2025 ರ ನೂತನ ಹೊಸ ವರ್ಷಾಚರಣೆಗೆ ಹೂವು ಗುಚ್ಚ ಬದಲಿಗೆ ವಿವಿಧ ಬಗೆಯ ಹೂವು ಕುಂಡಗಳನ್ನು ನೀಡಿ ಶುಭಾಷಯ ವಿನಿಮಯ ಮಾಡಿಕೊಂಡ ಅಧಿಕಾರಿ ವರ್ಗ ಹಾಗೂ ಅಭಿಮಾನ ಬಳಗ : ದಾವಣಗೆರೆ ಜಿಲ್ಲಾಧಿಕಾರಿ ಕಛೇರಿ ಸಾಕ್ಷಿ
ಚಳ್ಳಕೆರೆ : ಹೊಸ ವರ್ಷ ಹಾಗೂ ಜನ್ಮ ದಿನಾಚರಣೆಗಳ ಸಂಧರ್ಭದಲ್ಲಿ ದೊಡ್ಡ ದೊಡ್ಡ ಹೂವು ಗುಚ್ಚಗಳನ್ನು ಕೊಡುವುದು, ಹಾರಗಳನ್ನು ಹಾಕುವುದು ವಾಡಿಕೆ, ಆದರೆ ದಾವಣಗೆರೆ ಜಿಲ್ಲಾಧಿಕಾರಿ ಕಛೇರಿಯಲ್ಲಿ ಮಾತ್ರ ಯಾವುದೇ ಹೂವು ಗುಚ್ಚ ನೀಡದೆ ವಿವಿಧ ಬಗೆಯ ಹೂವು ಕುಂಡಗಳನ್ನು ನೀಡಿ ಶುಭಾಷಯ ಕೋರಿದ ಅಧಿಕಾರಿಗಳ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿವೆ.
ಹೊಸ ವರ್ಷಾಚರಣೆ, ಹುಟ್ಟುಹಬ್ಬ, ಹಾಗೂ ಇತರೆ ವಿವಿಧ ಸಂಧರ್ಭಗಳಲ್ಲಿ ಜನಪ್ರತಿನಿಧಿಗಳಿಗೆ ಮೇಲಾಧಿಕಾರಿಗಳಿಗೆ ತಮ್ಮ ತಮ್ಮ
ಕಛೇರಿಗಳಲ್ಲಿ ಕೇವಲ ಹಾರ ತುರಾಯಿ ,ದೊಡ್ಡ ದೊಡ್ಡ ಹೂವು ಗುಚ್ಚಗಳನ್ನು ನೀಡಿ ಶುಭಾಷಯಗಳು ಕೋರಿರುವುದು ನೋಡಿದ್ದೆವೆ ಇನ್ನೂ ಜನಪ್ರತಿನಿಧಿಗಳಿಗೆ ದುಬಾರಿ ಉಡುಗೋರಿಗಳನ್ನು ನೆಚ್ಚಿನ ಅಭಿಮಾನಿಗಳು, ಕೋಡುವುದು ನೋಡಿದ್ದೇವೆ ಆದರೆ ಇದಕ್ಕೆಲ್ಲ ವಿರುದ್ಧವಾಗಿ ಜನಪ್ರತಿನಿಧಿಗಳಿಗೆ, ಮೇಲಾಧಿಕಾರಿಗಳಿಗೆ ಅಭಿಮಾನದಿಂದ ನೀಡಿದ ಕೊಡುಗೆ ಹಾಗೂ ಶುಭಾಷಯಗಳ ಕೋರಿದ ಸವಿ ನೆನಪು ಸದಾ ನೆನಪಿನಲ್ಲಿ ಇಡಬೇಕಾದರೆ ದೊಡ್ಡ ದೊಡ್ಡ ಉಡುಗೊರೆ ಹಾಗೂ ಹೂವು ಗುಚ್ಚಗಳನ್ನು ಕೊಡುವ ಬದಲು, ಹೂವು ಕುಂಡಗಳನ್ನು ನೀಡಿದರೆ ಪ್ರತಿದಿನ ಗಿಡಕ್ಕೆ ನೀರೆರೆಯುವ ಮೂಲಕ ನೀವು ನೀಡಿದ ಅಭಿಮಾನ ಸಸಿಯ ರೂಪದಲ್ಲಿ ಬೆಳೆಯುತ್ತದೆ ಆದ್ದರಿಂದ ಇಂತಹ ಅಪರೂಪದ ದೃಶ್ಯ ಜನವರಿ 1, 2025 ರಂದು
ದಾವಣಗೆರೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕಂಡು ಬಂದಿದೆ.
ಪ್ರತಿ ಸನ್ನಿವೇಶದಲ್ಲಿ ಮೇಲಾಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಶುಭಾಷಯ ವಿನಿಮಯ ಮಾಡುವ ಅಧಿಕಾರಿಗಳು ಈ ಪದ್ದತಿಯಲ್ಲಿ ಹೂವು ಗುಚ್ಚ ನೀಡುವ ಬದಲು ಹೂವು ಕುಂಡಗಳನ್ನು ನೀಡುವುದರ ಮೂಲಕ ಮಾದರಿಯಾಗಬೇಕಾಗುತ್ತದೆ.