ಚಳ್ಳಕೆರೆ : ಇಂದಿನ ಆಧುನಿಕ ಕಾಲಘಟ್ಟದಲ್ಲಿ ಕಂಪ್ಯೂಟರ್‌ ಶಿಕ್ಷಣ ಅತ್ಯಗತ್ಯ ಆದ್ದರಿಂದ ತರಬೇತಿ ಕಟ್ಟಡ ಮುಕ್ತವಾಗಿದೆ ಎಂದು
ಶಾಸಕ ಟಿ.ರಘುಮೂರ್ತಿ ಹೇಳಿದರು.

ಅವರು ನಗರದ ತ್ಯಾಗರಾಜ ನಗರದ ನಗರ,ಪಿರಮಿಡ್ ಪಾರ್ಕ್
ಸಮೀಪ
ಇಬ್ರಾ ಯೂನಿವರ್ಸಲ್ ಎಜುಶೇಷನಲ್ ಮತ್ತು
ವೆಲ್‌ಫೇರ್ ಟ್ರಸ್ಟ್ ವತಿಯಿಂದ ಇಬ್ರಾ ಕಂಪ್ಯೂಟರ್
ಸೆಂಟರ್ ಸುಮಾರು 70 ಲಕ್ಷ ರೂ ವೆಚ್ಚದ ನೂತನ ಕಟ್ಟಡ
ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ
ಮಾತನಾಡಿದರು.

ಹಿಂದೂಳಿದ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಎಲ್ಲರೂ ಒತ್ತು‌ ನೀಡಬೇಕು, ಹಾಗೇ
ಮುಸ್ಲಿಂ ಬಾದವರು ಒಗ್ಗಟ್ಟಿನಿಂದ ಎಜುಕೇಶನ್ ಟ್ರಸ್ಟ್
ಮಾಡಿ ಶಿಕ್ಷಣ ನೀಡುತ್ತಿರುವುದು ಒಳ್ಳೆಯ ಬೆಳವಳಿಗೆ
ಆರ್ಥಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದ ಬಡ ಕುಟುಂಬದ
ಮಕ್ಕಳಿಗೆ ಶಿಕ್ಷಣ ಸೌಲಭ್ಯ ದೊರೆಯುವಂತಾಗ ಬೇಕು
ಎಂದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಜಯತುಂನ್ ಬಿ.,
ಉಪಾಧ್ಯಕ್ಷೆ ಸುಮಕ್ಕ ಭರಮಣ್ಣ, ಸದಸ್ಯರಾದ
ರಾಘವೇಂದ್ರ, ವೀರಭದ್ರಪ್ಪ, ಅನ್ವರ್ , ಭದ್ರಿ, ಗ್ಯಾರೆಂಟಿ
ಸಮಿತಿ ಅಧ್ಯಕ್ಷ ಗದ್ದಿಗೆತಿಪ್ಪೇಸ್ವಾಮಿ, ಇಬ್ರಾ
ಯೂನಿವರ್ಸಲ್ ಎಜುಶೇಷನಲ್ ಮತ್ತು ವೆಲ್‌ಫೇರ್
ಟ್ರಸ್ಟ್ ಪದಾಧಿಕಾರಿಗಳು ಮುಖಂಡರು ಇತರರಿದ್ದರು.

About The Author

Namma Challakere Local News
error: Content is protected !!