ನಲಗೇತನಹಟ್ಟಿ ಗ್ರಾ.ಪಂ. ಜನರು ಉಚಿತ ಆರೋಗ್ಯ ತಪಾಸಣೆ ಶಿಬಿರ ಸದ್ಬಳಕೆಗೆ ಸಲಹೆ ನಲಗೇತನಹಟ್ಟಿ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪಿ.ಎನ್ ಮುತ್ತಯ್ಯ.
ನಾಯಕನಹಟ್ಟಿ:: ಉಚಿತ ಆರೋಗ್ಯ ತಪಾಸಣಾ ಶಿಬಿರ ಗ್ರಾಮೀಣ ಭಾಗದ ಬಡ ಜನರಿಗೆ ವರದಾನವಾಗಿದೆ ಎಂದು ನಲಗೇತನಹಟ್ಟಿ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪಿ.ಎನ್. ಮುತ್ತಯ್ಯ, ಹೇಳಿದ್ದಾರೆ.
ಶನಿವಾರ ಹೋಬಳಿಯ ಇಲ್ಲಿನ ನಲಗೇತನಹಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬಸವೇಶ್ವರ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆ ಚಿತ್ರದುರ್ಗ ಮತ್ತು ನಲಗೇತನಹಟ್ಟಿ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಚಾಲನೆ ನೀಡಿ ಮಾತನಾಡಿದ ಅವರು. ಬಡವರ ಆರೋಗ್ಯ ತಪಾಸಣೆಗೆ ಸರ್ಕಾರ ವಿವಿಧ ಯೋಜನೆಯಡಿ ಉಚಿತ ಆರೋಗ್ಯ ಸೇವೆ ನೀಡುತ್ತಿದೆ ಗ್ರಾಮೀಣ ಪ್ರದೇಶದ ಜನರು ರೋಗಗಳು ಬರುವ ಮುನ್ನ ಎಚ್ಚರವಹಿಸಿದರೆ ಆಸ್ಪತ್ರೆ ಮತ್ತು ಮಾತ್ರೆಗಳಿಂದ ದೂರ ಇರಬಹುದು ಎಂದರು.
ಇನ್ನೂ ಇದೇ ವೇಳೆ ನಿವೃತ್ತ
ಕೆಎಎಸ್ ಅಧಿಕಾರಿ ಎನ್ ರಘುಮೂರ್ತಿ ನಲಗೇತನಹಟ್ಟಿ ಗ್ರಾ.ಪಂ. ಅಧ್ಯಕ್ಷ ಹಾಲಿ ಸದಸ್ಯ ಪಿ.ಎನ್ . ಮುತ್ತಯ್ಯ ಜನ್ಮದಿನದ ಶುಭಾಶಯಗಳು ಹೇಳಿ ಸನ್ಮಾನಿಸಿ. ಮಾತನಾಡಿದ ಅವರು ವೈದ್ಯರು ತಮ್ಮ ನಿಸ್ವಾರ್ಥ ಸೇವೆ ಸಮಾಜಕ್ಕೆ ನೀಡುತ್ತಾರೆ ಗ್ರಾಮೀಣ ಪ್ರದೇಶದ ಬಡ ಜನರಿಗೆ ಬಸವೇಶ್ವರ ಮೆಡಿಕಲ್ ಕಾಲೇಜ್ ಚಿತ್ರದುರ್ಗ ಇವರ ಸೇವೆ ಶ್ಲಾಘನೀಯ ಎಂದರು.
ಇನ್ನೂ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸುಮಾರು 200 ರೋಗಿಗಳಿಗೆ ತಪಾಸಣೆಯನ್ನು ನಡೆಸಲಾಯಿತು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಈಗಲೂ ಬೋರಯ್ಯ, ಸದಸ್ಯರಾದ ಗೌಡ್ರು ಬೋರಯ್ಯ, ಜೆ. ಮಲ್ಲಿಕಾರ್ಜುನ, ಗ್ರಾಮಸ್ಥರಾದ ಪೂಜಾರಿ ಬೋರಮುತ್ತೆ, ಗೌಡ್ರು ಬೋರಯ್ಯ, ಎಸ್ ಜಿ. ಸಣ್ಣ ಬೋರಯ್ಯ, ನಿಂಗರಾಜ್, ಎಂ. ಬಿ. ಸಣ್ಣ ಬೋರಯ್ಯ, ಡಾ. ಎಂ.ಪಿ. ಮಂಜುನಾಥ್, ಎಂ. ಒ. ಮಂಜು,ಡಾ. ಕೆ. ಬೊಮ್ಮಯ್ಯ, ಪದವೀಧರ ಜಿ.ಓ. ಜಯಣ್ಣ, ಸಿ. ಬಿ. ಕೃಷ್ಣಮೂರ್ತಿ, ಬಸವೇಶ್ವರ ಮೆಡಿಕಲ್ ಕಾಲೇಜಿ ಆಸ್ಪತ್ರೆಯ ಡಾ. ಪ್ರಸಾದ್ ನೇತೃತ್ವದಲ್ಲಿ ತಂಡ ಡಾ. ಅಕ್ಷಯ,ಡಾ. ರಾಹುಲ್ ರೆಡ್ಡಿ, ಪಿ.ವಿ. ಸಾಲಿಕ, ತೇಜಸ್, ಪ್ರಶಾಂತ್ ಗೌಡರ್ , ಚೇತನ್ ಎನ್, ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಬಿ.ವಿ.ನಾಥ್, ಸಹ ಶಿಕ್ಷಕರಾದ ಸತೀಶ್ ಬಾಬು, ಜೋತಿ, ಅಬ್ದುಲ್ ಮುಜೀಬ್, ದೈಹಿಕ ಶಿಕ್ಷಕ ತಿಪ್ಪೇಸ್ವಾಮಿ, ಹರೀಶ್, ನಿಂಗರಾಜ್, ಆಶಾ ಕಾರ್ಯಕರ್ತೆರಾದ ಅನುಸೂಯಮ್ಮ,ಕೆ.ಬಿ. ಪಾಪಮ್ಮ, ಎಸ್ ಮಂಜುಳ, ಗ್ರಾಮಸ್ಥರು ಉಪಸ್ಥಿತರಿದ್ದರು.