ಚಳ್ಳಕೆರೆ : ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಅಗತ್ಯ ವಾಗಿ ಕೊಡಬೇಕು ಸುಖಾ ಸುಮ್ಮನೆ ಗುತ್ತಿಗೆದಾರರ ನೆಪ ಹೊಡ್ಡಿ ನೀರು ಕೊಡುವುದು ನಿಲ್ಲಿಸಬೇಡಿ ಎಂದು ತಾಲೂಕು ಪಂಚಾಯತಿ ಆಡಳಿತ ಅಧಿಕಾರಿ ಮಂಜುನಾಥ್ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಅವರು ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಿದ್ದ ಅಧಿಕಾರಿಗಳ ಪ್ರಗತಿ ಪರೀಶಿಲನೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು.

ಇನ್ನೂ ಜಲಜೀವನ ಮೀಷನ್ ಯೋಜನೆಯ ಕುಡಿಯುವ ನೀರು ಜನವರಿ ತಿಂಗಳ ಅಂತ್ಯಕ್ಕೆ ನೀರು ಹೊದಗಿಸಲು ಸಜ್ಜಾಗಿರುವುದು ಇಲಾಖೆ ಅಗತ್ಯ ಕ್ರಮಗಳನ್ನು ಪಾಲಿಸಬೇಕು ಎಂದು ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ದಯಾನಂದ ಸ್ವಾಮಿಗೆ ಸೂಚಿಸಿದರು.

ಇನ್ನೂ
ಚಳ್ಳಕೆರೆ ತಾಲೂಕಿನಲ್ಲಿ ಸುಮಾರು 530 ಅಂಗನವಾಡಿ ಕೇಂದ್ರಗಳು ಇವೆ ಅವುಗಳಲ್ಲಿ ಸುಮಾರು 139 ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲದೆ ಬಾಡಿಗೆ ಕಟ್ಟಡ, ಸಮುದಾಯ ಭವನ, ಶಾಲಾ ಕೊಠಡಿ, ಹೀಗೆ ಇನ್ನಿತರೆ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರಗಳನ್ನು ತೆರೆಯಲಾಗಿದೆ ಆದ್ದರಿಂದ ಅತೀ ತುರ್ತಾಗಿ ಸುಮಾರು 139 ಅಂಗನವಾಡಿ ಕೇಂದ್ರಗಳಿಗೆ ತುರ್ತು ಇದೆ ಎಂದು ಶಿಶು ಅಭಿವೃದ್ಧಿ ಮಕ್ಕಳ ಕಲ್ಯಾಣ ಅಧಿಕಾರಿ ಹರಿಪ್ರಸಾದ್ ಸಭೆಯ ಗಮನಕ್ಕೆ ತಂದರು.

ಇನ್ನು ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಹೆಚ್.ಶಶಿಧರ್ ಮಾತನಾಡಿ,
ಶಾಲಾ ಕಟ್ಟಡ ಸಮುದಾಯ ಭವನ ಹಾಗೂ ಇನ್ನಿತರೆ ಸರ್ಕಾರಿ ಕಟ್ಟಡಗಳಲ್ಲಿ ನಡೆಯುವಂತಹ ಅಂಗನವಾಡಿ ಕೇಂದ್ರಗಳನ್ನು ಸ್ವಂತ ಕಟ್ಟಡಗಳನ್ನಾಗಿ ಪರಿವರ್ತನೆ ಮಾಡಿ ಇಲಾಖೆಗೆ ವಹಿಸಿಕೊಳ್ಳಿ ,ತಾಲೂಕಿನಲ್ಲಿ ಈಗಾಗಲೇ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ತಾಲೂಕಿನಲ್ಲಿ 14 ಮಕ್ಕಳುಗಳಿವೆ ,ಅವುಗಳನ್ನು ಗುರುತಿಸಿ ಈಗಾಗಲೇ ಪೌಷ್ಟಿಕತೆಗೆ ಬೇಕಾದಂತಹ ಚಿಕಿತ್ಸೆ ,ಆಹಾರ, ಸೌಲಭ್ಯಗಳನ್ನು ಇಲಾಖೆ ವತಿಯಿಂದ ತಾಯಿ ಹಾಗೂ ಮಗುವಿಗೆ ಸೂಚನೆಗಳನ್ನು ನೀಡುತ್ತಾ, ಅಪೌಷ್ಟಿಕತೆ ಹೋಗಲಾಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು,ಎಂದು ಹೇಳಿದರು.

ಇದೇ ಸಂಧರ್ಭದಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ ಕಳೆದ ಬಾರಿಗಿಂದ ಈ ಬಾರಿ‌ ನೀರಿಕ್ಷೆ ಪ್ರಮಾಣದಲ್ಲಿ ಬರಬೇಕು, ಮಕ್ಕಳಿಗೆ ಈಗಿನಿಂದಲೆ ತಯಾರಿ ಮಾಡಬೇಕು ಎಂದು ಅಡಳಿತ ಅಧಿಕಾರಿ ಮಂಜುನಾಥ್ ,ಬಿಇಓ ಸುರೇಶ್ ಗೆ ಸೂಚಿಸಿದರು ‌.

ಇನ್ನೂ ಸಭೆಯಲ್ಲಿ ಕೃಷಿ ಸಹಾಯಕ ನಿರ್ದೇಶಕ ಅಶೋಕ್, ಪಶು ಸಂಗೋಪನೆ ಇಲಾಖೆ ಡಾ.ರೇವಣ್ಣ, ನಿರ್ಮಿತಿ‌ ಕೇಂದದ ಇಂಜಿನಿಯರ್ ಸಿದ್ದೇಶ್, ಬೆಸ್ಕಾಂ ಎಇಇ ಶಿವ ಪ್ರಸಾದ್, ತಳಕು ಬೆಸ್ಕಾಂ ಎಇಇ ಮಮತಾ, ಇನ್ನಿತರೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದರು.

About The Author

Namma Challakere Local News
error: Content is protected !!