ಚಳ್ಳಕೆರೆ :
ಚಳ್ಳಕೆರೆ: ದೂರಗಳು ಕೇಳಿ ಬರದಂತೆ ಕೆಲಸ ಮಾಡಿ
ಖಡಕ್ ವಾರ್ನಿಂಗ್
ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಗೆ ಪರಿಶಿಷ್ಟ ಕಲ್ಯಾಣ ಇಲಾಖೆಯ,
ನಿರ್ದೇಶಕ ಹಾಗೂ ನೋಡಲ್ ಅಧಿಕಾರಿ ವೆಂಕಟೇಶ್ ಇಂದು
ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಹೊರರೋಗಿಗಳ
ವಾರ್ಡ್, ಒಳ ರೋಗಿಗಳ ವಾರ್ಡ್ ಗಳು ಶೌಚಾಲಯಗಳು,
ಔಷಧಿ ವಿತರಣೆಯ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.
ಆಸ್ಪತ್ರೆಗೆ ಬರುವ ರೋಗಿಗಳಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ
ಸಿಗುವಂತಾಗಬೇಕು. ಸಾರ್ವಜನಿಕರಿಂದ ದೂರುಗಳು ಬರದಂತೆ
ನೋಡಿಕೊಳ್ಳಬೇಕೆಂದು ಆಡಳಿತಾಧಿಕಾರಿಗಳಿಗೆ ಸೂಚಿಸಿದರು.

