ಚಳ್ಳಕೆರೆ :
ಚಿತ್ರದುರ್ಗ: ಚಿತ್ರ ಅದ್ಭುತವಾಗಿ ಮೂಡಿ ಬಂದಿದೆ
ಸಂಜು ವೆಡ್ಸ್ ಗೀತಾ ಭಾಗ-2 ಸಿನಿಮಾರಂಗದಲ್ಲಿಯೇ ಅದ್ಭುತವಾದ
ಸದ್ದು ಮಾಡಿದೆ.
ಚಿತ್ರದಲ್ಲಿ ಅತ್ಯುತ್ತಮ ಫೋಟೋಗ್ರಫಿಯಿದೆ ಎಂದು
ಚಿತ್ರ ನಿರ್ಮಾಪಕ ನಗರಸಭೆ ಮಾಜಿ ಅಧ್ಯಕ್ಷ ಬಿ. ಕಾಂತರಾಜ್
ಹೇಳಿದರು.
ಚಿತ್ರದುರ್ಗದಲ್ಲಿ ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ
ಮಾತಾಡಿ, ಸಂಜು ವೆಡ್ಸ್ ಗೀತಾದಲ್ಲಿ ಶ್ರೀನಗರ ಕಿಟ್ಟಿ ಹಾಗೂ ರಮ್ಯ
ಅವರು ಅಭಿನಯಿಸಿದ್ದರು. ಭಾಗ 2 ರಲ್ಲಿ ಶ್ರೀನಗರ ಕಿಟ್ಟಿ ಅವರ
ಜೊತೆಗೆ ರಚಿತಾ ರಾಮ್ ಅಭಿನಯಿಸಿದ್ದಾರೆ. ಚಿತ್ರ ಯಶಸ್ಸು ಸಾಧಿಸಿ
ಲಾಭ ತಂದು ಕೊಡಲಿ ಎಂದು ಹಾರೈಸಿದರು.