ಚಳ್ಳಕೆರೆ : ಕಾರು ಮತ್ತು ಎರಡು ಬೈಕ್ ಗಳ ಮಧ್ಯೆ ಅಪಘಾತ : ಓರ್ವ ಸಾವು.
ಚಳ್ಳಕೆರೆ ಮಾರ್ಗವಾಗಿ ಚಲಿಸುತ್ತಿದ್ದ ಬೈಕ್ ಹಾಗೂ ಚಿತ್ರದುರ್ಗದ ಮಾರ್ಗವಾಗಿ ಕಾರು ಹಾಗೂ ಬೈಕ್ ಕುರುಡಿಹಳ್ಳಿ ಸಮೀಪದ ಅರಣ್ಯ ವಲಯದ ತಿರುವಿನಲ್ಲಿ ಈ ಅಪಘಾತ ಸಂಭವಿಸಿದೆ.
ಇನ್ನೂ ಚಳ್ಳಕೆರೆ ಮಾರ್ಗದ ಮೂಲಕ ಚಿತ್ರದುರ್ಗವಾಗಿ ತೆರಳುತ್ತಿದ್ದ ಹೊಳಲ್ಕೆರೆ ತಾಲೂಕಿನ ರಾಮನಹಳ್ಳಿ ಗ್ರಾಮದ ತಿಪ್ಪೇಶಿ(24) ಎಂಬ ವ್ಯಕ್ತಿ ಸ್ಥಳದಲ್ಲೇ ಸಾವಿಗಿಡಾಗಿದ್ದು.
ಇನ್ನು ಇನ್ನೋರ್ವ ಬೈಕ್ ನಲ್ಲಿ ಇದ್ದ ಇಬ್ಬರೂ ಘಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಅಪಘಾತಕ್ಕೆ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ, ಸ್ಥಳಕ್ಕೆ ಪಿಎಸ್ಐ ಕೆ.ಸತೀಶ್ ನಾಯ್ಕ್, ಹೆಚ್. ಸಿ ರವಿಕುಮಾರ್, ಹಾಗೂ ಪೊಲೀಸ್ ಸಿಬ್ಬಂದಿ ವರ್ಗ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

