ಚಳ್ಳಕೆರೆ :
ಚಳ್ಳಕೆರೆ: ಕಲ್ಲು ತುಂಬಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಓರ್ವ
ಸಾವು
ಟ್ರ್ಯಾಕ್ಟರ್‌ನ ಟೈರ್ ಸ್ಟೋಟಗೊಂಡು ಮುಗಿಚಿ ಬಿದ್ದ ಪರಿಣಾಮ
ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರಿಗೆ ಗಂಭೀರ
ಗಾಯಗಳಾಗಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.
ಚಳ್ಳಕೆರೆ
ತಾಲ್ಲೂಕಿನ ಮೈಲನಹಳ್ಳಿ ಸಮೀಪ ಮುಖ್ಯರಸ್ತೆಯಲ್ಲಿ ಈ ಘಟನೆ
ನಡೆದಿದ್ದು ಟ್ಯಾಕ್ಟರ್ ನಲ್ಲಿ ಕಲ್ಲು ಬಂಡೆಗಳನ್ನು ತುಂಬಿಕೊಂಡು
ಚಳ್ಳಕೆರೆ ಕಡೆಗೆ ಸಾಗಿಸುತ್ತಿರುವಾಗ ಟ್ರ್ಯಾಕ್ಟರ್ ಟೈರ್
ಸ್ಪೋಟಗೊಂಡು ಟ್ರ್ಯಾಕ್ಟರ್ ಉರುಳಿ ಬಿದ್ದ ಕಾರಣ ರೇಣುಕಾಪುರ
ಗ್ರಾಮದ ಶಂಕರ್ ನಾಗ್( 41) ಮೃತಪಟ್ಟಿದ್ದಾನೆ.