ಚಳ್ಳಕೆರೆ : ನಗರದಲ್ಲಿ ರಾತ್ರಿಸುರಿದ ಬಾರಿ ಗುಡುಗು ಸಹಿತ ಮಳೆ ಗಾಳಿಗೆ ನೆಹರು ವೃತ್ತದಲ್ಲಿ ಕೆಲ ಅಂಗಡಿಗಳ ಮುಂದೆ ಅಳವಡಿಸಿದ್ದ ಶಿಟ್ ಗಳು ಗಾಳಿಗೆ ಹಾರಿ ಮಧ್ಯೆ ರಸ್ತೆಗೆ ಬಿದ್ದು ಅಪಾರ ಹಾನಿಯಾಗಿದೆ
ಶಿಟ್ನ ತಗಡು ಮುರಿದ ಬಿದ್ದ ಪರಿಣಾಮ ಒಂದು ಆಟೋ ಐದು ಬೈಕ್ ಗಳನ್ನು ಸಂಪೂರ್ಣವಾಗಿ ಜಖಂ ಹಾಗಿದ್ದವು,
ಖಾಸಗಿ ಮನೆಯ ಮೇಲೆ ಅಳವಡಿಸಿದ ಜಾಹಿರಾತು ಫಲಕ ಗಾಳಿಗೆ ಮುರಿದು ರಸ್ತೆಗೆ ಬಿದ್ದ ಪರಿಣಾಮ ಕೆಲ ಕಾಲ ಬೆಂಗಳೂರು ಹಾಗೂ ಬಳ್ಳಾರಿ ಮಾರ್ಗದ ರಾಜ್ಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಯಿತು,
ಇನ್ನೂ ನಗರದ ಹಲವು ಕಡೆಗಳಲ್ಲಿ ರಸ್ತೆಯ ಮೇಲೆ ನೀರು ನಿಂತ ಪರಿಣಾಮ ವಾಹನ ಸಾವಾರರು ಪರದಾಡುವಂತಾಯಿತು
ನಗರದ ತಗ್ಗು ಪ್ರದೇಶಗಳಾದ ಅಂಬೇಡ್ಕರ್ ನಗರ, ರಹಿಂನಗರ, ಗಾಂಧಿ ನಗರ, ಶಾಂತಿನಗರದ ಮನೆಗಳಿಗೆ ನೀರುನುಗ್ಗಿದ ಪರಿಣಾಮ ಈಡೀ ರಾತ್ರಿಯಲ್ಲಿ ನಿದ್ದೆಯಿಲ್ಲದೆ ಮನೆಯಲ್ಲಿ ನೀರು ಹೊರಹಾಕಿದ್ದಾರೆ ಎನ್ನಲಾಗಿದೆ,
ನೀರಿನಿಂದ ಕೆಲ ಕಾಲ ರಸ್ತೆಗಳು ಜಾಲವೃತವಾಗಿ ಚರಂಡಿ ಮೊರೆಗಳು ತುಂಬಿ ಹರಿದವು
ಈಗೇ ನಗರದಲ್ಲಿ ಕೇವಲ ಒಂದು ಗಂಟೆಗಳ ಕಾಲ ಸುರಿದ ಬಾರಿ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ.
ಮಳೆಯಲ್ಲಿ ಹಾನಿಯಾದ ಪ್ರದೇಶಗಳಿಗೆ ತೆರಳಿದ ತಹಶೀಲ್ದಾರ್ ಎನ್ ರಘುಮೂರ್ತಿ ನೆಹರು ವೃತ್ತದಲ್ಲಿ ಸಂಚಾರಕ್ಕೆ ಅಡಚಣೆ ಉಂಟಾದ ಸಮಸ್ಯೆ ತಿಳಿಗೊಳಿಸಿ, ಐದು ಬೈಕ್ ಹಾಗೂ ಒಂದು ಆಟೋ ಜಖಂ ಆದ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿಯೊಂದಿಗೆ ಬೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ.