ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ಬಿತ್ತಿ ಜನಮಾನಸಕ್ಕೆ ನೀಡಿದ ಸ್ಪೂರ್ತಿ ಈ 76ನೇ ಗಣರಾಜ್ಯೋತ್ಸವ : ಶಾಸಕ ಟಿ.ರಘುಮೂರ್ತಿ

76ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಸಂದೇಶ

ಚಳ್ಳಕೆರೆ : ಪ್ರಜಾಪ್ರಭುತ್ವ ರಾಷ್ಟ್ರವೆಂಬ ಹೆಮ್ಮೆಯ ದೇಶ ಭಾರತ ಮಹಾ ಮಾನವತಾವಾದಿ ಸಮತೆಯ ಶಿಲ್ಪಿ ಡಾ.ಬಿಆರ್.ಅಂಬೇಡ್ಕರ್ ಸಮಿತಿಯ ಭಾರತದಂತಹ ಬಹು ಸಂಸ್ಕೃತಿಯ ಬೃಹತ್ ದೇಶಕ್ಕೆ ನಿತ್ಯ ನೂತನವೂ, ಸತ್ಯ ಚೇತನವಾದ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ಬಿತ್ತಿ ಜನಮಾನಸಕ್ಕೆ ನೀಡಿದ ಸ್ಪೂರ್ತಿ ಈ 76ನೇ ಗಣರಾಜ್ಯೋತ್ಸವಕ್ಕೆ ಸಿಕ್ಕ ಪ್ರತಿಫಲವಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ಅವರು ನಗರದ ಬಿಎಂಜಿಹೆಚ್‌ಎಸ್ ಬಯಲು ರಂಗಮಂದಿರ ಆವರಣದಲ್ಲಿ ಹಮ್ಮಿಕೊಂಡಿದ್ದ 76ನೇ ಗಣರಾಜ್ಯೋತ್ಸವ ದಿನಾಚರಣೆಯ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಅವರು,

ಯುವಜನರಲ್ಲಿ ಸ್ಪೂರ್ತಿ ತುಂಬಿದ ಮಹಾನ್ ಯುಗಪುರುಷರು ಬುಧ್ದ, ಬಸವ ಡಾ.ಬಿಆರ್.ಅಂಬೇಡ್ಕರ್ ಈಗೇ ಅನೇಕ ಮಂದಿ ತಮ್ಮ ಪ್ರಾಣವನ್ನು ಪಣಕಿಟ್ಟು ನಮಗೆ ಸ್ವಾತಂತ್ರ್ಯವನ್ನು ತಂದು ಜನ ಸಾಮಾನ್ಯರ ಏಳಿಗೆಗೆ ಕಾನೂನುಗಳ ತಂದು ಕೊಟ್ಟ ಸುದಿನ ಈ ಗಣರಾಜ್ಯೋತ್ಸವವಾಗಿದೆ ಎಂದರು.

ಕಳೆದ ಹನ್ನೆರಡು ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ, ಹಾಗೂ ಹಲವು ಯೋಜನೆಗಳನ್ನು ಕ್ಣೇತ್ರದಲ್ಲಿ ಅಭಿವೃದ್ದಿ ಮಾಡುವ ಮೂಲಕ ಹೆಚ್ ಪಿಪಿಸಿ ಪ್ರಥಮ ದರ್ಜೆ ಕಾಲೇಜನ್ನು ಯುನಿವರ್ಸಿಟಿ ಮಾಡುವುದು, ಹಾಗೂ ತಾಲ್ಲೂಕು ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆಯ ರೀತಿಯಲ್ಲಿ ಮೇಲ್ದರ್ಜೆಗೆರಿಸುವುದು ಈಗೇ ಬಡ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಾ, ಕ್ಷೇತ್ರದ ಜನರ ಸಹಕಾರ ತುಂಬಾ ಮುಖ್ಯ ಅಂತಹ ಅವಕಾಶ ಕೊಟ್ಟ ಮತದಾರರಿಗೆ ನಾನು ಸದಾ ಋಣಿಯಾಗಿರುತ್ತೆನೆ, ಈಗೇ ಅಭಿವೃದ್ಧಿ ಪೂರಕವಾಗಿ ಕೆಲಸವನ್ನು ಮಾಡಲು ರಾಜಾಕೀಯ ಶಕ್ತಿ ನೀಡಿದ ಮತದಾರರು ಮೂರನೇ ಬಾರಿಗೆ ಶಾಸಕನನ್ನಾಗಿ ಮಾಡಿದ್ದಕ್ಕೆ ನಿಮಗೆ ಧನ್ಯವಾದಗಳನ್ನು ಅರ್ಪಿಸುತ್ತೆನೆ ಎಂದರು.

ಇನ್ನೂ ತಾಲ್ಲೂಕಿನ ದಂಢಾಧಿಕಾರಿಗಳಾದ ತಹಶೀಲ್ದಾರ್ ರೇಹಾನ್ ಪಾಷ ಧ್ವಜಾರೋಹಣ ನೆರೆವೆರಿಸಿ ನಂತರ ಮಾತನಾಡಿದ ಅವರು,
ಈ ದಿನ ಪ್ರಜಾಪ್ರಭುತ್ವದ ಹಬ್ಬ ಎಂದರೆ ತಪ್ಪಾಗಲಾರದು ಎಲ್ಲರಿಗೂ
76 ನೇ ಗಣರಾಜ್ಯೋತ್ಸವ ದಿನಾಚರಣೆಯ ಶುಭಾಷಯಗಳು
ಏಕೆಂದರೆ ಭಾರತ ಒಂದು ಸಾರ್ವಭೌಮ ರಾಷ್ಟ್ರ, ಸಮಾಜವಾದಿ ರಾಷ್ಟ್ರ, ಪ್ರಜಾಸತ್ತಾತ್ಮಕ ಗಣರಾಜ್ಯ ಹಾಗೂ ಜಾತ್ಯತೀತ ರಾಷ್ಟ್ರವೂ ಆಗಿದೆ.

ಪ್ರಜಾಪ್ರಭುತ್ವದ ಅಧಿಕಾರ ಇರುವುದು ಪ್ರಜೆಗಳಲ್ಲಿ,
ಚುನಾಯಿತ ಪ್ರತಿನಿಧಿಗಳು ಸಂವಿಧಾನಕ್ಕೆ ಬದ್ಧರಾಗಿ ಅಧಿಕಾರ ನಡೆಸುತ್ತಾರೆ. ಹಾಗಾಗಿ ತಮ್ಮ ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಬೇಕು.

ಗಣತಂತ್ರದ ವ್ಯವಸ್ಥೆಯಲ್ಲಿರುವ ನಾವೆಲ್ಲರೂ ಸಂವಿಧಾನದ
ಮೌಲ್ಯಗಳನ್ನು ಎತ್ತಿ ಹಿಡಿಯಬೇಕು. ಆಗ ಮಾತ್ರ ದೇಶದ ಗಣರಾಜ್ಯ ಹಾಗೂ ಪ್ರಜಾಪ್ರಭುತ್ವಕ್ಕೆ ಅರ್ಥ ಬರುತ್ತದೆ ಎಂದು ಹೇಳುತ್ತಾ ಎಲ್ಲರಿಗೂ ಮತ್ತೊಮ್ಮೆ
76 ನೇ ಗಣರಾಜ್ಯೋತ್ಸವದ ಶುಭಾಷಯಗಳನ್ನು ಕೋರುತ್ತೆನೆ ಎಂದು ಗಣರಾಜ್ಯೋತ್ಸವದ ಸಂದೇಶ ಸಾರಿದರು.

ಗಣರಾಜ್ಯೋತ್ಸವ ದಿನ ಸಾಂಸ್ಕçತಿಕ ಗೀತೆಗಳ ಮೂಲಕ ದೇಶಕ್ಕಾಗಿ ಮಡಿದ ವೀರರ ಚರಿತ್ರೆಯನ್ನು ನಾಡಿನ ಜನತೆಗೆ ನೃತ್ಯದ ಮೂಲಕ ಹರಿವು ಮೂಡಿಸುವ ಮೂಲಕ ವಿವಿಧ ಶಾಲೆಯ ಮಕ್ಕಳು ನೃತ್ಯವನ್ನು ಮಾಡಿದರು. ವಿಶೇಷವಾಗಿ ಅಂಬೇಡ್ಕರ್ ಒಳಗೊಂಡ ‌ಗೀತೆಗೆ ಮಕ್ಕಳ ಪ್ರದರ್ಶನ ಗಮನ ಸೆಳೆಯಿತು.

ಇದೇ ಸಂಧರ್ಭದಲ್ಲಿ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ನಗರಸಭೆ ಅಧ್ಯಕ್ಷೆ ಜೈತುಂಬಿ, ಉಪಾಧ್ಯಕ್ಷೆ ಸುಮ ಭರಮಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ, ನಗರಸಭೆ ಸದಸ್ಯ ಎಂ.ಜೆ.ರಾಘವೇಂದ್ರ, ರಮೇಶ್ ಗೌಡ, ಶಿವಕುಮಾರ್, ವಿಶುಕುಮಾರ್, ಟಿ.ಚಳ್ಳಕೆರೆಪ್ಪ, ಕೆ.ವೀರಭದ್ರಯ್ಯ,
ಕವಿತಾ, ಶಿಲ್ಪ ಮುರುಳಿ, ಸುಜತಾ, ಸುಮಕ್ಕ, ಪಾಲಮ್ಮ, ಹೆಚ್.ಪ್ರಶಾಂತ್ ಕುಮಾರ್‌, ಸಿಬಿ.ಜಯಲಕ್ಷ್ಮಿ, ಓ.ಸುಜತಾ,ಮಂಜುಳಾ,ಗದ್ದಿಗೆ ತಿಪ್ಪೇಸ್ವಾಮಿ, ಜಿ.ಟಿ.ವೀರಭದ್ರಸ್ವಾಮಿ,
ಇಓ.ಶಶಿಧರ್, ಬಿಇಓ ಕೆ.ಎಸ್.ಸುರೇಶ್, ಪೌರಾಯುಕ್ತ ಜಗರೆಡ್ಡಿ, ಕೃಷಿ ಅಧಿಕಾರಿ. ಆರ್.ಅಶೋಕ್, ಡಿವೈಎಸ್‌ಪಿ. ಬಿಟಿ.ರಾಜಣ್ಣ, ಸಿಪಿಐ ಮಂಜುನಾಥ್, ಪಿಐ ಆರ್.ಎಪ್.ದೇಸಾಯಿ, ಪಿಎಸ್‌ಐ ಶಿವರಾಜ್, ಧರೇಪ್ಪ ಬಾಳಪ್ಪ, ತೋಟಗಾರಿಕೆ ಅಧಿಕಾರಿ ವಿರುಪಾಕ್ಷಪ್ಪ, ಪಶು ಇಲಾಕೆ ಡಾ.ರೇವಣ್ಣ, ಗ್ರಾಮ ಲೆಕ್ಕಾಧಿಕಾರಿಗಳ ತಾಲೂಕು ಅಧ್ಯಕ್ಷ ಪ್ರಕಾಶ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಜಿಟಿ.ವೀರಭದ್ರಸ್ವಾಮಿ, ತಾಲೂಕು ಮಟ್ಟದ ಅಧಿಕಾರಿಗಳು ಮುಖಂಡರು ಹಾಗೂ ಮಕ್ಕಳು ಮತ್ತಿತರರು ಇದ್ದರು.

ಇದೇ ಸಂಧರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ
ಮಾಡಿದ ತನುಜಾ,
ಎಂ.ಆರ್.ಶಂಕರ್‌ಶೆಟ್ಟಿ ,
ಸಿ.ಚಿತ್ರಯ್ಯ
ಬಿ.ವಿ.ಮನೋಹರ
ಟಿ.ಇ.ಮಂಜುನಾಥ್,
ಆರ್.ದೊಡ್ಡರಂಗಪ್ಪ ,
ಜೋಗಯ್ಯ ಕಿಲಾರಿ,
ಚಂದ್ರಣ್ಣ ಜಿ,
ಸುಮಲತ,
ಜಿ.ವಿ.ರಾಜಣ್ಣ
ಗಣ್ಯರಿಗೆ ‌ ಶಾಸಕ ಟಿ.ರಘುಮೂರ್ತಿ ಸನ್ಮಾನಿಸಿದರು,

ಪೋಟೋ, 1 ಚಳ್ಳಕೆರೆ ನಗರದಲ್ಲಿ 76ನೇ ಗಣರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮವನ್ನು ತಹಶೀಲ್ದಾರ್ ರೇಹಾನ್ ಪಾಷ ನೆರೆವೆರಿಸಿದರು.

ಪೋಟೋ, 2 ಗಣರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿಕೊಂಡ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಮಾತನಾಡಿದರು.

ಪೋಟೋ, 3 ಗಣರಾಜ್ಯೋತ್ಸವದಲ್ಲಿ ವಿವಿಧ ಕೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಸನ್ಮಾನ ಮಾಡಿದರು.

ಪೋಟೋ 4 , ಗಣರಾಜ್ಯೋತ್ಸವದಲ್ಲಿ ಶಾಲಾ ಮಕ್ಕಳು ನೃತ್ಯ ಪ್ರದರ್ಶಿಸಿದರು

About The Author

Namma Challakere Local News
error: Content is protected !!