ಚಳ್ಳಕೆರೆ :
ಚಿತ್ರದುರ್ಗ: ಕೋಟೆ ನಾಡಿನಲ್ಲಿ ಹೆಚ್ಚಿದ ಮೈಕ್ರೋ
ಫೈನಾನ್ಸ್ ಹಾವಳಿ
ಮೈಕ್ರೋ ಫೈನಾನ್ಸ್ ಹಾವಳಿಯಿಂದ ಹಳ್ಳಿಗಳಲ್ಲಿ ಜನ ಬದುಕು
ದುಸ್ತರವಾಗಿದೆ.
40% ಬಡ್ಡಿ ಹಣ ಕಟ್ಟಲು ಅಮಾಯಕರು ಮನೆ
ಮಠ ಮಾರಿಕೊಳ್ಳುವ ಸ್ಥಿತಿ ಉದ್ಭವವಾಗಿದೆ ಎಂದು ರಾಜ್ಯ ಮಾಹಿತಿ
ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ರಾಜ್ಯಾಧ್ಯಕ್ಷ
ರಮೇಶ್ ಆರೋಪಿಸಿದರು.
ಚಿತ್ರದುರ್ಗದಲ್ಲಿ ಡಿಸಿ ಕಚೇರಿ ಬಳಿ
ಪ್ರತಿಭಟನೆಯಲ್ಲಿ ಮಾತಾಡಿ, ಹಳ್ಳಿಗಳಲ್ಲಿ ಎತ್ತು, ಹಸು, ಜಮೀನು
ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ದುರಂತವೆಂದರೆ, ಕಾಲೇಜ್
ವಿದ್ಯಾರ್ಥಿಗಳು ಕೆಲಸ ಮಾಡಿ ಸಾಲ ಕಟ್ಟುತ್ತಿದ್ದಾರೆ ಎಂದರು.

