ಚಳ್ಳಕೆರೆ :
ಚಳ್ಳಕೆರೆ: ನಗರಕ್ಕೆ ಆಗಮಿಸಿದ ಸನ್ನತ್ತಿ ಪಂಚಶೀಲ
ಪಾದಯಾತ್ರೆ
ವಿಶ್ವದ ಶಾಂತಿಗಾಗಿ ಸನ್ನತ್ತಿಯ ಸಮಗ್ರ ಅಭಿವೃದ್ಧಿಗಾಗಿ ಹಾಗೂ
ಬೌದ್ಧ ಸಮುದಾಯದ ವಿವಿಧ ಬೇಡಿಕೆಗಳ ಈಡೇರಿಕೆಗೆ
ಒತ್ತಾಯಿಸಿ ಬೌದ್ಧ ಐತಿಹಾಸಿಕ ಕ್ಷೇತ್ರ ಸನ್ನತ್ತಿಯಿಂದ ಬೆಂಗಳೂರು
ವಿಧಾನಸೌಧದ ವರೆಗೆ ನಡೆಸುತ್ತಿರುವ ಪಾದಯಾತ್ರೆ ಇಂದು
ಚಳ್ಳಕೆರೆ ನಗರಕ್ಕೆ ಆಗಮಿಸಿತು.
ಕರ್ನಾಟಕ ಬಿಕ್ಕು ಹಾಗೂ ಬಿಕ್ಕಣಿ
ಸಂಘ, ಸನ್ನತಿ ಪಂಚಶೀಲ ಪಾದಯಾತ್ರೆ ಸಂಘಟನಾ ಸಮಿತಿ,
ರಾಜ್ಯದ ಸಮಸ್ತ ದಲಿತ ಸಂಘಟನೆಗಳು. ಎಲ್ಲಾ ಬೌದ್ಧ ಸಂಘ
ಸಂಸ್ಥೆಗಳು ಮತ್ತು ಬುದ್ಧ ವಿಹಾರ ಸಮಿತಿಗಳು ಸನ್ನತ್ತಿ ಪಂಚಶೀಲ
ಪಾದಯಾತ್ರೆಯನ್ನು ಹಮ್ಮಿಕೊಂಡಿವೆ.
ನಂತರ ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.