ಚಳ್ಳಕೆರೆ:
ಭದ್ರಾ ಮೇಲ್ದಂಡೆ ಕಾಮಗಾರಿ ಈ ಭಾಗದ ರೈತಾಪಿ ವರ್ಗದ ಜೀವನಾಡಿ 1999ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್‌ಎಂ. ಕೃಷ್ಣರವರು 2500 ಕೋಟಿ ವೆಚ್ಚದಲ್ಲಿ ಸುಮಾರು ನಾಲ್ಕು ಜಿಲ್ಲೆಗಳಿಗೆ ಭದ್ರಾ ನೀರನ್ನು ಒದಗಿಸುವ ಯೋಜನೆಗೆ ಚಾಲನೆ ನೀಡಿದ್ದರು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ಸರಕಾರಿ ನೌಕರರ ಭವನದಲ್ಲಿ ಕರ್ನಾಟಕ ಮಾಧ್ಯಮ ಮಹಾಒಕ್ಕೂಟ ಹಮ್ಮಿಕೊಂಡಿದ್ದ ಭದ್ರಾ ಮೇಲ್ದಂಡೆ ಯೋಜನೆ ವಿಳಂಬ ಕುರಿತು ವಿಚಾರ ಸಂಕಿರಣ ಮತ್ತು 2025 ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು,. ಆದರೆ ಈ ಯೋಜನೆ ಕಾರ್ಯಗತವಾದಾಗ ಸಾವಿರಾರು ಎಕರೆ ಪ್ರದೇಶದ ನೀರಾವರಿಗೆ ಸಹಕಾರವಾಗಲಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡುವ ಮೂಲಕ ಯೋಜನೆಗೆ ಮತ್ತಷ್ಟು ವೇಗ ನೀಡಬೇಕಾಗಿದೆ ಎಂದರು.
ನಂತರ 2500 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳ್ಳುವ ಮೂಲಕ ಭದ್ರಾ ಮೇಲ್ದಂಡೆ ಕಾಮಗಾರಿ ಆರಂಭಗೊಂಡು ಸುಮಾರು 2024 ವರೆಗೂ ಕಾಮಗಾರಿ ನಡೆಯುತ್ತಿದೆ. ಮುಂದಿನ ದಿನಗಳ ತಾಲೂಕಿನ 51 ಕೆರೆಗಳಿಗೆ ಭದ್ರಾ ಮೇಲ್ದಂಡೆ ನೀರು ತುಂಬಿಸುವ ಮೂಲಕ ಈ ಭಾಗದ ಜಮೀನುಗಳಿಗೆ ಹಾಗೂ ಕುಡಿಯುವ ನೀರು ಒದಗಿಸುವ ಕಾರ್ಯ ಮಾಡಲಾಗುವುದು. 2022-23ನೇ ಸಾಲಿನ ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಘೋಷಿಸಿದಂತೆ 5300 ಕೋಟಿ ಹಾಗೂ ರಾಷ್ಟ್ರೀಯ ಯೋಜನೆಗೆ ಭದ್ರಾ ಮೇಲ್ದಂಡೆಯನ್ನು ಸೇರಿಸುವ ಘೋಷಣೆ ಮಾಡಿತ್ತು.
ಪ್ರಸ್ತುತ ಭದ್ರಾ ಮೇಲ್ದಂಡೆ ಯೋಜನೆ ಮಳೆಗಾಲದಲ್ಲಿ ಮಾತ್ರ ಕೆರೆಗಳಿಗೆ ನೀರು ಹರಿಸುವ ಯೋಜನೆಯಾಗಿದ್ದು, ಬರಗಾಲ ಪ್ರದೇಶವನ್ನು ನಿಭಾಯಿಸಲು ಜಿಲ್ಲೆಯ ಯಾವುದೇ ಕೆರೆಗಳು ಸಜ್ಜಾಗಿಲ್ಲ ಅತಿ ಮುಖ್ಯವಾಗಿ ಭದ್ರಾ ನೀರು ತುಂಬುವ ಎಲ್ಲಾ ಕೆರೆಗಳು ಜಾಲಿಕಳ್ಳಿಗಳಿಂದ ಆವೃತ್ತವಾಗಿದ್ದು ಅವುಗಳನ್ನು ಅಚ್ಚುಕಟ್ಟು ಮಾಡುವ ಕೆಲಸ ಅತಿ ಶೀಘ್ರದಲ್ಲೇ ನಡೆಯಬೇಕಿದೆ ಎಂದು ಆಗ್ರಹಿಸಿದರು.
ಭದ್ರಾ ನೀರು ಬರುವ ಕೆರೆಗಳು ನೀರು ತುಂಬಿಸಿಕೊಳ್ಳಲು ಸಜ್ಜಾಗಬೇಕು. ಸುಮಾರು ನಾಲ್ಕು ದಶಕಗಳ ಹೋರಾಟದ ಫಲವಾಗಿ 2025 ವರ್ಷದಲ್ಲಿ ಭದ್ರಾ ನೀರು ಕೆರೆಗಳನ್ನು ಸೇರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದ್ದು, 1990-99 ನೇ ಸಾಲಿನಲ್ಲಿ ಪತ್ರಕರ್ತರ ವೇದಿಕೆ ಮೂಲಕ ಭದ್ರಾ ಮೇಲ್ದಂಡೆ ಕಾಮಗಾರಿ ನಡೆಸಬೇಕು ಎಂದು ಹೋರಾಟಕ್ಕೆ ಮುನ್ನುಡಿ ಬರೆದಿದ್ದೆವು ಎಂದರು.
ಹಿರಿಯ ಪತ್ರಕರ್ತ ಹಾಗೂ ಸಾಮಾಜಿಕ ಹೋರಾಟಗಾರರಾದ ಚಳ್ಳಕೆರೆ ಬಸವರಾಜು ಮಾತನಾಡಿ,
ಬಯಲು ಸೀಮೆಗೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಯೋಜನೆ ಮೂಲಕ ಅಭಿವೃದ್ಧಿಪಡಿಸಿದ್ದಲ್ಲಿ ಬರಪೀಡಿತ ಪ್ರದೇಶ ನೀರಾವರಿ ಪ್ರದೇಶವಾಗಿ ಪರಿವರ್ತನೆ ಗೊಳ್ಳುತ್ತಿತ್ತು. ಆದರೆ, ಕೆಲ ರಾಜಕೀಯ ವ್ಯಕ್ತಿಗಳ ಇಚ್ಛಾಶಕ್ತಿಯ ಕೊರತೆಯಿಂದ ಇಂದಿಗೂ ಸಹ ಭದ್ರಾ ಮೇಲ್ದಂಡೆ ಕಾಮಗಾರಿ ಆಮೆ ಗತಿಯಲ್ಲಿ ನಡೆಯುತ್ತಿದೆ ಎಂದರು.
ಆದರೆ, ಹಣ ಬಿಡುಗಡೆ ಮಾತ್ರ ಆಗಲಿಲ್ಲ, ಹಣ ಬಿಡುಗಡೆಯಾಗಿದ್ದಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತಿತ್ತು. ಆದರೆ, ರಾಷ್ಟ್ರೀಯ ಯೋಜನೆಗೆ ಸೇರ್ಪಡೆಯ ನಂತರ ಕೇಂದ್ರ ಸರ್ಕಾರ ಶೇಕಡ 60ರಷ್ಟು ಹಣವನ್ನು ಕಾಮಗಾರಿಗೆ ನೀಡಬೇಕಿತ್ತು, ಇದ್ಯಾವುದೂ ಕೂಡ ನಡೆಯದ ಕಾರಣ ಭದ್ರಾ ಮೇಲ್ದಂಡೆ ಯೋಜನೆ ಆಮೆ ಗತಿಯಲ್ಲಿ ಸಾಗುತ್ತಿದೆ. 2020ರಲ್ಲಿ ರಾಜ್ಯ ಸರ್ಕಾರ 22 ಸಾವಿರ ಕೋಟಿ ವೆಚ್ಚದಲ್ಲಿ ಚಿತ್ರದುರ್ಗ, ತುಮಕೂರು, ದಾವಣಗೆರೆ, ಚಿಕ್ಕಮಂಗಳೂರು ಜಿಲ್ಲೆಗಳ ಸುಮಾರು 367 ಕೆರೆ ತುಂಬಿಸುವ ಕಾರ್ಯಕ್ಕೆ ಮುಂದಾಯಿತು. ಇದರಿಂದ 2.25 ಲಕ್ಷ ಎಕ್ಟೇರ್ ನೀರಾವರಿ ಯೋಜನೆಗೆ ಸೌಲಭ್ಯ ದೊರೆಯಲಿದೆ ತಾಲೂಕಿನ ಸುಮಾರು 13 ಸಾವಿರ ಹೆಕ್ಟರ್ ಪ್ರದೇಶ ನೀರಾವರಿ ಪ್ರದೇಶ ಆಗಲಿದೆ. ಈಗಾಗಲೇ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ತಾಲೂಕಿನ ಹಲವಾರು ಕೆರೆಗಳನ್ನು ತುಂಬಿಸುವ ಯೋಜನೆಗೆ ರಾಜ್ಯ ಸರ್ಕಾರ ಮುಂದಾಗಿದ್ದು ಇದಕ್ಕೆ ಕೇಂದ್ರ ಸರ್ಕಾರದ ನೆರವು ಸಹ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಮಾಧ್ಯಮ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ಕೆ ಶಿವಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ ಈಶ್ವರಪ್ಪ, ಜಿಲ್ಲಾಧ್ಯಕ್ಷ ಕರುನಾಡು ಜಿಯಾವುಲ್ಲ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿಟಿ ವೀರೇಶ್, ಕರ್ನಾಟಕ ಮಾಧ್ಯಮ ಮಹಾವಕ್ಕೂಟದ ಸಂಘಟನಾ ಕಾರ್ಯದರ್ಶಿ ಮೈಲನಹಳ್ಳಿ ತಿಪ್ಪೇಸ್ವಾಮಿ, ಎಚ್ ಲಕ್ಷ್ಮಣ್ ಟಿ ವಿಜಯ್ ಕುಮಾರ್ , ಪ್ರಗತಿಪರ ರೈತ ಡಾ.ಆರ್ ಎ. ದಯಾನಂದ, ವಿಷ್ಣುಮೂರ್ತಿ ರಾವ್, ಚಿದಾನಂದಮೂರ್ತಿ, ನಗರಸಭಾ ಸದಸ್ಯ ಎಂ ಜೆ ರಾಘವೇಂದ್ರ,, ವೀರಭದ್ರಪ್ಪ, ಬಿಟಿ ರಮೇಶ್ ಗೌಡ, ಕರ್ನಾಟಕ ಮಾಧ್ಯಮ ಮಹಾ ಒಕ್ಕೂಟದ ತಾಲೂಕ ಅಧ್ಯಕ್ಷ ಗಂಗಾಧರ ,ಕಾರ್ಯದರ್ಶಿ ಡಿ ನಿಂಗಪ್ಪ , ಖಜಾಂಚಿ ಡಿ ತಿಪ್ಪೇಸ್ವಾಮಿ, ಬಶೀರ್, ಉಮೇಶ್ಚಂದ್ರ ಬ್ಯಾನರ್ಜಿ, ಎಂ ಎನ್ ಮೃತ್ಯುಂಜಯ, ಮುಂತಾದವರು ಭಾಗವಹಿಸಿದ್ದರು