ಮುಂದಿನ ದಿನಗಳಲ್ಲಿ ಕಬ್ಬಡಿ ಜೊತೆಗೆ ವಾಲಿಬಾಲ್ ಕ್ರೀಡೆಯನ್ನು ಸಹ ಆಯೋಜನೆ.
ನಾಯಕನಹಟ್ಟಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ : ಜೆ ಆರ್ ರವಿಕುಮಾರ್ ಬರವಸೆ.
ನಾಯಕನಹಟ್ಟಿ : ನಾಯಕನಹಟ್ಟಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಎನ್ ಕೆ ಪಿ ಎಲ್ ಸೀಸನ್ 2 20 ವರ್ಷದೊಳಗಿನ ರಾಜ್ಯಮಟ್ಟದ ಪುರುಷರ ಹೊನಲು ಬೆಳಕಿನ ಕಬ್ಬಡಿ ಫೈನಲ್ ಪಂದ್ಯಾವಳಿಯಲ್ಲಿ ಜಾಗ್ವಾರ್ ತಂಡಕ್ಕೆ ಪ್ರಥಮ ಬಹುಮಾನವನ್ನು ನಾಯಕನಹಟ್ಟಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಜೆ ಆರ್ ರವಿಕುಮಾರ್ ಪ್ರಧಾನ ಮಡಿದರು.
ನಂತರ ಮಾತನಾಡಿದ ಅವರು ಕಬ್ಬಡಿ ಪಂದ್ಯಾವಳಿ ಯಶಸ್ವಿಗೆ ಕಾರಣಕರ್ತರೆಂದರೆ ದೈಹಿಕ ಶಿಕ್ಷಕ ಅಫೀಜ್ ಎಂದರೆ ತಪ್ಪಾಗಲಾರದು. ಸತತ ಮೂರು ತಿಂಗಳಿನಿಂದ ಶ್ರಮವಹಿಸಿ ಕಾರ್ಯಕ್ರಮ ಯಶಸ್ವಿಯಾಗಲು ಶ್ರಮವಹಿಸಿದ್ದಾರೆ. ಅವರ ಕೊಡುಗೆ ತುಂಬಾ ಅಪಾರವಾಗಿದೆ. ಸ್ಥಳೀಯ ಕ್ರೀಡಾಪಟುಗಳ ಪ್ರತಿಭೆಯನ್ನು ಹೊರ ತರಲು ಕಾರಣ ಅಫೀಜ್ ಅಂತ ಹೇಳಲು ಇಷ್ಟಪಡುತ್ತೇನೆ. ಕಳೆದ ಬಾರಿ ಜಿಲ್ಲಾ ಮಟ್ಟದ ಕಬ್ಬಡಿ ಪಂದ್ಯಾಳಿಯನ್ನು ಆಯೋಜನೆ ಮಾಡಲಾಗಿತ್ತು. ಈ ಬಾರಿ ರಾಜ್ಯ ಮಟ್ಟದ ಕಬ್ಬಡಿ ಪಂದ್ಯಾವಳಿಯನ್ನು ತುಂಬಾ ಯಶಸ್ವಿಯಾಗಿ ಆಯೋಜನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕಬ್ಬಡಿ ಜೊತೆಗೆ ವಾಲಿಬಾಲ್ ಪಂದ್ಯವನ್ನು ಸಹ ಆಯೋಜನೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಪ್ರಥಮ ಬಹುಮಾನ 30,000 ರೂಗಳು ಹಾಗೂ ಪಾರಿತೋಷಕವನ್ನು ಜಾಗ್ವಾರ್ ತಂಡದ ಮಾಲೀಕರಾದ ಲಕ್ಷ್ಮಿ ಬೋರ್ವೆಲ್ಸ್ ಸುನಿಲ್ ಕುಮಾರ್ ಹಾಗೂ ತಂಡದ ನಾಯಕ ನಿತಿನ್. ಎ ಬೆಳಗಾವಿ ರವರಿಗೆ ಹಸ್ತಾಂತರಿಸಲಾಯಿತು.
ದ್ವಿತೀಯ ಬಹುಮಾನ 20,000 ರೂಗಳ ಹಾಗೂ ಪಾರ್ಥಿವ ಶಕವನ್ನು ಕೋಟಿನಾಡು 7 ತಂಡದ ಮಾಲೀಕರಾದ ಮದರ್ ತೆರೇಸಾ ಟ್ರಸ್ಟಿನ ಶಿವಮೂರ್ತಿ ಹಾಗೂ ತಂಡದ ನಾಯಕ ರಾಜಭಕ್ಷಿ ಬೆಳಗಾವಿ ರವರಿಗೆ ಹಸ್ತಾಂತರಿಸಲಾಯಿತು.
ಇದೇ ಸಂದರ್ಭದಲ್ಲಿ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕಬ್ಬಡಿ ಕ್ರೀಡಾಪಟುಗಳಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರು ತಾಜ್ಪೀರ್, ಚಿತ್ರದುರ್ಗ ಜಿಲ್ಲಾ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಗೌಡಗೆರೆ, ನಾಯಕನಹಟ್ಟಿ ಸ್ಪೋರ್ಟ್ಸ್ ಕ್ಲಬ್ ಉಪಾಧ್ಯಕ್ಷ ಶ್ರೀಕಾಂತ್, ವಕೀಲರಾದ ಉಮಾಪತಿ,ಪ.ಪಂ ಸದಸ್ಯ ಸೈಯದ್ ಅನ್ವರ್, ಮಾಜಿ ಪ.ಪಂ ಸದಸ್ಯ ಮನ್ಸೂರ್,ಪ.ಪಂ ಸದಸ್ಯ ಎಂ ಟಿ ಮಂಜುನಾಥ್, ಶಾಮಿಯಾನ ಸಪ್ಲೈಯರ್ ಗೋಪಿ, ತಿಪ್ಪೇಸ್ವಾಮಿ ಆಚಾರ್, ಮಾಡ್ರನ್ ಮೆಡಿಕಲ್ಸ್ ವಾಸಿಂ ಅಕ್ರಂ, ಪತ್ರಕರ್ತ ಧನಂಜಯ್, ಬಂಗಾರಪ್ಪ, ನೀರಾವರಿ ಹೋರಾಟ ಸಮಿತಿ ಹೋಬಳಿ ಅಧ್ಯಕ್ಷ ಮುದಿಯಪ್ಪ, ತ್ರಿಶೂಲ್ ಕುಮಾರ್ ಹಾಗೂ ಕ್ರೀಡಾ ಅಭಿಮಾನಿಗಳು, ಕ್ರೀಡಾಪಟುಗಳು ಮುಂತಾದವರು ಹಾಜರಿದ್ದರು.