ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿ ವಿರಕ್ತಮಠದಲ್ಲಿ ದಿನಾಂಕ ಜನವರಿ 19 ಭಾನುವಾರದಂದು ಶ್ರೀ.ಮ.ನಿ.ಪ್ರ. ಶ್ರೀ ಗುರುಬಸವ ಮಹಾಸ್ವಾಮಿಜಿಯವರ ಅಧ್ಯಕ್ಷತೆಯಲ್ಲಿ ಬಸವತತ್ವಸಮ್ಮೇಳನ ನಡೆಯಲಿದೆ. ಕಾರ್ಯಕ್ರಮದ ನೇತೃತ್ವವನ್ನು ಸಾಣೇಹಳ್ಳಿ ಶ್ರೀಮಠದ ಪಟ್ಟಾಧ್ಯಕ್ಷರಾದ ಶ್ರೀ.ಮ.ನಿ.ಪ್ರ. ಶ್ರೀ ಪಂಡಿತಾರಾದ್ಯ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿಮುಖ್ಯಮಂತ್ರಿಗಳಾದ ಶ್ರೀ.ಬಿ.ಎಸ್ ಯಡಿಯೂರಪ್ಪನವರು ಮಾಡಲಿದ್ದು, ಶರಣತತ್ವದ ಅನುಭಾವವನ್ನು ಚಳ್ಳಕೆರೆಯ ಡಿ.ಶಬ್ರಿನಾ ಮಹಮದ್ ಅಲಿ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಸ್ವಾಮೀಜಿಯವರ ‘ಬದುಕಿನ ಬಂಡಿ’ ಕೃತಿಯನ್ನು ಲೋಕಸಭಾ ಸದಸ್ಯರಾದ ರಾಘವೇಂದ್ರ ಅವರು ಬಿಡುಗಡೆ ಮಾಡಲಿದ್ದು, ಪ್ರಾಸ್ತಾವಿಕ ನುಡಿಗಳನ್ನು ಬಿ.ಜೆ.ಪಿ‌ ಮುಖಂಡರಾದ ಶ್ರೀ ಮಾಡಾಳ್ ಮಲ್ಲಿಕಾರ್ಜುನ ಅವರು ಆಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಎಸ್.ಷಡಕ್ಷರಿ, ಚನ್ನಗಿರಿ ತಾಲೂಕಿನ ಶಾಸಕರಾದ ವಿ. ಶಿವಗಂಗಾ,ಹೊನ್ನಾಳಿಯ ಶಾಸಕರಾದ ಶ್ರೀ ಡಿ.ಜಿ ಶಾಂತನಗೌಡರು ಮತ್ತಿತರ ಗಣ್ಯಾತಿಗಣ್ಯರು ಭಾಗವಹಿಸಿಲಿದ್ದು ರೈತಸಂಗಮ,ಧರದಮ ಸಂಗಮ & ಶರಣ ಸಂಗಮ ಎಂಬ ಮೂರು ಹಂತದ ವಿಶೇಷ ಕಾರ್ಯಕ್ರಮ ನಡೆಯುವುದು ಎಂದು ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಮ.ಜಿ.ಪ್ರ.ಶ್ರೀ ಗುರುಬಸವ ಸ್ವಾಮಿಗಳು ತಿಳಿಸಿದ್ದಾರೆ.

About The Author

Namma Challakere Local News
error: Content is protected !!