ಜನರ ಆಶೀರ್ವಾದದಿಂದ ಗೆದ್ದು ಜಯಶೀಲರಾಗಿದ್ದೇವೆ ಸಿ.ಪಿ. ಮಹೇಶ್ ಕುಮಾರ್.
ನಾಯಕನಹಟ್ಟಿ : ಹೋಬಳಿಯ ಗಜ್ಜುಗಾನಹಳ್ಳಿ ಗ್ರಾಮದಲ್ಲಿ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಾಲಗಾರರ ಕ್ಷೇತ್ರದ ಐದು ಸಾಮಾನ್ಯ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಸಿ ಪಿ ಮಹೇಶ್ ಕುಮಾರ್ ರವರಿಗೆ ರಾಮಸಾಗರ ಮತ್ತು ಗಜ್ಜುಗಾನಹಳ್ಳಿ ಗ್ರಾಮಸ್ಥರು ಅತ್ಯಂತ ಮತಗಳ ಅಂತರದಿಂದ ಜಯಶೀಲರಾಗಿದ್ದಾರೆ. ಗಜ್ಜುಗಾನಹಳ್ಳಿ ಗ್ರಾಮದ ಶ್ರೀ ಶಂಕರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅಭಿನಂದಿಸಿದರು.
ಇದೇ ವೇಳೆ ಕೆಪಿಸಿಸಿ ಎಸ್ಟಿ ವಿಭಾಗ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮಸಾಗರ ಪಿ.ಎಂ. ಮಂಜುನಾಥ್ ಮಾತನಾಡಿ ಗಜ್ಜುಗಾನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಸಿ.ಪಿ. ಮಹೇಶ್ ಕುಮಾರ್ ಅತ್ಯಂತ ಮತಗಳಿಂದ ಜಯಶೀಲರಾಗಿದ್ದಾರೆ. ಐದು ಜನ ಸ್ನೇಹಿತರು ಸೇರಿ ಒಂದು ಗ್ರೂಪ್ ಮಾಡಿಕೊಂಡು, ಒಬ್ಬರಿಗೊಬ್ಬರು ಸಹಕಾರ ಮಾಡಿಕೊಂಡು 5 ಜನ ಜಯಶೀಲರಾಗಿರುವುದು ಸಂತಸ ತಂದಿದೆ ಎಂದು ಹೇಳಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನೂತನ ನಿರ್ದೇಶಕ ಸಿ.ಪಿ. ಮಹೇಶ್ ಕುಮಾರ್ ಮಾತನಾಡಿ ಗಜ್ಜುಗಾನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 5 ಸ್ಥಾನಗಳಿಗೆ 7 ನಾಮಪತ್ರಗಳ ಸಲ್ಲಿಸಿದ್ದು, ಇದರಲ್ಲಿ ಐದು ಸ್ಥಾನಗಳನ್ನು ನಾವು ಹಾಗೂ ನಮ್ಮ ಸ್ನೇಹಿತರು ಜಯಶೀಲರಾಗಿದೇವೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ರೈತರು, ಹಿರಿಯರು, ಸ್ನೇಹಿತರು, ಹಿತೈಷಿಗಳು, ಬಂಧುಬಾಂಧವರಿಂದ ಆಶೀರ್ವಾದದಿಂದ ನಾವೆಲ್ಲ ಗೆಲುವನ್ನು ಸಾಧಿಸಿದ್ದೇವೆ. ಮತದಾರರು ನಮ್ಮ ಮೇಲೆ ವಿಶ್ವಾಸವನ್ನು ಇಟ್ಟು ಮತದಾನ ನೀಡಿ ನಮ್ಮ ಗೆಲುವಿಗೆ ಕಾರಣಕರ್ತರಾದ ಎಲ್ಲರಿಗೂ ಅನಂತ ಅನಂತ ವಂದನೆಗಳನ್ನು ತಿಳಿಸಿದರು. ಮುಂದಿನ ದಿನಗಳಲ್ಲಿ ನಾವೆಲ್ಲರೂ ಸೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು. ಈ ಭಾಗದ ರೈತರ ಕಷ್ಟಗಳಲ್ಲಿ ಭಾಗಿಯಾಗಿ ನಮಗೆ ನೀಡಿರುವ ಜವಾಬ್ದಾರಿಯನ್ನು ಉಸಿಯಾಗದೆ ನೆರವೇರಿಸುತ್ತವೆ ಎಂದು ಭರವಸೆ ನೀಡಿದರು.
ಇನ್ನೂ ಗಜ್ಜುಗಾನಹಳ್ಳಿ ಯುವ ಮುಖಂಡ ಜಿ ಎಸ್ ತಿಪ್ಪೇಸ್ವಾಮಿ ಮಾತನಾಡಿದರು ರೈತರ ಕಷ್ಟಗಳಿಗೆ ಸ್ಪಂದಿಸಿ ಸಹಕಾರ ಸಂಘದಲ್ಲಿ ದೊರೆಯುವ ಸೌಲಭ್ಯಗಳನ್ನು ರೈತರಿಗೆ ದೊರೆಯುವಂತೆ ಮಾಡಿದಾಗ ಮಾತ್ರ ನಾವುಗಳು ಗೆಲುವು ಸಾಧಿಸಿದ್ದಕ್ಕೆ ಸಾರ್ಥಕವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಟಿ, ಶಂಕರ್ ಮೂರ್ತಿ,ಎಸ್.ಟಿ. ರಾಜಣ್ಣ, ರೇಖಲಗೆರೆ ಎ.ಟಿ. ಅಶೋಕ್ ,ತಿಪ್ಪೇಸ್ವಾಮಿ, ರಾಮಸಾಗರ ಸಣ್ಣ ತಿಪ್ಪಯ್ಯ, ಪಿ.ಪಿ. ಮಹಾಂತೇಶ್ ನಾಯಕ, ರಾಮಸಾಗರ ಸಣ್ಣಪಾಲಯ್ಯ, ಗೌಡ್ರು ಜಿ ಎಸ್ ಸೋಮಶೇಖರ್, ಡಿ ಬೊಮ್ಮಯ್ಯ ಬಿ.ಟಿ. ನಲಜರವಯ್ಯ, ತಿಮ್ಮಪ್ಪಯ್ಯನಹಳ್ಳಿ ಚಿರು. ಇದ್ದರು