ಚಳ್ಳಕೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ
ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ
ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿಸುವ
ಕೆಲಸವನ್ನು ಇಲಾಖೆ ಅಧಿಕಾರಿಗಳು ಕೈಗೊಳ್ಳಬೇಕು
ಎಂದು ತಾಲೂಕು ಗ್ಯಾರಂಟಿ ಸಮಿತಿಗಳ ಅಧ್ಯಕ್ಷ ಗದ್ದಿಗೆ
ತಿಪ್ಪೇಸ್ವಾಮಿ ಸೂಚನೆ ನೀಡಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ
ಆಯೋಜಿಸಿದ್ದ ಗ್ಯಾರಂಟಿ ಸಮಿತಿ ಸದಸ್ಯರ ಹಾಗೂ
ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ
ಅವರು ಸರ್ಕಾರದ ಮಹತ್ವಕಾಂಕ್ಷೆಯ ಗ್ಯಾರಂಟಿ
ಯೋಜನೆಗಳು ಗ್ರಾಮೀಣ ಪ್ರದೇಶದ ಜನರಿಗೆ
ತಲುಪುವುದು ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಸರ್ಕಾರವು
ಗ್ಯಾರಂಟಿ ಯೋಜನೆ ಜಾರಿಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ
ಹಾಗೂ ತಾಲೂಕು ಮಟ್ಟದ ಸಮಿತಿಗಳನ್ನು ರಚಿಸಿದ್ದು
ಸಮಿತಿಯ ಸದಸ್ಯರಿಗೆ ಅಧಿಕಾರಿಗಳು ಸೂಕ್ತ ಮಾಹಿತಿ
ನೀಡಿದರೆ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ
ಫಲಾನುಭವಿಗಳನ್ನು ಭೇಟಿ ಮಾಡಿ ಅವರಿಗೆ ಗ್ಯಾರೆಂಟಿ
ಯೋಜನೆಗಳ ಲಾಭವನ್ನು ಕೊಡಿಸಲು
ಅನುಕೂಲವಾಗುತ್ತದೆ ಕೇವಲ ಸಭೆಗಳಿಗೆ ಮಾಹಿತಿ
ನೀಡಿದರೆ ಸಾಲದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ
ಯೋಜನೆಯಿಂದ ವಂಚಿತರಾಗಿರುವವರು ಪಟ್ಟಿಯನ್ನು
ಸಮಿತಿಯ ಸದಸ್ಯರಿಗೆ ನೀಡಬೇಕು ಹಾಗೂ ಅಧಿಕಾರಿಗಳು
ಗ್ಯಾರಂಟಿ ಸಮಿತಿಯ ಸದಸ್ಯರ ಪರಿಚಯಿಸಿದರೆ
ಸಾರ್ವಜನಿಕರಿಗೆ ಇದರ ಮಾಹಿತಿ ದೊರೆತು ಸದಸ್ಯರ
ಮೂಲಕ ತಮ್ಮ ಹಕ್ಕನ್ನು ಪಡೆಯಲು
ಅನುಕೂಲವಾಗುತ್ತದೆ ಈ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು
ಕಾರ್ಯಾನ್ಮುಖರಾಗಬೇಕು ಎಂದು ತಿಳಿಸಿದರು.
ಗ್ಯಾರಂಟಿ ಸಮಿತಿಯ ಜಿಲ್ಲಾಧ್ಯಕ್ಷ ಶಿವಣ್ಣ ಮಾತನಾಡಿ
ವಿರೋಧ ಪಕ್ಷಗಳು ಗ್ರಾಮೀಣ ಪ್ರದೇಶಗಳ ಜನರಿಗೆ
ಗ್ಯಾರಂಟಿ ಯೋಜನೆಗಳು ತಲುಪುತ್ತಿಲ್ಲ ಎಂಬ
ವದಂತಿಯನ್ನು ಹಬ್ಬಿಸುತ್ತಿದ್ದಾರೆ ಸರ್ಕಾರ ಗ್ಯಾರಂಟಿ
ಯೋಜನೆಗಳಿಗೆ 50 ರಿಂದ 60 ಸಾವಿರ ಕೋಟಿ ಹಣವನ್ನು
ಮೀಸಲಿರಿಸಿದೆ ಗ್ರಾಮ ಮಟ್ಟದ ಗ್ಯಾರಂಟಿ ಯೋಜನೆ
ಸಮಿತಿ ಸದಸ್ಯರು ಪ್ರತಿಯೊಬ್ಬ ಫಲಾನುಭವಿಗಳಿಗೆ
ಸರ್ಕಾರದ ಯೋಜನೆಗಳನ್ನು ತಿಳಿಸಿ ಹೇಳುವ ಮೂಲಕ
ಪ್ರಚಾರ ಮಾಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಗ್ಯಾರಂಟಿ ಸಮಿತಿಯ ಸದಸ್ಯರು ಆಹಾರ
ಇಲಾಖೆಯ ಅನ್ನಭಾಗ್ಯ ಯೋಜನೆ ಬಗ್ಗೆ ಅಸಮಾಧಾನ
ವ್ಯಕ್ತಪಡಿಸಿ ನ್ಯಾಯಬೆಲೆ ಅಂಗಡಿ ಮಾಲೀಕರು
ಸಮರ್ಪಕವಾಗಿ ಪಡಿತರ ವಿತರಣೆ ಮಾಡುತ್ತಿಲ್ಲ ಹಾಗೂ
ಆಹಾರ ಇಲಾಖೆಯ ಪಡಿತರ ಚೀಟಿಯ ನೀಡುವಿಕೆಯಲ್ಲಿ
ಅಸಮರ್ಪಕ ನಿರ್ವಹಣೆಯಿಂದ ಇತರೆ ಗ್ಯಾರಂಟಿ
ಯೋಜನೆಗಳಿಗೆ ತೊಂದರೆ ಉಂಟಾಗುತ್ತಿದೆ ಅಲ್ಲದೆ ಶಕ್ತಿ
ಯೋಜನೆ ಅಡಿ ಸಾರಿಗೆ ಬಸ್ಸುಗಳು ಗ್ರಾಮೀಣ
ಪ್ರದೇಶಗಳಿಗೆ ಬಾರದೆ ವಿದ್ಯಾರ್ಥಿಗಳಿಗೆ ತೊಂದರೆ
ಅನುಭವಿಸುತ್ತಿದ್ದಾರೆ ಮಹಿಳೆಯರಿಗೆ ಉಚಿತ ಪ್ರಯಾ
ಇರುವ ಕಾರಣ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ
ಸಮರ್ಪಕವಾಗಿ ಪಡಿತರ ವಿತರಣೆ ಮಾಡುತ್ತಿಲ್ಲ ಹಾಗೂ
ಆಹಾರ ಇಲಾಖೆಯ ಪಡಿತರ ಚೀಟಿಯ ನೀಡುವಿಕೆಯಲ್ಲಿ
ಅಸಮರ್ಪಕ ನಿರ್ವಹಣೆಯಿಂದ ಇತರೆ ಗ್ಯಾರಂಟಿ
ಯೋಜನೆಗಳಿಗೆ ತೊಂದರೆ ಉಂಟಾಗುತ್ತಿದೆ ಅಲ್ಲದೆ ಶಕ್ತಿ
ಯೋಜನೆ ಅಡಿ ಸಾರಿಗೆ ಬಸ್ಸುಗಳು ಗ್ರಾಮೀಣ
ಪ್ರದೇಶಗಳಿಗೆ ಬಾರದೆ ವಿದ್ಯಾರ್ಥಿಗಳಿಗೆ ತೊಂದರೆ
ಅನುಭವಿಸುತ್ತಿದ್ದಾರೆ ಮಹಿಳೆಯರಿಗೆ ಉಚಿತ ಪ್ರಯಾಣ
ಇರುವ ಕಾರಣ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ
ಬಸ್ಸುಗಳನ್ನು ಚಾಲಕರು ಮತ್ತು ನಿರ್ವಾಹಕರು ನಿಲ್ಲಿಸದೆ
ಪ್ರಯಾಣಿಸುತ್ತಿರುವುದರಿಂದ ಅನಾನುಕೂಲ
ಉಂಟಾಗುತ್ತಿದೆ ಪರಶುರಾಂಪುರ ಹೋಬಳಿ ಸೇರಿದಂತೆ
ಚಿತ್ರದುರ್ಗ ಚಳ್ಳಕೆರೆ ಮಾರ್ಗವಾಗಿ ಬಸ್ಸುಗಳು ಮುಂಜಾನೆ
7ರಿಂದ 9ರವರೆಗೆ ನಿರಂತರವಾಗಿ ಸಾರಿಗೆ ಸೌಲಭ್ಯ
ಒದಗಿಸಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಈ
ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು
ಒತ್ತಾಯಿಸಿದರು.
ಸಭೆಯಲ್ಲಿ ಅನ್ನ ಭಾಗ್ಯ ಗೃಹ ಜ್ಯೋತಿ ಗೃಹಲಕ್ಷ್ಮಿ ಶಕ್ತಿ
ಯೋಜನೆ ಹಾಗೂ ಯುವ ನಿಧಿ ಯೋಜನೆಗಳ ಬಗ್ಗೆ
ಅಧಿಕಾರಿಗಳಿಂದ ಮಾಹಿತಿ ಪಡೆದು ಹೆಚ್ಚಿನ
ಪರಿಣಾಮಕಾರಿಯಾಗಿ ಯೋಜನೆಗಳು ಜಾರಿಗೆ ತರುವಂತೆ
ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಗ್ಯಾರೆಂಟಿ ಸಮಿತಿಯ ಜಿಲ್ಲಾಧ್ಯಕ್ಷ
ಶಿವಣ್ಣ ತಾಲೂಕು ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ ತಾಲೂಕು
ಪಂಚಾಯಿತಿ ಇಓ ಶಶಿಧರ್ ಸೇರಿದಂತೆ ಗ್ಯಾರೆಂಟಿ
ಸಮಿತಿಯ ಸದಸ್ಯರು ಹಾಗೂ ವಿವಿಧ ಇಲಾಖೆಗಳ
ಅಧಿಕಾರಿಗಳು ಪಾಲ್ಗೊಂಡಿದ್ದರು.