ಚಳ್ಳಕೆರೆ :
ಮೊಳಕಾಲ್ಕೂರು: ಜನರ ನಿರೀಕ್ಷೆಯಂತೆ ಕೆಲಸ ಮಾಡಿಲ್ಲ
ಪಟ್ಟಣದಲ್ಲಿ ಒಂದು ಅಭಿವೃದ್ಧಿ ಕೆಲಸ ಮಾಡದೆ, ಮುಂದಿನ ಬಾರಿಗೆ
ಈ ಮುಖವಿಟ್ಟುಕೊಂಡು ಚುನಾವಣೆಗೆ ಹೋದರೆ ಸೋಲು
ಗ್ಯಾರಂಟಿ ಎಂದು ಪಪಂ ಸದಸ್ಯ ಅಬ್ದುಲ್ಲಾ ಅಸಮಾಧಾನ
ವ್ಯಕ್ತಪಡಿಸಿದರು.
ಮೊಳಕಾಲ್ಕೂರು ಪ ಪಂ ಸಭಾಂಗಣದಲ್ಲಿಂದು
ನಡೆದ ಅಯವ್ಯಯ ಮಂಡನೆ ಸಭೆಯಲ್ಲಿಮಾತಾಡಿ, ಪ ಪಂ ಅವಧಿ
ಮುಗಿಸಲು ಕೆಲವೇ ತಿಂಗಳ ಬಾಕಿ ಇದೆ. ಇದು ಕೊನೆ ಬಜೆಟ್ ನ
ಸದಸ್ಯನಾಗಿರುವುದಕ್ಕೆ ತುಂಬಾ ನೋವಿದೆ.
ಜನರ ಅಶೋತ್ತರ
ಈಡೇರಿಸಲು ನಮ್ಮನ್ನು ಗೆಲ್ಲಿಸಿದ್ದರು. ಆದರೆ ನಿರೀಕ್ಷೆಗೆ ತಕ್ಕಂತೆ ಕೆಲಸ
ಮಾಡಿಲ್ಲವೆಂದರು

