ಚಳ್ಳಕೆರೆ : ನಗರದ ತರಕಾರಿ ಮಾರುಕಟ್ಟೆಯಲ್ಲಿ ಅಯ್ಯಪ್ಪಸ್ವಾಮಿ ಪಡಿಪೂಜೆ……
ನಗರದ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ವತಿಯಿಂದ ಪಡಿಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಾಯಿತು.
ಅಯ್ಯಪ್ಪ ಸ್ವಾಮಿ ಪಡಿ ಪೂಜಾ ಮಹೋತ್ಸವ ವನ್ನ ಸ್ವಾಮಿ ಮಾಲೆ ಧರಿಸಿ ಭಕ್ತರು ಕಟ್ಟು ನೀಟ್ಟಿನ ಪೂಜೆ ಮಾಡಲಾಗುತ್ತಿದೆ.
ಸುಮಾರು 30 ವರ್ಷಗಳಿಂದ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಅಯ್ಯಪ್ಪ ಸ್ವಾಮಿ ಈ ಪಡಿ ಪೂಜೆ ಮಾಡಿಕೊಂಡು ಬರಲಾಗುತ್ತಿದ್ದು.
ನಗರದ ತರಕಾರಿ ಮಾರುಕಟ್ಟೆಯಲ್ಲಿ ಪಡಿಪೂಜೆಯನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತಿದೆ
ಗುರುಸ್ವಾಮಿಗಳಾದ ರಂಘಣ್ಣಸ್ವಾಮಿ ಹಾಗೂ ಕುಂಭಿ ಸ್ವಾಮಿ ನೇತೃತ್ವದಲ್ಲಿ ಈ ಪೂಜಾ ಕಾರ್ಯವನ್ನು ಹಮ್ಮಿಕೊಂಡು ಬರುತ್ತಿದ್ದು. ಸುಮಾರು ಮೂರು ದಿನಗಳಿಂದ ವಿಶೇಷವಾಗಿ ಈ ಪಡಿ ಪೂಜೆಯನ್ನು ಆಚರಣೆ ಮಾಡಲಾಗುತ್ತದೆ.
ಬಾಳೆ ದಿಂಡಿನಲ್ಲಿ 18 ಮೆಟ್ಟಿಲುಗಳನ್ನು ನಿರ್ಮಿಸಿ ಪ್ರತಿ ಮೆಟ್ಟಿಲಿಗೂ ಕರ್ಪೂರ ಹಚ್ಚಿ ಮನುಷ್ಯನ ಕಷ್ಟಗಳ ಕರ್ಪೂರದಂತೆ ಕರಗಲಿ ಉತ್ತಮ ಮಳೆಬೆಳೆಯಾಗಿ ಮಾನವ ಹಾಗೂ ಪ್ರಾಣಿ ಸಂಕುಲ ರೋಗರೂಜಿನ ಬಾರದಿರಲಿ ಎಂದು ಸ್ವಾಮಿ ಅಯ್ಯಪ್ಪನಲ್ಲಿ ಭಕ್ತಿ ಮೊರೆಯಿಡುತ್ತಾರೆ
ಅಯ್ಯಪ್ಪ ಸ್ವಾಮಿ ಕುರಿತು ನಿರಂತರವಾಗಿ ಭಜನೆ ವಿಶೇಷ ಪೂಜೆ ನಡೆಯುತ್ತಿದ್ದು ಭಕ್ತರಿಗೆ ಪ್ರಸಾದ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.