ಮುಷ್ಟಲಗುಮ್ಮಿ: ಜಲಜೀವನ್ ಮಿಷನ್ ಕಳಪೆ ಕಾಮಗಾರಿ ಗ್ರಾಮಸ್ಥರು ದೂರು.
ನಾಯಕನಹಟ್ಟಿ: ಪ್ರತಿ ಮನೆಗೂ ನಲ್ಲಿಯ ಮೂಲಕ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಕೈಗೊಂಡ ಜಲಜೀವನ್ ಮಿಷನ್ (ಜೆಜೆಎಂ )ಕಾಮಗಾರಿ
ಮುಷ್ಟಲಗುಮ್ಮಿ ಗ್ರಾಮದಲ್ಲಿ ಕಳಪೆ ಕಾಮಗಾರಿ ಎಂಬ ಅನುಮಾನ ಗ್ರಾಮಸ್ಥರಲ್ಲಿ ಕಾಡುತ್ತಿದೆ.
ಹೌದು ಇದು ಹೋಬಳಿಯ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುಷ್ಠಿಲ ಗುಮ್ಮಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಕಾಮಗಾರಿ ಮಾಡಿದ್ದು ಕಳಪೆ ಕಾಮಗಾರಿ ಮಾಡಿದ್ದಾರೆ ಎಂದು ಗ್ರಾಮದ ಸುರೇಶ್ ಆರೋಪಿಸಿ ಮಾತನಾಡಿದರು ನಮ್ಮ ಮುಷ್ಟಿಲಗುಮ್ಮಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಗುತ್ತಿಗೆದಾರರು ಕಾಮಗಾರಿ ಮಾಡಿದ್ದು ಪ್ರತಿ ಮನೆಯ ಮುಂದೆ ಮತ್ತು ರಸ್ತೆಯ ತುಂಬಾ ತೊಗ್ಗು ಗುಂಡಿಗಳ ಹಾವಳಿ ಹೆಚ್ಚಾಗಿದೆ ಪೈಪ್ ಲೈನ್ ಸರಿಯಾಗಿ ಮಾಡಿಲ್ಲ ಎಲ್ಲೆಂದರಲ್ಲಿ ನೀರು ಪೋಲಾಗಿ ರಸ್ತೆ ತುಂಬೆಲ್ಲ ಅರಿಯುತ್ತಿದೆ, ಸಮತ ಪಟ್ಟ ಅಧಿಕಾರಿಗಳು ಗಮನ ಹರಿಸಿ ಉತ್ತಮ ಕಾಮಗಾರಿ ಮಾಡುವಂತೆ ಗುತ್ತಗೆದಾರರಿಗೆ ಸೂಚನೆ ನೀಡಬೇಕು ಎಂದರು.
ಇದೆ ವೇಳೆ ಗ್ರಾಮದ ಹಿರಿಯ ಮುಖಂಡ ಸಣ್ಣ ಪಾಪ ನಾಯಕ ಮಾತನಾಡಿದರು ಗುತ್ತಿಗೆದಾರರು ಮನೆ ಮುಂದೆ ಗುಂಡಿಗಳ ತೆಗೆದು ಹೋಗಿರುವುದರಿಂದ ರಸ್ತೆಯಲ್ಲಿ ಓಡಾಡುವುದೇ ತುಂಬಾ ಕಷ್ಟವಾಗಿದೆ ಗುಂಡಿ ತೆಗೆದು ಒಂದು ತಿಂಗಳು ಕಳೆದರೂ ಸಹ ಯಾರು ಈ ಕಡೆ ತಿರುಗಿ ಸಹ ನೋಡಿಲ್ಲ ರಸ್ತೆ ತುಂಬೆಲ್ಲ ನೀರು ಹರಿಯುತ್ತಿವೆ ಕೃಷಿ ಚಟುವಟಿಕೆಗಳಿಗೆ ಟ್ಯಾಕ್ಟರ್ ಬಂಡಿ ಓಡಾಡುವುದು ತುಂಬಾ ಕಷ್ಟವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಪಿ.ವಿ ಸಣ್ಣೋಬಯ, ಗ್ರಾಮಸ್ಥರಾದ ಸುರೇಶ್, ಸಣ್ಣ ಪಾಪನಾಯಕ, ಉಪಸ್ಥಿತರಿದ್ದರು