ಚಳ್ಳಕೆರೆ : 207 ನೆ ವರ್ಷದ ಭೀಮಾ ಕೋರೆಗಾಂವ್ ವಿಜಯೋತ್ಸವ ದಿನದ ಅಂಗವಾಗಿ ಸಾಮಾಜಿಕ ಸಂಘರ್ಷ ಸಮಿತಿ ಹಾಗೂ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಡಾಕ್ಟರ್ ಅಂಬೇಡ್ಕರ್ ರವರ ಪುತ್ಥಳಿ ಗೆ ಮಾಲಾರ್ಪಣೆ ಮಾಡುವ ಮುಖಾಂತರ ಸರಳವಾಗಿ ಆಚರಿಸಲಾಯಿತು.
ದಲಿತ ಮುಖಂಡ ಎಂ.ಶಿವಮೂರ್ತಿ ಮಾತನಾಡಿ,
ಕೋರೆಂಗಾವ್ ವಿಜಯೋತ್ಸವ ಅಂಗವಾಗಿ ಇಂದು ನಗರದ ಅಂಬೇಡ್ಕರ್ ವೃತ್ತದಲ್ಲಿ ಸರಳವಾಗಿ ಅಂಬೇಡ್ಕರ್ ಪುತ್ಥಳಿಗೆ ಹೂವುಮಾಲೆ ಅರ್ಪಿಸಲಾಗಿದೆ, ದಿವಂಗತ ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ನಿಧನರಾದ ಶೋಕಚಾರಣೆ ಹಿನ್ನೆಲೆಯಲ್ಲಿ ಇಂದು ಕೋರೆಂಗ ವಿಜಯೋತ್ಸವವನ್ನು ಅತಿ ಸರಳವಾಗಿ ಆಚರಿಸುತ್ತಿದ್ದೇವೆ ತಾಲೂಕಿನ ಎಲ್ಲಾ ಅಂಬೇಡ್ಕರ್ ಅನುಯಾಯಿಗಳು ಈ ಕೋರೆಂಗಾವ್ ವಿಜಯೋತ್ಸವ ಆಚರಣೆ ಮಾಡಬೇಕಾಗುತ್ತದೆ
ಎಂದರು.
ಈ ಸಂದರ್ಭದಲ್ಲಿ ಸಾಮಾಜಿಕ ಸಂಘರ್ಷ ಸಮಿತಿಯ ಅಧ್ಯಕ್ಷರಾದ ಉಮೇಶ್ ಚಂದ್ರ ಬ್ಯಾನರ್ಜಿ,ಹಿರಿಯ ದಲಿತ ಮುಖಂಡರಾದ ಎಂ ಶಿವಮೂರ್ತಿ,ಪತ್ರಕರ್ತರಾದ ದ್ಯಾಮಯ್ಯ ಮೈತ್ರಿ, ಎಎಪಿ ತಾಲ್ಲೂಕು ಅಧ್ಯಕ್ಷ ಪಾಪಣ್ಣ,ದಲಿತ ಮುಖಂಡರಾದ ರವಿ ಕುಮಾರ್,ಮಂಜಣ್ಣ, ಜಗ್ಗಣ್ಣ, ಪೆನ್ನೇಶ್, ಸಹ ಸಂಪಾದಕರಾದ ರೇವಣಸಿದ್ದಪ್ಪ, ಪತ್ರಕರ್ತರಾದ ಮೃತ್ಯುಂಜಯ, ವೀರೇಶ್ ಹಳೇಟೌನ್ ಹಾಗೂ ದಲಿತ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿರಿದ್ದರು.