ಚಳ್ಳಕೆರೆ :
ಮೊಳಕಾಲ್ಕೂರು: ಕೈ ಕೈ ಮಿಲಾಸುವ ಹಂತಕ್ಕೋದ
ಸದಸ್ಯರು
ಮೊಳಕಾಲ್ಮುರಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ
ಅಭಿವೃದ್ಧಿ ಬ್ಯಾಂಕ್(ಪಿಎಲ್ಡಿ) ಆಡಳಿತ ಮಂಡಳಿ ನಿರ್ದೇಶಕರ
ಆಯ್ಕೆ ಚುನಾವಣೆಯ ಪ್ರಕ್ರಿಯೆಯಲ್ಲಿ, ಕಾನೂನು ಉಲ್ಲಂಘಿಸಿ
ನಡೆಸುವ ಹುನ್ನಾರ ಕೈಗೊಳ್ಳಲಾಗುತ್ತಿದೆ ಎಂದು ಆರೋಪಿಸಿ ಇಂದು
ಕೆಲವು ಮತದಾರರು ಚುನಾವಣಾಧಿಕಾರಿ ಕೆ. ಮಹೇಶ್ ರನ್ನು
ತರಾಟೆ ತೆಗೆದುಕೊಂಡರು. ಬ್ಯಾಂಕ್ ಕಾರ್ಯದರ್ಶಿ ನಾಗರಾಜ್
ಮತದಾರ ಹಾಗೂ ಸದಸ್ಯರಿಗೆ ಚುನಾವಣೆ ಸಂಬಂಧ ಮಾಹಿತಿ
ನೀಡದೆ, ಕಡೆಗಾಣಿಸಿದ್ದಾರೆಂದು ಕೈಕೈ ಮಿಲಾಯಿಸುವ ಹಂತಕ್ಕೆ
ಹೋಗಿದ್ದು ಕಂಡು ಬಂತು.

