ಚಳ್ಳಕೆರೆ :
ಚಳ್ಳಕೆರೆ: ಸಾಂಸ್ಕೃತಿಕ ಕಲೆಗಳು ಮಾರಾಟ ಮತ್ತು
ಮನರಂಜನೆ ಸರಕಾಗಬಾರದು
ಬುಡಕಟ್ಟು ಸಂಸ್ಕೃತಿಯ ಸಾಂಸ್ಕೃತಿಕ ಕಲೆಗಳು ಮಾರಾಟ ಮತ್ತು
ಮನರಂಜನೆಯ ಸರಕುಗಳಾಗಬಾರದು ಎಂದು ಸಾಹಿತಿ ಬಂಜಗೆರೆ
ಜಯಪ್ರಕಾಶ್ ಹೇಳಿದರು.
ಚಳ್ಳಕೆರೆಯ ಬಾಪೂಜಿ ಪದವಿ ಪೂರ್ವ
ಕಾಲೇಜಿನಲ್ಲಿಂದು ನಡೆದ ಬುಡಕಟ್ಟು ಸಂಸ್ಕೃತಿಗಳ ಆಸ್ಮಿತೆ ಕುರಿತು
ವಿಚಾರ ಸಂಕೀರ್ಣ ಉದ್ಘಾಟಿಸಿ ಮಾತನಾಡಿ, ನಮ್ಮ ದೇಶದಲ್ಲಿ
ಇನ್ನೂ ಅನೇಕ ಸಾಂಸ್ಕೃತಿಕ ಬಡಕಟ್ಟುಗಳ ಆಚರಣೆಗಳು
ನಡೆಸಲಾಗುತ್ತಿದೆ ಇವುಗಳನ್ನು ತೊರೆದು ಮುಖ್ಯ ವಾಹಿನಿಗೆ
ಬರಬೇಕೆಂದು ಮನವಿ ಮಾಡಿದರು.