ಚಳ್ಳಕೆರೆ :
ದಿನಾಂಕ 23.01.2025 ರಂದು ರಾಜ್ಯದ ಮುಖಮಂತ್ರಿ ಸಿದ್ದರಾಮಯ್ಯ ರವರು ಹಾಗೂ ಉಪಮುಖ್ಯಮಂತ್ರಿ ಗಳಾದ ಡಿ ಕೆ ಶಿವಕುಮಾರ್ ರವರು ವಿ ವಿ ಪುರದ ವೇದಾವತಿ ನದಿಗೆ ಬಾಗಿನ ಅರ್ಪಿಸುವ ಸಲುವಾಗಿ ಆಗಮಿಸುವ ಹಿನ್ನೆಲೆಯಲ್ಲಿ, ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಆಗದಂತೆ ಸುಗಮ ಸಂಚಾರ ಸಲುವಾಗಿ ಈ ಕೆಳಕಂಡಂತೆ ಮಾರ್ಗ ಬದಲಾವಣೆ ಮಾಡಲಾಗಿದೆ.
1) ಹೊಸದುರ್ಗದಿಂದ – ಹಿರಿಯೂರು ಕಡೆಗೆ ಹೋಗುವವರು (ವಿ ವಿ ಪುರ ಕಡೆಗೆ ಬರದೇ ) ತಳವಾರಹಟ್ಟಿ ಮಾರ್ಗವಾಗಿ ಭರಮಗಿರಿ ಕ್ರಾಸ್ ಮುಖಾಂತರ ರಸ್ತೆಯನ್ನು ಬಳಸಿ ಹಿರಿಯೂರು ಕಡೆಗೆ ಹೋಗುವುದು.
2) ಹಿರಿಯೂರು ಕಡೆಯಿಂದ – ಹೊಸದುರ್ಗ ಕ್ಕೆ ಹೋಗುವವರು ವಿ. ವಿ ಪುರ ಕಡೆಗೆ ಹೋಗದೆ ನೇರವಾಗಿ ತಳವಾರಹಟ್ಟಿ ಮಾರ್ಗವಾಗಿ ಹೊಸದುರ್ಗ ಕಡೆಗೆ ಹೋಗುವುದು..
ವರಿಷ್ಠಾಧಿಕಾರಿಗಳು ಚಿತ್ರದುರ್ಗ ಜಿಲ್ಲೆ ಇವರ ಸೂಚನೆ ಮೇರೆಗೆ ಮಾರ್ಗ ಬದಲಾವಣೆ ಮಾಡಲಾಗಿದೆ ಎನ್ನಲಾಗಿದೆ.

