ಚಳ್ಳಕೆರೆ : ವಿಶ್ವ ಪರಿಸರ ದಿನ ಎಂದರೆ ಅಂದು ಗಿಡ ನೆಟ್ಟು ನೀರು ಹಾಕಿದರೆ ಸಾಲದು, ಗಿಡ ಮರಗಳನ್ನು ಬೆಳೆಸುವುದನ್ನು ರೂಡಿಸಿಕೊಳ್ಳಬೇಕು ಎಂದು ಶಾಸಕಬಟಿ.ರಘುಮೂರ್ತಿ ಹೇಳಿದ್ದಾರೆ.
ನಗರದ ಜಿಟಿಟಿಸಿ ಕೇಂದ್ರದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಾಮಾಜಿಕ ವಲಯ ಅರಣ್ಯ ಹಾಗೂ ಪ್ರಾದೇಶಿಕ ವಲಯ ಅರಣ್ಯ ಇಲಾಕೆ, ಜಿ.ಟಿ.ಟಿ.ಸಿ. ಸೆಂಟರ್ ನಲ್ಲಿ ತಾಲೂಕು ಆಡಳಿತ ಹಾಗೂ ಕಾನೂನು ಪ್ರಾಧಿಕಾರ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಹಮ್ಕಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿದರು.
ಬೀಸಿಲಿನ ತಾಪಮಾನ ಹೆಚ್ಚಿರುವ ನಮ್ಮ ಹೋಬಳಿ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಗಿಡಗಳನ್ನು ನೆಟ್ಟು ಪೋಷಣೆ ಮಾಡಿ ಬೆಳೆಸಬೇಕು. ಬಿಸಿಲಿನ ತಾಪಮಾನದಿಂದ ಮುಕ್ತಿ ಕಾಣಬೇಕು ಎಂದರೆ ಗಿಡ-ಮರಗಳನ್ನು ಬೆಳೆಸಬೇಕು ಎಂದು ತಿಳಿಸಿದರು…
ಅರಣ್ಯ ಅಧಿಕಾರಿ ರಾಜಶೇಖರ್ ಮಾತನಾಡಿ
ಶಾಲಾ- ಮಕ್ಕಳು ಗಿಡಿಗಳನ್ನು ದತ್ತು ತೆಗೆದುಕೊಂಡು ನೀರು ಗೊಬ್ಬರ ಹಾಕಿ ಪೋಷಣೆ ಮಾಡಿ ಬೆಳೆಸಬೇಕು. ಗಿಡಿಗಳು ಬೆಳಸಿದರೆ ಉತ್ತಮ ಗಾಳಿ ಸಿಗುವುದರ ಜೊತೆಗೆ ನಮ್ಮ ಸುತ್ತಮುತ್ತ ಸುಂದರ ವಾತವರಣ ನಿರ್ಮಾಣವಾಗುತ್ತದೆ ಎಂದು ಹೇಳಿದರು…..
ಗಿಡಗಳನ್ನು ನೆಟ್ಟು ಬೆಳೆಸ ಬೇಕು ಎಂದು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿಕೊಂಡರು ..
ಈ ಸಂದರ್ಭದಲ್ಲಿ ವಲಯ ಅರಣ್ಯ ಅಧಿಕಾರಿಗಳಾದ ರಾಜಶೇಖರ, ಸಾಮಾಜಿಕ ವಲಯ ಅರಣ್ಯಾಧಿಕಾರಿಗಳಾದ ಬಾಬು, ಜಿ.ಟಿ.ಟಿ.ಸಿ. ಸೆಂಟರ್ ಪ್ರಾಂಶುಪಾಲರಾದ ತಿಪ್ಪೇಸ್ವಾಮಿ, ನಗರಸಭೆ ಅಧ್ಯಕ್ಷೆ ಸುಮಕ್ಕ ಅಂಜಿನಪ್ಪ, ಉಪಾಧ್ಯಕ್ಷೆ ಮಂಜುಳಾ ಆರ್ ಪ್ರಸನ್ನ ಕುಮಾರ್, ಸದಸ್ಯರುಗಳಾದ ಸುಮಾ ಭರಮಯ್ಯ, ಮಲ್ಲಿಕಾರ್ಜುನ, ರಮೇಶ್ ಗೌಡ , ರಾಘವೇಂದ್ರ, ಹಾಗೂ ಮುಖಂಡರು ಕಾರ್ಯಕರ್ತರು ಪಾಲ್ಗೊಂಡಿದ್ದರು.