೆ ಸಾರ್ವಜನಿಕರ ಕೆಲಸಗಳು ಅನಗತ್ಯವಾಗಿ ತೊಂದರೆ ಹಾಗುತ್ತದೆ ಆದ್ದರಿಂದ ಸರಕಾರ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಇದೇ ಸಂಧರ್ಭದಲ್ಲಿ ಪೋಷಕರಾದ ಬಿ.ಪರಿದ್ ಖಾನಾ್, ಆಮ್ ಆದ್ಮಿ ಪಕ್ಷ ಬಿ.ಪಾಪಣ್ಣ, ಅಂಬೇಡ್ಕರ್ ನಗರದ ಓಬಳೇಶ್, ರೈತ ಮುಖಂಡರು, ಹಾಗೂ ಸಾರ್ವಜನಿಕರು, ಧರಣಿ ನಿರತ ಗ್ರಾಮ ಆಡಳಿತಾಧಿಕಾರಿಗಳು ಸ್ಥಳದಲ್ಲಿ ಇದ್ದರು..


