ಚಳ್ಳಕೆರೆ :
ನಗರದ ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಅಯ್ಯಪ್ಪ ಸ್ವಾಮಿಗಳ ಪಡಿ ಪೂಜೆ ಕಾರ್ಯಕ್ರಮ ಭಕ್ತಿಪೂರ್ವಕವಾಗಿ ಜರುಗಿತು.
ಗುರುಸ್ವಾಮಿಗಳಾದ ಜಗ್ಗುಸ್ವಾಮಿ ಮತ್ತು ರೇಣುಕಾಸ್ವಾಮಿ ಶಿಷ್ಯವೃಂದ
ಹರಿಹರಸುತ ಸೇವಾಸಮಿತಿ, ಚಳ್ಳಕೆರೆ
ಹಾಗೂ ಸಮಸ್ತ ಅಯ್ಯಪ್ಪಸ್ವಾಮಿಯ ಭಕ್ತರ ಸಂಯುಕ್ತಾಶ್ರಯದಲ್ಲಿ
4ನೇ ವರ್ಷದ ಅಯ್ಯಪ್ಪಸ್ವಾಮಿಯ ಪಡಿಪೂಜಾಮಹೋತ್ಸವ
ಇದೇ ಜನವರಿ 2 ನೇ ಗುರುವಾರದಂದು ನಡೆಯಿತು.
ಪ್ರಪ್ರಥಮ ಬಾರಿಗೆ ಅಯ್ಯಪ್ಪಸ್ವಾಮಿಯ ಹಾಡುಗಳಿಂದಲೇ
ದೇಶ ವಿದೇಶದಲ್ಲಿ ಪ್ರಖ್ಯಾತ ಪಡೆದ ಹೆಸರಾಂತಗಾಯಕ
ಶ್ರೀಮುಣಿ ರಾಜು ಮತ್ತು ಅಭಿಷೇಕ್ ರಾಜು
ಮತ್ತು ತಂಡದಿಂದ ವಿಶೇಷ ಗಾನಾಮೃತ ಹಾಗೂ ಭಜನಾ ಕಾರ್ಯಕ್ರಮವನ್ನು ಹಾಗೂ
ರಾತ್ರಿ 8-00 ಘಂಟೆಯಿಂದ “ಮಹಾ ಅನ್ನಸಂತರ್ಪಣೆ
ಎಲ್ಲಾ ಅಯ್ಯಪ್ಪಸ್ವಾಮಿಯ ಭಕ್ತಾಧಿಗಳು ಈ ವಿಶೇಷ ಪೂಜೆಗಳಿಗೆ ಆಗಮಿಸಿ ಶ್ರೀ
ಅಯ್ಯಪ್ಪಸ್ವಾಮಿಯ ಕೃಪೆಗೆ ಪಾತ್ರರಾದರು.