filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 37;

ಚಳ್ಳಕೆರೆ : ಜನರಿಗೆ ಅಗತ್ಯವಾಗಿ ಶುದ್ಧ ಕುಡಿಯುವ ನೀರುಕೊಡುವುದು ನಮ್ಮ ನಗರಸಭೆಯ ಆಧ್ಯ ಕರ್ತವ್ಯ ಆದರೆ ಸುಮಾರು ತಿಂಗಳುಗಳಿಂದ ರೀಪೆರಿಯಾಗದ ಘಟಕಗಳನ್ನು ಆದಷ್ಟು ಬೇಗ ದುರಸ್ತಿ ಪಡಿಸಿ ಕುಡಿಯುವ ನೀರು ಕೊಡಿ ಎಂದು ಸದಸ್ಯ ವಿಶುಕುಮಾರ್ ಹೇಳಿದರು.
ಅವರು ನಗರದ
ನಗರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಕೌನ್ಸಿಲ್ ಸಭೆಯಲ್ಲಿ ಮಾತನಾಡಿದರು
ಇಮ್ನೂ ಪ್ರಾರಂಭದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ಜಟಾಪಟಿ ನಡೆಯಿತು.

ಅದೆಂತೆ ಈ ಇಂದಿನ ಸಭೆಯಲ್ಲಿ ಅನುಮೋದಿಸಿದಂತಹ ಕಾಮಗಾರಿಗಳನ್ನು ಹಾಗೂ ಅಜೆಂಡಗಳನ್ನು ಸಭೆಯ ಗಮನಕ್ಕೆ ತಂದಾಗ , ಕೆಎಸ್ ಆರ್ ಟಿ ಬಸ್ ನಿಲ್ದಾಣ ನಿವೇಶನಕ್ಕಾಗಿ ನಗರಸಭೆಗೆ ನೀಡಿದಂತಹ 4. ಕೋಟಿ 50 ಲಕ್ಷ ಅನುದಾನವನ್ನು ನಗರದ ಖಾಸಗಿ ಬಸ್ ನಿಲ್ದಾಣದ ಕಟ್ಟಡ ನಿರ್ಮಾಣಕ್ಕೆ ಅನುಮೋದಿಸುವ ವಿಚಾರವಾಗಿ ಅಧಿಕಾರಿಗಳು ಸಭೆಯ ಗಮನಕ್ಕೆ ತಂದಾಗ ಆಡಳಿತ ಪಕ್ಷದ ಸದಸ್ಯ ಕೆ. ವೀರಭದ್ರಯ್ಯ ಮಾತನಾಡಿ ಬಯಲು ಸೀಮೆಯ ಜನರಿಗೆ ಆಶ್ರಯ ನೀಡುವುದು, ಗ್ರಾಮೀಣ ಪ್ರದೇಶಗಳಿಂದ ಪ್ರತಿನಿತ್ಯ ನಗರಕ್ಕೆ ಬರುವ ಸಾರ್ವಜನಿಕರಿಗೆ ತಂಗುದಾಣ ಇಲ್ಲದೆ ಬಿಸಿಲಿನಲ್ಲಿ ಇರಬೇಕಾದಂತಹ ಸ್ಥತಿ‌ ಇದೆ, ಆದ್ದರಿಂದ ಈಗಾಗಲೇ ಅನುದಾನದ ಕೊರತೆಯಲ್ಲಿ ಸ್ಥಗಿತವಾಗಿದ್ದ ಖಾಸಗಿ ಬಸ್ ನಿಲ್ದಾಣದ ಕಟ್ಟಡವನ್ನು ಇರುವ ಅನುದಾನದಲ್ಲಿ ಪೂರ್ಣಗೊಳಿಸಬೇಕು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ವಿರೋಧ ಪಕ್ಷದ ಸದಸ್ಯ ಶ್ರೀನಿವಾಸ್ ,ವಿ ವೈ.ಪ್ರಮೋದ್, ವಿಶುಕುಮಾರ್, ಇನ್ನಿತರರು ಸೇರಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ನಿವೇಶನಕ್ಕಾಗಿ ಬಂದಂತಹ ಹಣವನ್ನು ಪಕ್ಕದಲ್ಲಿ ಇರುವಂತಹ ವಾಣಿಜ್ಯ ಮಳಿಗೆಗಳಿಗೆ ಅನುದಾನ ಹೊದಗಿಸಿ ನಗರಸಭೆಗೆ ಆಗುವಂತ ಆರ್ಥಿಕ ನಷ್ಟವನ್ನು ಸರಿದೂಗಿಸಲು ವಾಣಿಜ್ಯ ಮಳಿಗೆಗಳು ಅವಶ್ಯಕವಾಗಿದ್ದವೇ ಎಂದು ಸಭೆಯ ಗಮನ ಹರಿಸಿದರು,

ಇನ್ನು ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಜಗ ರೆಡ್ಡಿ ನಗರಸಭೆಗೆ ಆಗುವಂತ ಆರ್ಥಿಕ ನಷ್ಟವನ್ನು ಸರಿದೂಗಿಸಲು ಸದಸ್ಯರ ಕೋರಿಕೆ ಮೇರೆಗೆ ಈಗಾಗಲೇ ನಿರ್ಮಾಣಗೊಂಡ 13 ವಾಣಿಜ್ಯ ಮಳಿಗೆಗಳ ಜೊತೆಗೆ ಇನ್ನು ಹೆಚ್ಚಿನ ವಾಣಿಜ್ಯ ಮಳಿಗೆಗಳು ಕಟ್ಟಲು ಅನುಮೋದನೆಯನ್ನು ಪಡೆಯಲಾಗುತ್ತದೆ ಅದರಂತೆ ಈಗಾಗಲೇ ನಿರ್ಮಾಣಗೊಂಡ 13 ವಾಣಿಜ್ಯ ಮಳಿಗೆಗಳನ್ನು ಹರಾಜು ಪ್ರಕ್ರಿಯೆ ಮೂಲಕ ಮಾಡುತ್ತೇವೆ ಎಂದು ಸಭೆಯ ಗಮನಕ್ಕೆ ತಂದರು.

ಸದಸ್ಯರಾದ ವಿಷು ಕುಮಾರ್ ಶ್ರೀನಿವಾಸ್ ವಾಣಿಜ್ಯ ಮಳಿಗೆಗಳ ಭೂಮಿ ಪೂಜೆ ಹಾಗೂ ನಿರ್ಮಾಣಗೊಂಡಂತಹ ವಾಣಿಜ್ಯ ಮಳಿಗೆಗಳ ಹಾರಾಜು ಪ್ರಕ್ರಿಯೆ ಒಂದೇ ದಿನ ನಡೆಯಬೇಕು ಎಂದು ಸಭೆಯ ಗಮನಕ್ಕೆ ತಂದರು.

ಅದರಂತೆ ನಗರದಲ್ಲಿ ದಿನನಿತ್ಯ ಗ್ರಾಮೀಣ ಪ್ರದೇಶಗಳಿಂದ ಬಂದು ಹೋಗುವಂತಹ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಕೊಡುವುದು ನಮ್ಮ ಕರ್ತವ್ಯ ಆದರೆ ನಗರದಲ್ಲಿ ಸುಮಾರು ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ನಿಂತಿದ್ದು ನಗರಸಭೆಗೆ ಸಾರ್ವಜನಿಕರು ಶಾಪ ಹಾಕುತ್ತಿದ್ದಾರೆ,

ಆದ್ದರಿಂದ ದುರಸ್ತಿಯಲ್ಲಿರುವಂತಹ ಶುದ್ಧನಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿಪಡಿಸಿ ಸಾರ್ವಜನಿಕರಿಗೆ ನೀರು ಕೊಡುವುದು ಉತ್ತಮ, ಇನ್ನು ಅವಶ್ಯವಿದ್ದಲ್ಲಿ ಕೆಲ ಶುದ್ಧ ನೀರು ಕುಡಿಯುವ ನೀರಿನ ಘಟಕಗಳಿಗೆ ಸಾರ್ವಜನಿಕರಿಗೆ ಉಚಿತವಾಗಿ ಸೌಲಭ್ಯ ನೀಡುವುದು ಕೋರಿಕೆಯಾಗಿದೆ ಎಂದು ಹೇಳಿದಾಗ ಇಂಜಿನಿಯರ್ ಲೋಕೇಶ್ ಮಾತನಾಡಿ ಕುಡಿಯುವ ನೀರಿಗೆ ಉಚಿತವಾಗಿ ಕೊಡುವುದು ನಗರ ಸಭೆಯ ಲೆಕ್ಕಪತ್ರಕ್ಕೆ ಅಡಚಣೆ ಹಾಗುತ್ತದೆ, ಆದ್ದರಿಂದ ಇಂತಿಷ್ಟು ಹಣ ಪಡೆದು ನೀರು ಕೊಡುವುದು ಅನಿವಾರ್ಯವಾಗಿದೆ ಎಂದು ಸಭೆ ಗಮನಕ್ಕೆ ತಂದರು.

ಇನ್ನು ನಗರದಲ್ಲಿ ಮಹಾನೀಯರ ವೃತ್ತಗಳ ನಿರ್ಮಾಣ ವಿಚಾರ ಬಂದಾಗ ನಗರದ ಪಾವಗಡ ರಸ್ತೆಯಲ್ಲಿರುವಂತಹ ಬಾಲಾಜಿ ಚಿತ್ರಮಂದಿರ ಮುಂಭಾಗದ ವೃತ್ತಕ್ಕೆ ಡಿಎಸ್ಎಸ್ ಸಂಸ್ಥಾಪಕರಾದ ಬಿ ಕೃಷ್ಣಪ್ಪ ಅವರ ಹೆಸರನ್ನು ವೃತಕ್ಕೆ ನಾಮಕರಣ ಮಾಡುವ ವಿಚಾರವಾಗಿ ಸರಕಾರ ನಾಮನಿರ್ದೇಶನ ಸದಸ್ಯ ವೀರಭದ್ರಪ್ಪ ಸಭೆಯ ಗಮನಕ್ಕೆ ತಂದಾಗ, ಸದಸ್ಯ ಕೆ. ವೀರಭದ್ರಯ್ಯ ಮಾತನಾಡಿ ಬಿ ಕೃಷ್ಣಪ್ಪ ದಲಿತ ಪರ ನಾಯಕ ಇಂಥವರ ವೃತ್ತವನ್ನು ಚಿತ್ರದುರ್ಗ ರಸ್ತೆಯಲ್ಲಿ ಪ್ರಮುಖ ಸ್ಥಳದಲ್ಲಿ ನಾಮಕರಣಗೊಂಡರೆ ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಆಕ್ಷೇಪಣೆಗಳು ಅಭಿಪ್ರಾಯಗಳನ್ನು ಪರಿಗಣಿಸಿ ಮುಂದಿನ ದಿನಗಳಲ್ಲಿ ನಾಮಕರಣಗೊಳಿಸಲು ಅನುಮತಿ ನೀಡಲಾಗುವುದು ಎಂದರು.

ಇದೇ ಇದೇ ಸಂದರ್ಭದಲ್ಲಿ ಅಧ್ಯಕ್ಷರಾದ ಜೈತುಂಬಿ ಮಲಿಕ್ ಸಾಬ್ ,ಉಪಾಧ್ಯಕ್ಷರಾದ ಸುಮಬೋರಯ್ಯ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಎಂ ಮಲ್ಲಿಕಾರ್ಜುನ ,ಸದಸ್ಯರಾದ ರುದ್ರ ನಾಯಕ, ಎಂ.ಜೆ.ರಾಘವೇಂದ್ರ, ಎಂ ಜಯಣ್ಣ, ವೆಂಕಟೇಶ್, ಕವಿತಾ, ಜಯ ಲಕ್ಷ್ಮಿ ,ಪ್ರಶಾಂತ್, ಹೊಯ್ಸಳ ಗೋವಿಂದ್ರಾಜ್, ವೈ ಪ್ರಕಾಶ್ ,ಹೀಗೆ ಇನ್ನಿತರರು ಸದಸ್ಯರು ಹಾಗೂ ಅಧಿಕಾರಿ ವರ್ಗದವರು ಹಾಜರಿದ್ದರು.

About The Author

Namma Challakere Local News
error: Content is protected !!