ಚಳ್ಳಕೆರೆ :
ಚಿತ್ರದುರ್ಗ: ರುದ್ರ ಭೂಮಿಜಾಗ ಇತರರಿಗೆ ನೀಡಿದ್ದು
ರದ್ದುಗೊಳಿಸಿ
ಚಿತ್ರದುರ್ಗದ ಯಂಗಮ್ಮನಕಟ್ಟೆ 9 ಎಕರೆ ರುದ್ರ ಭೂಮಿಯಲ್ಲಿ 3
ಎಕರೆಯನ್ನು ಇತರೆಯವರಿಗೆ ನೀಡಿರುವುದನ್ನು ರದ್ದು ಪಡಿಸುವಂತೆ
ಒತ್ತಾಯಿಸಿ, ಕೆಳಗೋಟೆ ಎಸ್ಸಿಎಸ್ಟಿ ಜನಾಂಗದದವರು ಜಿಲ್ಲಾಧಿಕಾರಿ
ಕಚೇರಿ ಬಳಿಯಿಂದು ಪ್ರತಿಭಟನೆ ನಡೆಸಿದರು.
ರುದ್ರ ಭೂಮಿಯಲ್ಲಿ
ಎಸ್ಸಿಎಸ್ಟಿ ಜನಾಂಗ ಅಂತ್ಯ ಸಂಸ್ಕಾರ ನಡೆಸುತ್ತಾ ಬಂದಿದ್ದಾರೆ.
ನಮ್ಮ ಪೂರ್ವಿಕರ ಸಮಾಧಿಗಳಿವೆ. ಅವುಗಳಿಗೆ ಧಕ್ಕೆ ತರುವ
ಕೆಲಸ ನಡೆಯುತ್ತಿದೆ. ಇವುಗಳ ಜೊತೆ ನಮಗೆ ಭಾವನಾತ್ಮಕ
ಸಂಭಂಧವಿದೆ. ಇದನ್ನು ಹಾಳು ಮಾಡಬೇಡಿ ಎಂದರು.

