ಚಳ್ಳಕೆರೆ :

ಹೊಸದುರ್ಗ: ಪ್ಯಾಸೆಂಜರ್ ಆಟೋ ಪಲ್ಟಿ, 9ಜನರಿಗೆ
ಗಾಯ
ಹೊಸದುರ್ಗದ ಹಾಲು ರಾಮೇಶ್ವರದ ಬಳಿ ಪ್ಯಾಸೆಂಜರ್
ಆಟೋವೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದು
9 ಜನರು ಗಾಯಗೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ.

ಗೂಳಿಹಟ್ಟಿಯಿಂದ ಹೊಸದುರ್ಗದ ಕಡೆಗೆ ತೆರಳುವ ಮಾರ್ಗ
ಮಧ್ಯದಲ್ಲಿ ಈ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್
ಪ್ರಯಾಣಿಕರು ಪ್ರಾಣಾಪಯಾದಿಂದ ಪಾರಾಗಿದ್ದಾರೆ.

ಪ್ಯಾಸೆಂಜರ್
ಆಟೋ ಚಾಲಕನ ಅತಿವೇಗ ಮತ್ತು ಅಜಾಗರೂಕತೆಯೇ
ಅಪಘಾತಕ್ಕೆ ಕಾರಣವಾಗಿದ್ದು, ಹೊಸದುರ್ಗ ಪೊಲೀಸರು ಸ್ಥಳಕ್ಕೆ
ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

About The Author

Namma Challakere Local News
error: Content is protected !!