ಮಾದಕ ವ್ಯಸನತೆಯಿಂದ ಸಮಾಜ ಕತ್ತಲಾಗುತ್ತಿದೆ: ಕುಲ ಸಚಿವ ಡಾ. ಹೆಚ್. ವಿಶ್ವನಾಥ್

ಮಾದಕ ವ್ಯಸನ ಮತ್ತು ಸೈಬರ್ ಅಪರಾಧಗಳ ಕುರಿತು ಉಪನ್ಯಾಸಕ್ಕೆ ಚಾಲನೆ

ಚಿತ್ರದುರ್ಗ: ಮಾದಕ ವ್ಯಸನತೆಯಿಂದ ಸಮಾಜ ಕತ್ತಲಾಗುತ್ತಿದೆ, ಯುವ ಸುಮುದಾಯ ದುಶ್ಚಟಗಳಿಗೆ ಬಲಿಯಾಗದೆ ಆರೋಗ್ಯವಂತರಾಗಿ ಉತ್ತಮ ಸಮಾಜ ನಿರ್ಮಾಣ ಮಾಡುವುದರ ಮೂಲಕ ದೇಶವನ್ನು ರಕ್ಷಿಸಬೇಕಾಗಿದೆ ಎಂದು ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ‌ ಡಾ.ಹೆಚ್ ವಿಶ್ವನಾಥ್ ತಿಳಿಸಿದರು.

ತಾಲೂಕಿನ ಗುಡ್ಡದ ರಂಗನಹಳ್ಳಿ ಸಮೀಪದ ದಾವಣಗೆರೆ ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ನೆಹರು ಯುವ ಕೇಂದ್ರ, ದಾವಣಗೆರೆ ವಿಶ್ವವಿದ್ಯಾನಿಲಯ ಸಂಶೋಧನ ಅಧ್ಯಯನ ಕೇಂದ್ರ ಹಾಗೂ ಮಡಿಲು ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಸಹಯೋಗದೊಂದಿಗೆ ಮಾದಕ ವ್ಯಸನ, ಮಾದಕ ವಸ್ತುಗಳು ದುಷ್ಪರಿಣಾಮ ಹಾಗೂ ಸೈಬರ್ ಅಪರಾಧಗಳ ಕುರಿತು ಜಾಗೃತಿ ಮತ್ತು ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು
ದೇಶದಲ್ಲಿ ದಿನದಿಂದ ದಿನಕ್ಕೆ ಹೊಸ ಸ್ವರೂಪ ಪಡೆಯುತ್ತಿರುವ ಸೈಬರ್ ಕ್ರೈಂ ಗಳು ಅದರ ಜೊತೆಗೆ ಮಾದಕ ವ್ಯಸನಗಳು ಕೂಡ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ ಇದರಿಂದಾಗಿ ಸಾಕಷ್ಟು ಯುವ ಸಮುದಾಯ ಮಾದಕ ವ್ಯಸನಿಗಳಾಗಿ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಯುವಕರು ಮಾದಕ ವ್ಯಸನಗಳಿಗೆ ಬಲಿಯಾಗದೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಸದೃಢ ಸಮಾಜ ನಿರ್ಮಾಣ ಮಾಡಬೇಕಾಗಿದೆ ಎಂದು ತಿಳಿಸಿದರು.

ತಂದೆ ತಾಯಿಗಳು ಮಕ್ಕಳ ಚೆನ್ನಾಗಿ ಓದಬೇಕೆಂದು ಉನ್ನತ ಕಾಲೇಜುಗಳಿಗೆ ಸೇರಿಸಿದರೆ ಮಕ್ಕಳು ಮಾತ್ರ ಮಾದಕ ವ್ಯಸನಿಗಳಾಗಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎನ್ನುವುದು ನೋವಿನ ಸಂಗತಿಯಾಗಿದೆ. ಮಾದಕ ವ್ಯಸನಗಳು ಹೆಮ್ಮರವಾಗಿ ದೇಶದಲ್ಲಿ ಹರಡುತ್ತಿದೆ ಸರ್ಕಾರಗಳನ್ನು ಇವುಗಳನ್ನು ನಿಯಂತ್ರಿಸುವಲ್ಲಿ ಸಾಕಷ್ಟು ನಿಯಂತ್ರಣ ಕ್ರಮಗಳನ್ನು ತಂದರು ಸಹ ಯುವ ಸಮುದಾಯ ದಾರಿ ತಪ್ಪುತ್ತಿದೆ ಎಂದರು.

ಯುವ ಸಮುದಾಯ ವ್ಯಸನ ಮುಕ್ತ ರಾಷ್ಟ್ರ ನಿರ್ಮಾಣ ಮಾಡಬೇಕೆನ್ನುವ ಪರಿಕಲ್ಪನೆಯನ್ನು ಕೈಗೆತ್ತಿಕೊಳ್ಳಬೇಕಿದೆ ಹಾಗಾಗಿ ವಿದ್ಯಾರ್ಥಿಗಳು ಪತ್ರಿಕೆಗಳಲ್ಲಿ ಲೇಖನಗಳ ಮೂಲಕ ಪ್ರತಿಯೊಬ್ಬರಲ್ಲಿ ಜಾಗೃತಿ ಮೂಡಿಸಬೇಕಿದೆ ಪ್ರತಿದಿನವೂ ಸೈಬರ್ ಪ್ರಕರಣಗಳು ಹೆಚ್ಚುತ್ತಲೇ ಇವೆ ಸೈಬರ್ ಪ್ರಕರಣಗಳನ್ನು ನಿಯಂತ್ರಿಸಬೇಕಾದರೆ ಮೊದಲು ನಮ್ಮ ಬ್ಯಾಂಕ್ ಖಾತೆಯ ಎಟಿಎಂ ಪಿನ್‌‌ ನಂಬರ್ ಹಾಗೂ ಮೊಬೈಲ್ ಓಟಿಪಿಗಳನ್ನ ಬೇರೆಯವರ ಜೊತೆಗೆ ಹಂಚಿಕೊಳ್ಳಬಾರದು ಎಂದರು.

ನೆಹರು ಯುವ ಕೇಂದ್ರ ಜಿಲ್ಲಾ ಯುವ ಜನಾಧಿಕಾರಿ ಎನ್. ಸುಹಾಸ್ ಮಾತನಾಡಿ ಭಾರತ ದೇಶಕ್ಕಿಂತ ತಡವಾಗಿ ಸ್ವಾತಂತ್ರ್ಯ ಪಡೆದ ದೇಶಗಳು ಈಗಾಗಲೇ ಅಭಿವೃದ್ಧಿ ರಾಷ್ಟ್ರಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿವೆ, ಭಾರತ ದೇಶ ಮಾತ್ರ ಅಭಿವೃದ್ಧಿ ಶೀಲ ರಾಷ್ಟ್ರವಾಗಿ ಮುಂದುವರಿಯುತ್ತಿದೆ. ನಮ್ಮ ದೇಶವು ಅತಿ ಹೆಚ್ಚು ಯುವಕರನ್ನ ಹೊಂದಿದ್ದರು ಮುಂದುವರೆಯುತ್ತಿರುವ ದೇಶ ಎನ್ನುವ ಅಣೆ ಪಟ್ಟಿಯನ್ನು ಕಟ್ಟಿಕೊಂಡಿದೆ, ಯಾಕೆಂದರೆ ನಮ್ಮ ದೇಶದಲ್ಲಿ ಅತಿ ಹೆಚ್ಚು ಯುವಕರು ವಿದ್ಯಾಭ್ಯಾಸದ ಕಡೆ ಗಮನ ಕೊಡದೆ ಮಾದಕ ವ್ಯಸನಿಗಳಾಗುವುದರ ಜೊತೆಗೆ ಅಪರಾಧಗಳಲ್ಲೂ ಯುವಕರೇ ಅತಿ ಹೆಚ್ಚು ಇರುವುದರಿಂದ ದೇಶ ಮುಂದುವರೆಯಲು ಕಷ್ಟಕರವಾಗುತ್ತಿದೆ ಎಂದರು.

ಮಾದಕ ವಸ್ತುಗಳು ಮೊದಲು ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಬಳಕೆಯಲ್ಲಿ ಇತ್ತು ಆದರೆ ಇತ್ತೀಚಿನ ದಿನಗಳಲ್ಲಿ ಹಳ್ಳಿಗಳಿಗೂ ವ್ಯಾಪಿಸಿದೆ. ಯುವ ಸಮುದಾಯ ದೇಶಕ್ಕೆ ಮಾದರಿಯಾಗುವ ಸಮಾಜ ಸೇವೆಯಲ್ಲಿ ತೊಡಗಿಕೊಂಡರೆ ದೇಶ ಅಭಿವೃದ್ಧಿ ಕಡೆ ಸಾಗುತ್ತದೆ ಎಂದು ತಿಳಿಸಿದರು.

ಯುವ ಸಮುದಾಯ ಮಾದಕ ವಸ್ತುಗಳಾದ ಅಫೀಮು, ಎಲ್.ಸಿ.ಟಿ, ಧೂಮಪಾನ, ಮಧ್ಯಪಾನ, ಗುಟ್ಕಗಳ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಂಡು ಅನೇಕ ರೋಗಗಳಿಗೆ ಬಲಿಯಾಗುತ್ತಿದ್ದಾರೆ ಆದಷ್ಟು ಯುವ ಸಮುದಾಯ ಇವುಗಳ ಬಗ್ಗೆ ಜಾಗೃತರಾಗಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕಾಗಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ತಿಳಿಸಿದರು.

ಸಿಇಎನ್ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕರಾದ ವೆಂಕಟೇಶ್ ಮಾತನಾಡಿ ಡ್ರಗ್ಸ್ ಎನ್ನುವುದು ಸಮಾಜಕ್ಕೆ ಅಂಟಿಕೊಂಡಿರುವ ಕಳಂಕ, ಭಾರತ ದೇಶದಲ್ಲಿ ಸುಮಾರು 7.5 ಕೋಟಿ ಅಧಿಕ ಜನರು ಡ್ರಗ್ಸ್ ವ್ಯಸನಿಗಳಾಗಿದ್ದಾರೆ ಈ ವ್ಯಸನಿಗಳಲ್ಲಿ ಪ್ರತಿನಿತ್ಯ 10 ರಿಂದ 12 ಜನ ಸಾವನ್ನಪ್ಪುತ್ತಿದ್ದಾರೆ, ಇದರಲ್ಲಿ 16 ವರ್ಷದ ಒಳಗಿನ ಮಕ್ಕಳೇ ಸಾವನ್ನಪ್ಪುತ್ತಿದ್ದಾರೆ. ಈ ಡ್ರಗ್ಸ್ ಸೇವನೆ ಮುಂದುವರೆದರೆ ದೇಶದ ಯುವ ಸಮುದಾಯ ನಾಶವಾಗುವಂತ ಕಾಲ ಬಂದು ಅದುತ್ತದೆ ಎಂದು ತಿಳಿಸಿದರು.

ಯುವ ಸಮೂಹ ಡ್ರಗ್ಸ್ ಸೇವನೆಯಿಂದ ವಿದ್ಯಾಭ್ಯಾಸದಿಂದ ಹಿಂದೆ ಸರಿಯುತ್ತಾರೆ, ಸ್ನೇಹಿತರಿಂದ ದೂರವಿರಲು ಇಷ್ಟಪಡುತ್ತಾರೆ ಕ್ಷಣಕ್ಷಣಕ್ಕೂ ಬದಲಾಗುತ್ತಾರೆ ಒಬ್ಬಂಟಿಯಾಗಿರಲು ಬಯಸುತ್ತಾರೆ ಡ್ರಗ್ಸ್ ಮಾತ್ತು ಹೆಚ್ಚಾದಾಗ ಮೆಮೋರಿಯನ್ನು ಕಳೆದುಕೊಂಡು ಹುಚ್ಚರಾಗುತ್ತಾರೆ ಈ ಕೆಟ್ಟ ವ್ಯಸನವು ನೆಮ್ಮದಿ ಅಲ್ಲದೆ ಮನೆಯವರ ನೆಮ್ಮದಿಯನ್ನು ಹಾಳು ಮಾಡಲು ಕಾರಣವಾಗುತ್ತದೆ ಹಾಗಾಗಿ ಯುವ ಸಮೂಹ ಒಂದು ಉತ್ತಮ ಕಾರ್ಯಗಳಲ್ಲಿ ತೊಡಗಿಕೊಂಡು ದೇಶದಲ್ಲಿ ಒಂದು ಉತ್ತಮ ಪ್ರಜೆಯಾಗಬೇಕಿದೆ ಎಂದರು.

ಸೈಬರ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ ಮನುಷ್ಯ ಎಷ್ಟು ಬುದ್ಧಿವಂತ ಆದರೂ ಸಹ ಸೈಬರ್ ವಂಚಕರಿಗೆ ಬಲಿಯಾಗುತ್ತಿದ್ದಾರೆ, ಸರ್ಕಾರ ಎಷ್ಟೇ ಜನರಲ್ಲಿ ಜಾಗೃತಿ ಮೂಡಿಸಿದರು ಸಹ ಸೈಬರ್ ವಂಚಕರು ಒಂದಲ್ಲ ಒಂದು ರೀತಿಯಲ್ಲಿ ಜನರನ್ನ ಯಾಮರಿಸಿ ಹಣವನ್ನ ದೋಚುತಿದ್ದಾರೆ ಹಾಗಾಗಿ ಪ್ರತಿಯೊಬ್ಬರೂ ಸೈಬರ್ ಕ್ರೈಂ ಬಗ್ಗೆ ಅವಶ್ಯಕವಾಗಿ ತಿಳಿದುಕೊಳ್ಳಬೇಕಾಗಿದೆ ಎಂದರು.

ಅನವಶ್ಯಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಗುಪ್ತ ಮಾಹಿತಿಗಳನ್ನ ಹಂಚಿಕೊಳ್ಳಬಾರದು, ನಕಲಿ ವೆಬ್ಸೈಟ್ಗಳ ಬಳಕೆಯ ನಿರ್ಬಂಧಿಸುವುದು, ಲೋನ್ ಅಪ್ಲಿಕೇಶನ್ ಗಳಂತ ಮೊಬೈಲ್ಗಳಲ್ಲಿ ಬಳಕೆ ನಿರ್ಭಂಧಿಸುವುದು, ಮೊಬೈಲ್ ಒಟಿಪಿಗಳನ್ನ ಬೇರೆಯವರಿಗೆ ಹಂಚಿಕೊಳ್ಳದಿರುವುದು ಇಂತಹ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸೈಬರ್ ಪ್ರಕರಣಗಳನ್ನ ಕಟ್ಟಿ ಹಾಕಬಹುದು ಎಂದು ತಿಳಿಸಿದರು.

ಚಿತ್ರದುರ್ಗ ಜಿಲ್ಲೆಯಲ್ಲೂ ಸಹ ಸಾಕಷ್ಟು ಮಾದಕ ವ್ಯಸನಗಳು ಸೇರಿದಂತೆ ಸೈಬರ್ ಕ್ರೈಂ ಪ್ರಕರಣಗಳು ಕೂಡ ದಾಖಲಾಗಿವೆ ಇವುಗಳ ಪ್ರಕರಣವನ್ನು ದಾಖಲಿಸಿಕೊಂಡು ಪ್ರಕರಣಗಳನ್ನು ಭೇದಿಸಿ ಸಾಮಾನ್ಯ ಜನರಿಗೆ ನ್ಯಾಯ ಒದಗಿಸಿಕೊಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿ. ಆರ್ ಹಳ್ಳಿಯ ದಾವಣಗೆರೆ ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಉಪನ್ಯಾಸಕರಾದ ಡಾ.ಆಲಿಶ್, ಡಾ.ವಿಜಯಕುಮಾರ್, ನೆಹರು ಇಲಾಖೆ ಸಹಾಯಕಾಧಿಕಾರಿ ಭರತ್, ಮಡಿಲು ಸಂಸ್ಥೆಯ ಅಧ್ಯಕ್ಷ ಕುಮಾರಸ್ವಾಮಿ, ಕಾರ್ಯದರ್ಶಿ ಆನಂದಪ್ಪ, ಖಜಾಂಚಿ ಪ್ರದೀಪ್, ಸಂಘಟನಾ ಕಾರ್ಯದರ್ಶಿ ದರ್ಶನ್, ನಿರ್ದೇಶಕರಾದ ದ್ಯಾಮ್ ಕುಮಾರ್, ಪ್ರವೀಣ್, ಹಾಗೂ ವಿಶ್ವವಿದ್ಯಾನಿಲಯದ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

About The Author

Namma Challakere Local News
error: Content is protected !!