“ವಿದ್ಯಾರ್ಥಿಗಳು ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು” -ಟಿ ರತ್ನಮ್ಮ ಚೆನ್ನಬಸಪ್ಪ ಅನಿಸಿಕೆ.

ಚಳ್ಳಕೆರೆ:- ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ವಿದ್ಯಾಭ್ಯಾಸದ ಜೊತೆಗೆ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಚಿತ್ರದುರ್ಗ ತಾಲ್ಲೂಕು ಶಾಸಕ ವಿರೇಂದ್ರ ಪಪ್ಪಿ ಅವರ ತಾಯಿ- ವಾಣಿಜ್ಯೋದ್ಯಮಿ ಟಿ.ರತ್ನಮ್ಮ ಚೆನ್ನಬಸಪ್ಪ ತಿಳಿಸಿದರು.

ತಾಲ್ಲೂಕಿನ ಸಿದ್ದಾಪುರ ಗ್ರಾಮದ ಶ್ರೀಶಾರದಾಂಬ ಗ್ರಾಮಾಂತರ ಪ್ರೌಢಶಾಲೆಯ ಆವರಣದಲ್ಲಿ ಸ್ವಾಮಿ ವಿವೇಕಾನಂದರ 163ನೇ ಜಯಂತ್ಯುತ್ಸವದ ಪ್ರಯುಕ್ತ ಆಯೋಜಿಸಿದ್ದ “ಪೀಠೋಪಕರಣಗಳ ವಿತರಣಾ ಕಾರ್ಯಕ್ರಮ”ವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಪೀಠೋಪಕರಣಗಳನ್ನು ಅತ್ಯಂತ ಸಮರ್ಥವಾಗಿ ಸದುಪಯೋಗ ಪಡಿಸಿಕೊಂಡು ಶೈಕ್ಷಣಿಕವಾಗಿ ಮುಂದುವರಿಯಬೇಕು ಎಂದು ಕಿವಿಮಾತು ಹೇಳಿದರು.

ಕವಿ-ಪತ್ರಕರ್ತ ಕೊರ್ಲಕುಂಟೆ ತಿಪ್ಪೇಸ್ವಾಮಿ ಮಾತನಾಡಿ:-ಇಂದು ಉತ್ತಮವಾದ ವಿದ್ಯೆ ಕಲಿಸುವಂತಹ ಶಿಕ್ಷಕರ ಅಗತ್ಯವಿದೆ.ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕಲಿಸುವ ಬದ್ಧತೆ ಶಿಕ್ಷಕರಿಗೆ ಇರಬೇಕು.ಶಿಕ್ಷಣಕ್ಕಾಗಿ ತಮ್ಮ ಸ್ವಂತ ಭೂಮಿಯನ್ನೇ ಉಚಿತವಾಗಿ ನೀಡಿದ ಮಹನೀಯರ ಪರಂಪರೆ ನಮ್ಮದು.ಈ ಹೊತ್ತಿನಲ್ಲಿ ಮಕ್ಕಳ ಉತ್ತಮ ವಿದ್ಯಾಭ್ಯಾಸಕ್ಕಾಗಿ ಡಯಾಸ್,ಚೇರ್,ತಟ್ಟೆ ಲೋಟ ಹಾಗೂ ಮಹಾತ್ಮರ ಫೋಟೋಗಳನ್ನು ಶಾಲೆಗೆ ಕೊಡುಗೆಯಾಗಿ ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದರ ಕುರಿತ “ವಿದ್ಯುತ್ ವಾಣಿ” ಪುಸ್ತಕ ಮತ್ತು ಪೆನ್ನನ್ನು ವಿತರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಪತ್ರಕರ್ತ ಬೆಳಗೆರೆ ಸುರೇಶ್,ದಾನಿಗಳಾದ ಶ್ರೀಮತಿ ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಗೀತಾ ನಾಗರಾಜ್, ಗಂಗಾಂಬಿಕೆ ರವಿ, ವಿಶಾಲಾಕ್ಷಿ ಪುಟ್ಟಣ್ಣ, ಎಸ್ ಎನ್ ಗಂಗಮ್ಮ ಮಹಂತೇಶ್, ಶ್ರೀಶಾರದಾಂಬ ವಿದ್ಯಾಸಂಸ್ಥೆಯ ಅಧ್ಯಕ್ಷ ಸಿ‌.ಮುನಿಸ್ವಾಮಿ, ಕಾರ್ಯದರ್ಶಿ ಎಸ್ ಟಿ ಚಿದಾನಂದಸ್ವಾಮಿ, ಮುಖ್ಯ ಶಿಕ್ಷಕಿ ಎಂ ಶಿಲ್ಪಾ ರುದ್ರಮುನಿ,ಗೌರವ ಶಿಕ್ಷಕರಾದ ಬಸವರಾಜ್, ಅಂಜಿನಪ್ಪ, ಕೆ.ಎಸ್ ಬಸವರಾಜ್ , ಮಂಜುನಾಥ ಟಿ.ಎಂ. ಮಂಜುನಾಥ ಹೆಚ್, ಯತೀಶ್ ಎಂ ಸಿದ್ದಾಪುರ, ಎಸ್ ಆರ್ ರಂಗಸ್ವಾಮಿ, ನಾಗಭೂಷಣ್, ಅನಿತಾಲಕ್ಷ್ಮೀ, ತಿಮ್ಮಕ್ಕ,ದ್ಯಾಮಕ್ಕ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!