ಭಕ್ತಿ ಮತ್ತು ನಂಬಿಕೆ ಭಗವಂತನಿಗೆ ಪ್ರಿಯವಾದ ಸಂಗತಿಗಳು ಎಂದು ನಿಕಟ ಪೂರ್ವ ಎನ್. ರಘುಮೂರ್ತಿ ಹೇಳಿದರು

ಅವರು ತಳಕು ಹೋಬಳಿಯ ಗೌರ ಸಮುದ್ರ ಗ್ರಾಮದಲ್ಲಿ ಸ್ವಾಮಿ ಅಯ್ಯಪ್ಪ ಭಕ್ತ ಮಂಡಳಿಯು ಹಮ್ಮಿಕೊಂಡಿದ್ದ ಇರುಮುಡಿ ಕಟ್ಟುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ,

ಭಗವಂತನಿಗೆ ಪ್ರಿಯವಾದದ್ದು ನಂಬಿಕೆ ಮತ್ತು ಭಕ್ತಿ ವಿಚಾರಗಳಿಗಿಂತ ಇಲ್ಲಿ ಆಚಾರ ಪರಮಶ್ರೇಷ್ಠ ವಾದದ್ದು ದಾರ್ಶನಿಕರೆಲ್ಲರೂ ಕೂಡ ಇವುಗಳಿಂದಲೇ ತಮ್ಮ ಜೀವನದಲ್ಲಿ ನೆಲೆ ಕಂಡುಕೊಂಡಿದ್ದು ಹರಿಹರ ಸುತನ ಈ ಕಾರ್ಯ ತುಂಬಾ ಪವಿತ್ರವಾದದ್ದು.

ಈ ಕಾರ್ಯದಲ್ಲಿ ಭಾಗಿಯಾಗಿರುವಂತಹ ಎಲ್ಲರೂ ಕೂಡ ಒಂದಷ್ಟು ಪುಣ್ಯವನ್ನು ತಮ್ಮ ತಮ್ಮ ಮನೆಗಳಿಗೆ ಕೊಂಡೊಯ್ದಂತಾಗುತ್ತದೆ ಸ್ವಾಮಿಯ ಸೇವೆಗೆ ಪಾತ್ರರಾದಂತ ಎಲ್ಲರಿಗೂ ಕೂಡ ಮುಂದಿನ ದಿನಗಳಲ್ಲಿ ತಮ್ಮ ಕಾರ್ಯಗಳಲ್ಲಿ ಯಶಸ್ಸು ಮತ್ತು ಸೌಭಾಗ್ಯ ಸಿದ್ಧಿಸಲೆಂದು ಆಶಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಓಬಣ್ಣ ಮಾತನಾಡಿ ಈ ಭಾಗದ ಜನರಿಗೆ ಭಕ್ತಿ ಮತ್ತು ನಂಬಿಕೆ ಮೈ ಗೂಡಿದೆ ಯಾವುದೇ ಪೂಜಾ ಕಾರ್ಯಗಳನ್ನು ಇಲ್ಲಿಯ ಜನರು ಅಂತರಂಗ ಶುದ್ದಿಯಿಂದ ಮಾಡುತ್ತಾರೆ ಇಂತಹ ಪೂಜಾ ಕಾರ್ಯಕ್ರಮಗಳಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ನೆರವು ಮತ್ತು ಅವಕಾಶಗಳನ್ನು ಪಂಚಾಯಿತಿ ವತಿಯಿಂದ ಕಲ್ಪಿಸಿ ಕೊಡುವುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಶಶಿಕುಮಾರ್, ಈರಣ್ಣ, ನಾರಾಯಣಪ್ಪ, ಮಂಜಣ್ಣ, ಮತ್ತಿತರ ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!