ಚಳ್ಳಕೆರೆ :
ಚಿತ್ರದುರ್ಗ: ಓಟ್ ಬ್ಯಾಂಕ್ ಗೆ ಅಂಬೇಡ್ಕರ್ ಎನ್ನುತ್ತಾರೆ
ಅಂಬೇಡ್ಕರ್ ಮೃತರಾದಾಗ ಅವರ ದೇಹ ತರಲು ವಿಮಾನದ
ಚಾರ್ಜ್ 5ಸಾವಿರ ಕೊಡಲಿಲ್ಲ
. ಇದರ ಜೊತೆಗೆ ಮುಂಬೈನಲ್ಲಿ ಅವರ
ಸಮಾಧಿ ಸ್ಮಾರಕ ಮಾಡದೆ ಕಾಂಗ್ರೆಸ್ ಅವಮಾನ ಮಾಡಿದೆ ಎಂದು
ಸಂಸದ ಗೋವಿಂದ ಕಾರಜೋಳ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.
ಚಿತ್ರದುರ್ಗದಲ್ಲಿ ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿ,
ಘಟಾರದ ಬದಿಯಲ್ಲಿ ಸಮಾಧಿಗೆ ಜಾಗ ಕೊಟ್ಟಿದ್ದು, ಜನರು
ಘಟಾರದಲ್ಲಿಯೇ ನಿಂತು ನೋಡುವ ಸ್ಥಿತಿ ಇದೆ. ಇಂತಹ ಅವಮಾನ
ಮಾಡಿದ ನೀವು ಓಟ್ ಬ್ಯಾಂಕ್ ಗೆ ಅಂಬೇಡ್ಕರ್ ಎನ್ನುತ್ತೀರ ನಾಚಿಕೆ
ಆಗಲ್ವ ಎಂದರು.