ಚಳ್ಳಕೆರೆ :
2025-26 ರ ಬಜೆಟ್ನಲ್ಲಿ ಬಿಸಿಯೂಟ ತಯಾರಕರಿಗೆ ವೇತನ
ಹೆಚ್ಚಿಸುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸಬೇಕೆಂದು
ಬಿಸಿಯೂಟ ತಯಾರಕರ ಫೆಡರೇಷನ್ ರಾಜ್ಯ ಸಮಿತಿ ಕರೆಯ ಮೇರೆಗೆ
ರಾಜ್ಯಾದ್ಯಂತ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ನಗರದ ತಹಶೀಲ್ದಾರ್ ಕಚೇರಿಗೆ ಮನಚಿ ಸಲ್ಲಿಸಿ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ನ ಎಐಟಿಯುಸಿ ಶಿವರುದ್ರಪ್ಪ ಮಾತನಾಡಿದರು.
ಕರ್ನಾಟಕ ರಾಜ್ಯದಲ್ಲಿ ಕಳೆದ 23 ವರ್ಷಗಳಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳು
ಸೇರಿದಂತೆ ಕಿರಿಯ / ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಧ್ಯಾಹ್ನ ಉಪಹಾರ ಯೋಜನೆ –
ಅಡಿಯಲ್ಲಿ ಶಾಲೆಗಳಲ್ಲಿ ಅಡುಗೆ ಕೆಲಸ ಮಾಡುತ್ತಿರುವ ಬಿಸಿಯೂಟ ತಯಾರಕ ಮಹಿಳೆಯರು ಅತ್ಯಂತ
ಕಡಿಮೆ ಗೌರವ ಸಂಭಾವನೆಗೆ ದುಡಿಯುತ್ತಿದ್ದಾರೆ.
ಮುಖ್ಯ ಅಡುಗೆಯವರಿಗೆ ಮಾಸಿಕ ರೂಪಾಯಿ
3700 ಹಾಗೂ ಸಹಾಯಕ ಅಡುಗೆಯವರಿಗೆ ರೂ 3600 ಮಾತ್ರ ಗೌರವ ಸಂಭಾವನೆ ಬರುತ್ತಿದ್ದು,
ಇದರಿಂದ ಬಿಸಿಊಟ ತಯಾರಕರು ಜೀವನ ನಡೆಸುವುದು ತುಂಬಾ ಕಷ್ಟಕರವಾಗಿದೆ. ಆದ್ದರಿಂದ ಇವರಿಗೆ
2025-26 ರ ಬಜೆಟ್ನಲ್ಲಿ ವೇತನ ಹೆಚ್ಚಳ ಮಾಡುವುದು, ಮರಣ ಪರಿಹಾರ ಜಾರಿಗೊಳಿಸುವುದು,
ನಿವೃತ್ತರಾದವರಿಗೆ ಇಡುಗಂಟು ಹಣವನ್ನು ಕನಿಷ್ಠ 2 ಲಕ್ಷ ರೂಪಾಯಿಗೆ ವಿತರಿಸುವುದು ಸೇರಿದಂತೆ
ಮತ್ತಿತರ ಬೇಡಿಕೆಗಳನ್ನು 2025-26 ರ ಬಜೆಟ್ನಲ್ಲ ಜಾರಿಗೊಳಸಬೇಕೆಂದು ರಾಜ್ಯಾದ್ಯಂತ
ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಒತ್ತಾಯಿಸುವುದರ ಮೂಲಕ ಮನವಿ ಪತ್ರ ಸಲ್ಲಿಸುತ್ತಿದ್ದೇವೆ.
ಇಡುಗಂಟು ಹಣ ಹಾರಿಗಾಗಿ :-
ಈಗಾಗಲೇ ಇಲಾಖೆ ಘೋಷಣೆ ಮಾಡಿರುವಂತೆ 30000 ರೂಪಾಯಿ ಹಾಗೂ 40000 ಸಾವಿರ
60 ವರ್ಷ ವಯಸ್ಸಾಗಿ ನಿವೃತ್ತರಾದ ಬಿಸಿಯೂಟ ತಯಾರಿಕರಿಗೆ
ರೂಪಾಯಿ ಘೋಷಣೆ ಮಾಡಿರುವುದನ್ನು ಬದಲಾಯಿಸಿ ಇಡುಗಂಟು ಹಣವನ್ನು ಕನಿಷ್ಠ 2 ಲಕ್ಷ
ರೂಪಾಯಿಗಳಗೆ ಏರಿಸಬೇಕು.
ಜೊತೆಗೆ ಕನಿಷ್ಠ 5 ವರ್ಷ ಕೆಲಸ ಮಾಡಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ
ಕಡಿಮೆಯಾದ ಕಾರಣಕ್ಕೆ ಅಥವಾ ಅನಾರೋಗ್ಯ ಕಾರಣದಿಂದ ಬಿಡುಗಡೆಗೊಳಸುವ ಬಿಸಿಯೂಟ
ತಯಾರಕರಿಗೂ ಒಂದು ಬಾರಿ ಇಡುಗಂಟು ಹಣವನ್ನು ಕೂಡಬೇಕು.
ಮರಣ ಪರಿಹಾರ :-
ಯೋಜನೆ ಆರಂಭವಾದಾಗಿನಿಂದ ರಾಜ್ಯದಲ್ಲಿ ಸುಮಾರು 15ಕ್ಕೂ ಹೆಚ್ಚು ಜನ
ಬಿಸಿಯೂಟ ತಯಾರಕರು ಶಾಲೆಯಲ್ಲಿ ಅಡುಗೆ ತಯಾರಿಸುವಾಗ ಕುಕ್ಕರ್ ಸ್ಫೋಟಗೊಳ್ಳುವುದು ಸೇರಿದಂತೆ
ವಿವಿಧ ರೀತಿಯ ಅವಘಟಗಳಾಗಿ ಮೃತ ಹೊಂದಿರುತ್ತಾರೆ. ಇಂಥಹ ಕುಟುಂಬದವರಿಗೆ ಇದುವರೆಗೂ
ಯಾವುದೇ ರೀತಿಯ ಪರಿಹಾರ ಜಾರಿಯಾಗಿರುವುದಿಲ್ಲ. ಆದ್ದರಿಂದ ಕೂಡಲೇ ಬಿಸಿಯೂಟ ತಯಾರಕರಿಗೆ
ಮರಣ ಪರಿಹಾರವಾಗಿ 10 ಲಕ್ಷ ರೂಪಾಯಿ ಜಾರಿಗೊಳಸಬೇಕು.
ಆಸ್ಪತ್ರೆ ಚಿಕಿತ್ಸೆ ವೆಚ್ಚ :-
ಶಾಲೆಯಲ್ಲಿ ಅಡುಗೆ ತಯಾರಿಸುವ ಸಂದರ್ಭದಲ್ಲಿ ಕುಕ್ಕರ್ ಸ್ಫೋಟ ಮತ್ತು
ಯಾವುದೇ ರೀತಿಯ ಅಪಘಾತಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದಕ್ಕೆ ಕನಿಷ್ಠ 50 ಸಾವಿರ
ರೂಪಾಯಿ ಚಿಕಿತ್ಸೆಗಾಗಿ ಆಸ್ಪತ್ರೆ ವೆಚ್ಚ ಜಾರಿಗೊಳಸಬೇಕು.
ಈ ಮೊದಲು ಇದ್ದಂತೆ ಬ್ಯಾಂಕ್ ಜಮ ಖಾತೆ ಮುಂದುವರೆಸಿ ಮುಖ್ಯ ಅಡುಗೆಯವರ ಮತ್ತು
ಮುಖ್ಯೋಪಾಧ್ಯಾಯರ ಬ್ಯಾಂಕ್ ಜಂಟಿ ಖಾತೆಯನ್ನು ಇಲಾಖೆ ಏಕ ಪಕ್ಷಿಯವಾಗಿ ತೀರ್ಮಾನ ಕೈಗೊಂಡು
ರದ್ದುಗೊಆಸಿ, ಮುಖ್ಯೋಪಾಧ್ಯಾಯರ ಹಾಗೂ ಎಸ್.ಡಿ.ಎಂ.ಸಿ. ಅಧ್ಯಕ್ಷರ ಬ್ಯಾಂಕ್ ಜಂಟಿ ಖಾತೆ
ತೆರೆಯಲು ಆದೇಶಿಸಿರುವುದನ್ನು ಕೂಡಲೇ ರದ್ದುಗೊಳಿಸಿ ಮೊದಅನಂತೆ ಮುಂದುವರೆಸಬೇಕು.
ಉಪಧನ (ಗ್ರಾಚ್ಯುಟ) ಜಾರಿಗೊಳಿಸಿ :-
1972 ರ ಕಾಮಿಕ ಕಾಯ್ದೆಯಂತ ನಿವೃತ್ತಿ ಹೊಂದುವ ಎಲ್ಲಾ
ಬಿಸಿಯೂಟ ತಯಾರಕರಿಗೂ (ಗ್ರಾಚುಯಿಟಿ) ಉಪಧನ ಜಾರಿಗೊಳಸಬೇಕು ಎಂದು ಒತ್ತಾಯಿಸಿದರು.